Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ಆಟಗಾರರ ಸಂಬಳದಲ್ಲಿ 6000 ಕೋಟಿಯ ಮೈಲಿಗಲ್ಲು ನೆಡಲು ಐಪಿಎಲ್ ಸಜ್ಜು

salary expenses of players in the IPL is set to cross 6,000cr mark after todays auction

ಐಪಿಎಲ್ 14ನೇ ಆವೃತ್ತಿಯ ಐಪಿಎಲ್‌ಗಾಗಿ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಐಪಿಎಲ್ ಹೊಸ ಮೈಲಿಗಲ್ಲೊಂದನ್ನು ತಲುಪಲಿದೆ. ಈ ಹರಾಜಿನ ಮೂಲಕ ಐಪಿಎಲ್‌ನ ಒಟ್ಟಾರೆ ಸಂಬಳದ ಮೊತ್ತ 6000 ಕೋಟಿ ಮೀರಲಿದೆ ಎಂದು ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ.

ಐಪಿಎಲ್ ಹಾಗೂ ಅದರ ಫ್ರಾಂಚೈಸಿಗಳು ಈವರೆಗೆ 59,990,545,046 (5,999 ಕೋಟಿ) ಮೊತ್ತದ ಸಂಬಳವನ್ನು ತನ್ನ ಆಟಗಾರರಿಗೆ ನೀಡಿದೆ. ಐಪಿಎಲ್ 2021ರ ಆವೃತ್ತಿಯ ಹರಾಜಿನ ದಿನ 8 ಫ್ರಾಂಚೈಸಿಗಳು 61 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಮೂಲಕ 6000 ಕೋಟಿಯ ಗಡಿಯನ್ನು ದಾಟಲಿದೆ.

ಇನ್‌ಸೈಡ್ ಸ್ಪೋರ್ಟ್‌ ವರದಿಯ ಪ್ರಕಾರ ಐಪಿಎಲ್‌ನ ಒಟ್ಟಾರೆ ಸಂಬಳದಲ್ಲಿ ಅತಿ ಹೆಚ್ಚಿನ ಭಾಗವನ್ನು ನಿರೀಕ್ಷೆಯಂತೆಯೇ ಭಾರತೀಯ ಆಟಗಾರರು ಪಡೆದುಕೊಂಡಿದ್ದಾರೆ. ಈವರೆಗೆ 464 ಕ್ರಿಕೆಟಿಗರು ಒಪ್ಪಂದವನ್ನು ಮಾಡಿಕೊಂಡಿದ್ದು ಒಟ್ಟು ಸಂಬಳದ 56.7% ಮೊತ್ತವನ್ನು ಪಡೆದುಕೊಂಡಿದ್ದಾರೆ. ಇದರ ಮೊತ್ತ 33,998,066,981 (3,399 ಕೋಟಿ) ರೂಪಾಯಿ ಆಗಿದೆ.

ಐಪಿಎಲ್‌ನಲ್ಲಿ ಈವರೆಗೆ ಕಳೆದ 13 ಆವೃತ್ತಿಗಳಲ್ಲಿ 297 ಆಟಗಾರರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಇದರಲ್ಲಿ ಒಟ್ಟು 2599 ಕೋಟಿ ರೂಪಾಯಿ ಸಂಬಳವನ್ನು ಈ ಆಟಗಾರರು ಪಡೆದುಕೊಂಡಿದ್ದಾರೆ.

ಇನ್ನು ಈ ಐಪಿಎಲ್‌ನಲ್ಲಿ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಾತ್ರವೇ ಒಟ್ಟು 125 ಕೋಟಿಗೂ ಅಧಿಕ ಸಂಬಳವನ್ನು ಪಡೆದುಕೊಮಡ ಆಟಗಾರರು ಎನಿಸಿದ್ದಾರೆ. ಐವರು ಆಟಗಾರರು ಮಾತ್ರ 100 ಕೋಟಿ ಮೊತ್ತದ ಸಂಬಳವನ್ನು ಪಡೆದುಕೊಂಡಿದ್ದಾರೆ. ವಿದೇಶಿ ಆಟಗಾರರ ಪೈಕಿ ಎಬಿ ಡಿವಿಲಿಯರ್ಸ್ ಮಾತ್ರ 100 ಕೋಟಿಗೂ ಅಧಿಕ ಸಂಬಳವನ್ನು ಪಡೆದ ಆಟಗಾರ ಎನಿಸಿದ್ದಾರೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ 150 ಕೋಟಿ ರೂಪಾಯಿ ಮೊತ್ತವನ್ನು ಐಪಿಎಲ್ ಸಂಬಳದ ರೂಪದಲ್ಲಿ ಪಡೆದುಕೊಮಡ ಏಕೈಕ ಆಟಗಾರ ಎನಿಸಿದ್ದಾರೆ.

Story first published: Thursday, February 18, 2021, 11:45 [IST]
Other articles published on Feb 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+