Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ನಿವೃತ್ತಿಗೆ ಭಾವನಾತ್ಮಕ ಸಂದೇಶ ಬರೆದ ಸಾಕ್ಷಿ ಧೋನಿ

Sakshi Dhoni emotionally reacted on MS Dhonis retirement

ನವದೆಹಲಿ, ಆಗಸ್ಟ್ 17: ಎಂಎಸ್ ಧೋನಿಯ ಅಂತಾರಾಷ್ಟ್ರೀಯ ನಿವೃತ್ತಿ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಅನೇಕ ವಿದೇಶಿ ಆಟಗಾರರೂ ಧೋನಿಯ ನಿವೃತ್ತಿಗೆ ಆಘಾತ ವ್ಯಕ್ತಪಡಿಸಿದ್ದಾರೆ, ಮುನ್ನಡೆಯಲಿರುವ ಧೋನಿಗೆ ಶುಭ ಹಾರೈಸಿದ್ದಾರೆ. ಈ ಮಧ್ಯೆ ಧೋನಿ ಪತ್ನಿ ಸಾಕ್ಷಿ ಧೋನಿ, ಕೂಲ್ ಕ್ಯಾಪ್ಟನ್‌ಗೆ ಬರೆದಿರುವ ಸಂದೇಶ ಗಮನ ಸೆಳೆಯುತ್ತಿದೆ.

ಆಗಸ್ಟ್ 15ರ ರಾತ್ರಿ 7.30 pm ಹೊತ್ತಿಗೆ ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. 2019ರ ವಿಶ್ವಕಪ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಾಗ ಬೇಸರಗೊಂಡಿದ್ದ ಧೋನಿ, ಆವತ್ತು ಭಾರತ ವಿಶ್ವಕಪ್‌ನಿಂದ ಹೊರ ಬಿದ್ದ ಅದೇ ಸಮಯಕ್ಕೆ ನಿವೃತ್ತಿ ಘೋಷಿಸಿದ್ದರು. ಧೋನಿ ಬೆನ್ನಲ್ಲೇ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ನಿವೃತ್ತಿ ಹೇಳಿದ್ದರು.

ಧೋನಿಯ ನಿವೃತ್ತಿ ನಿರ್ಧಾರಕ್ಕೆ ಪ್ರತಿಕ್ರಿಯಿಸಿ ಸಾಕ್ಷಿ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. 'ಆಟದಲ್ಲಿ ನಿಮ್ಮ ಬೆಸ್ಟ್ ನೀಡಿದ್ದಕ್ಕೆ ಅಭಿನಂದನೆಗಳು. ನಿಮ್ಮ ಸಾಧನೆಗಳಿಗೆ ಮತ್ತು ನೀವಿರುವ ರೀತಿಗೆ ನಾನು ಹೆಮ್ಮೆಪಡುತ್ತೇನೆ. ನಿಮ್ಮ ನೆಚ್ಚಿನ ಆಟಕ್ಕೆ ವಿದಾಯ ಹೇಳುವಾಗ ನೀವು ಆ ಕಣ್ಣೀರನ್ನು ಹಿಡಿದಿಟ್ಟುಕೊಂಡಿದ್ದೀರಿ ಎಂದು ನನಗೆ ಖಾತ್ರಿಯಿದೆ. ನಿಮಗೆ ಉತ್ತಮ ಆರೋಗ್ಯ, ಖುಷಿ, ಅದ್ಭುತ ಕ್ಷಣಗಳು ಮುಂದಕ್ಕೆ ಸಿಗಲಿ ಅಂತ ಹಾರೈಸುತ್ತೇನೆ,' ಎಂದು ಸಾಕ್ಷಿ ಬರೆದುಕೊಂಡಿದ್ದಾರೆ.

Sakshi Dhoni emotionally reacted on MS Dhonis retirement

ಸಾಕ್ಷಿಯ ಇನ್‌ಸ್ಟಾಗ್ರಾಮ್ ಮುಂದುವರೆದ ಸಂದೇಶದಲ್ಲಿ, 'ಜನ ನೀವು ಹೇಳಿದ್ದನ್ನು ಮರೆಯಬಹುದು, ನೀವು ಮಾಡಿದ ಸಾಧನೆಯನ್ನು ಮರೆಯಬಹುದು. ಆದರೆ ನಿಮ್ಮ ಆಟ ಅವರ ಭಾವನೆಗೆ ತಾಕಿದ್ದನ್ನು, ಅನುಭವ ನೀಡಿದ್ದನ್ನು ಜನ ಖಂಡಿತಾ ಮರೆಯಲಾರರು,' ಎಂದು ಬರೆಯಲಾಗಿದೆ.

Story first published: Monday, August 17, 2020, 16:20 [IST]
Other articles published on Aug 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+