ಡ್ರೆಸ್ ಗಾಗಿ ಸಾಕ್ಷಿ ಧೋನಿ ಟ್ರೋಲ್: ಬೆನ್ನಿಗೆ ನಿಂತ ಅಭಿಮಾನಿಗಳು!

ನವದೆಹಲಿ, ಜುಲೈ 31: ಹೊಗಳಿಸಿಕೊಳ್ಳಲು ಮತ್ತು ಬೈಸಿಕೊಳ್ಳಲು ಎರಡಕ್ಕೂ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆ. ಸದಾ ನೆಟ್ಟಿನೊಳಗೆ ಇಣುಕು ಹಾಕುತ್ತಲೇ ಇರುವ ನಮಗೆ ಈ ಹೊಗಳಿಕೆ ಮತ್ತು ತೆಗಳಿಕೆಗಳ ಅನುಭವ ಇದ್ದೇ ಇದೆ. ಇಂಥದ್ದೇ ಪ್ರಸಂಗ ನಡೆದಿದೆ. ಮಹೇಂದ್ರ ಸಿಂಗ್ ಪತ್ನಿ ಸಾಕ್ಷಿ ಹೊಸ ವಿನ್ಯಾಸದ ಬಟ್ಟೆ ಧರಿಸಿದ್ದಕ್ಕಾಗಿ ನೆಟ್ಟಿಗರಿಂದ ಟ್ರೋಲ್ ಗೆ ಒಳಗಾಗಿದ್ದಾರೆ.
ಸೆಲೆಬ್ರಿಟಿಗಳಿಗೆ ಸಹಜವಾಗೇ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಹಿಂಬಾಲಕರಿರುತ್ತಾರೆ. ಹೀಗಾಗಿ ಅವರು ಹಾಕಿದ ಪೋಸ್ಟ್ಸ್, ಫೋಟೋಸ್ ಹೆಚ್ಚು ಸಂಖ್ಯೆಯ ಜನರಿಗೆ ತಲುಪುತ್ತವೆ ಮತ್ತು ನೆಟ್ಟಿನೊಳಗೆ ಹರಿದಾಡುತ್ತಲೂ ಇರುತ್ತವೆ.
ಪತಿ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರಿಂದಾಗಿ ಸೆಲೆಬ್ರಿಟಿಗಳ ಸಾಲಿನಲ್ಲಿರುವ ಸಾಕ್ಷಿ ಮದುವೆ ಸಮಾರಂಭವೊಂದರಲ್ಲಿ ಚಂದದ ದಿರಿಸಿನೊಂದಿಗೆ ಇರುವ ಫೋಟೋವನ್ನು ತನ್ನ ಇನ್ಸ್ಟಾಗ್ರಾಂಗೆ ಹಾಕಿಕೊಂಡು ಜಾಲತಾಣಿಗರಿಂದ ವಿನಾಕಾರಣ ನಿಂದಿಸಿಕೊಂಡಿದ್ದಾರೆ, ಗೇಲಿಗೊಳಗಾಗಿದ್ದಾರೆ.

ಹೊಸ ವಿನ್ಯಾಸದ ದಿರಿಸು
ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರ ಪುತ್ರಿ ಪೂರ್ಣ ಪಟೇಲ್ ಅವರ ಮದುವೆಯಲ್ಲಿ ಸಾಕ್ಷಿ ಪಾಲ್ಗೊಂಡಿದ್ದರು. ಈ ವೇಳೆ ಸಾಕ್ಷಿ ಹೊಸ ವಿನ್ಯಾಸದ ಧಿರಿಸಿನೊಂದಿಗೆ ಮಿಂಚಿದ್ದರು. ನಿಜಕ್ಕೂ ಸಾಕ್ಷಿ ಆ ದಿರಿಸಿನಲ್ಲಿ ತುಂಬಾ ಚೆಲುವಾಗಿ ಕಾಣುತ್ತಿದ್ದರು. ಆದರೆ ಧರಿಸಿದ್ದ ದಿರಿಸು ಚರ್ಮದ ಬಣ್ಣದಲ್ಲಿತ್ತು. ಅದರ ಮೇಲೆ ಹೊಳೆವ ಹೂಗಳ ಚಿತ್ತಾರವಿತ್ತು. ಮೇಲ್ನೋಟಕ್ಕೆ ಸಾಕ್ಷಿ ಅರೆ ನಗ್ನರಾಗಿದ್ದಂತೆ ಕಾಣುತ್ತಿದ್ದರಿಂದ ನೆಟ್ಟಿಗರು ಮೂಗು ತೂರಿಸಿದ್ದಾರೆ. ಸಾಕ್ಷಿಯನ್ನು ಟೀಕಿಸಿದ್ದಾರೆ.

ಇದರಲ್ಲಿ ತಪ್ಪೇನೂ ಇಲ್ಲ
ಟೀಕಾಕಾರ ಜಾಲತಾಣಿಗರಿಗೆ ಧೋನಿ ಅಭಿಮಾನಿಯೊಬ್ಬ ಚೆನ್ನಾಗಿಯೇ ತಿರುಗೇಟು ನೀಡಿದ್ದಾರೆ. 'ಸಾಕ್ಷಿ ನೀವು ಚೆನ್ನಾಗೇ ಕಾಣುತ್ತಿದ್ದೀರಿ. ನೀವು ಈ ಡ್ರೆಸ್ ಧರಿಸಿದ್ದರಲ್ಲಿ ತಪ್ಪೇನೂ ಇಲ್ಲ' ಎಂದು ಸಾಕ್ಷಿಯನ್ನು ಸಮರ್ಥಿಸಿಕೊಂಡಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಮೂಗು ತೂರಿಸಬೇಡಿ!
ಸಾಕ್ಷಿಯ ಸುಮಾರು 2 ಮಿಲಿಯನ್ಇನ್ಸ್ಟಾಗ್ರಾಂ ಫಾಲೋವರ್ಸ್, ಸಾಕ್ಷಿಯನ್ನು ಸಮರ್ಥಿಸಿಕೊಂಡಿದ್ದಾರೆ. 'ಸಾಕ್ಷಿ ಚೆನ್ನಾಗೇ ಕಾಣುತ್ತಿದ್ದಾರೆ. ಅವರ ದಿರಿಸೂ ಚೆನ್ನಾಗಿಯೇ ಇದೆ. ಸುಖಾ ಸುಮ್ಮನೆ ಟೀಕಿಸುವುದರಲ್ಲಿ ಅರ್ಧವಿಲ್ಲ. ಸಾಕ್ಷಿಯೇನೂ ತಪ್ಪಿ ನಡೆದಿಲ್ಲ. ವೈಯಕ್ತಿಕ ಬದುಕಿನಲ್ಲೂ ಮೂಗುತೂರಿಸಿ ನೀನು ಹಾಗಿರಬೇಕು, ಹೀಗಿರಬೇಕು ಎನ್ನಲು ನಮ್ಮಲ್ಲಿ ಸಾಕಷ್ಟು ಮಂದಿಯಿದ್ದಾರೆ' ಎಂದು ಟೀಕಾಕಾರ ನೆಟ್ಟಿಗರನ್ನು ಸಾಕ್ಷಿ ಅಭಿಮಾನಿಗಳು ಝಾಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications