For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ-ಝೀವಾ ಬೈಕ್ ರೈಡ್ ವೀಡಿಯೋ ಸೆರೆ ಹಿಡಿದ ಸಾಕ್ಷಿ ಧೋನಿ

Sakshi Dhoni captures Dhoni taking Ziva on a bike ride

ನವದೆಹಲಿ, ಜೂನ್ 3: ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿಗೆ ಬೈಕ್-ಕಾರ್‌ಗಳೆಂದರೆ ಇಷ್ಟ ಅಂತ ಹೆಚ್ಚಿನವರಿಗೆ ಗೊತ್ತಿರಬಹುದು. ಧೋನಿ ತನ್ನ ಪುತ್ರಿ ಝೀವಾಳನ್ನು ಬೈಕ್‌ ರೈಡಿಂಗ್‌ಗೆ ಕರೆದೊಯ್ದಿರುವ ವೀಡಿಯೋವನ್ನು ಸೆರೆ ಹಿಡಿದಿರುವ ಧೋನಿ ಪತ್ನಿ ಸಾಕ್ಷಿ ಧೋನಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಾಕ್ಷಿ ಸೆರೆಹಿಡಿದಿರುವ ಈ ವೀಡಿಯೋವನ್ನು ಐಪಿಎಲ್ ಫ್ರಾಂಚೈಸಿ, ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ಕ್ರೇಝಿ ಮಿಂಚು ಮತ್ತು ಖುಷಿ ಜೊತೆಯಲ್ಲಿರುವಾಗ,' ಎಂದು ವೀಡಿಯೋ ಜೊತೆಗೆ ಸಾಲನ್ನು ಬರೆದುಕೊಳ್ಳಲಾಗಿದೆ.

ಕೊರೊನಾವೈರಸ್‌ನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ನಿಲುಗಡೆಯಾಗಿದ್ದರಿಂದ ಬಹುತೇಕ ಕ್ರಿಕೆಟ್‌ ಸ್ಟಾರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಧೋನಿ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇನೂ ಕಾಣಿಸಿಕೊಳ್ಳುತ್ತಿಲ್ಲ, ಆಗೀಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಕ್ಷಿ, ಈ ವೀಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.

ಧೋನಿ ಕ್ರಿಕೆಟ್‌ ಪಂದ್ಯಗಳನ್ನಾಡದೆ ಹತ್ತಿರ ವರ್ಷವೇ ಆಗುತ್ತಿದೆ. ಸಿಎಸ್‌ಕೆಯಲ್ಲಿ ಧೋನಿಯ ಸಹ ಆಟಗಾರರಾಗಿರುವ ಸುರೇಶ್ ರೈನಾ, 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಕೂಲ್ ಕ್ಯಾಪ್ಟನ್ ಧೋನಿ ವಿಭಿನ್ನವಾಗಿ ತಯಾರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

Story first published: Thursday, June 4, 2020, 10:42 [IST]
Other articles published on Jun 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+