For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಸೋತ ಬಳಿಕ 6 ವರ್ಷಗಳ ಹಿಂದಿನ ಸಲ್ಮಾನ್ ಖಾನ್ ಟ್ವೀಟ್ ವೈರಲ್

Salman Khan’s 6-year-old tweet goes viral after KXIP defeat RCB

ದುಬೈ: ಶಾರ್ಜಾದಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ XI ಪಂಜಾಬ್ ತಂಡ 8 ವಿಕೆಟ್‌ಗಳ ವಿಜಯ ದಾಖಲಿಸಿತ್ತು. ಈ ಪಂದ್ಯದ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಸುಮಾರು 6 ವರ್ಷಗಳಿಗೆ ಹಿಂದೆ ಮಾಡಿದ್ದ ಟ್ವೀಟ್ ವೈರಲ್ ಆಗಿದೆ.

ಅಕ್ಟೋಬರ್ 15ರ ಗುರುವಾರ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ XI ಪಂಜಾಬ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಪಡೆ, ಆ್ಯರನ್ ಫಿಂಚ್ 20, ವಿರಾಟ್ ಕೊಹ್ಲಿ 48, ದೇವದತ್ ಪಡಿಕ್ಕಲ್ 18, ಶಿವಂ ದೂಬೆ 23, ಕ್ರಿಸ್ ಮೋರಿಸ್ 25, ವಾಷಿಂಗ್ಟನ್ ಸುಂದರ್ 13 ರನ್‌ ಕೊಡುಗೆಯೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 171 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ಕೆಎಲ್ ರಾಹುಲ್ 61 (49 ಎಸೆತ), ಮಯಾಂಕ್ ಅಗರ್ವಾಲ್ 45 (25), ಕ್ರಿಸ್ ಗೇಲ್ 53 (45) ರನ್ ಕೊಡುಗೆಯೊಂದಿಗೆ 20 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿ ಗೆಲುವನ್ನಾಚರಿಸಿತ್ತು. ಅಂದ್ಹಾಗೆ ಇದು ಪಂಜಾಬ್ ಈ ಟೂರ್ನಿಯಲ್ಲಿ ದಾಖಲಿಸಿದ 2ನೇ ಗೆಲುವು. ಎರಡೂ ಜಯ ಕೂಡ ಆರ್‌ಸಿಬಿ ವಿರುದ್ಧಾನೆ ಅನ್ನೋದು ವಿಶೇಷ.

ಪಂಜಾಬ್ ಗೆಲುವನ್ನಾಚರಿಸುತ್ತಲೇ ಸಲ್ಮಾನ್ ಖಾನ್ ಅವರು 2014ರ ಮೇನಲ್ಲಿ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆವತ್ತು ಟ್ವೀಟ್ ಮಾಡಿದ್ದ ಸಲ್ಮಾನ್, 'ಪ್ರೀತಿ ಝಿಂಟಾಳ ಟೀಮ್ ವಿನ್ ಆಯ್ತಾ?' ಎಂದು ಪ್ರಶ್ನಿಸಿದ್ದರು. ಈ ಟ್ವೀಟ್ ಮುಂದಿಟ್ಟುಕೊಂಡು ಹಲವಾರು ಮಂದಿ ಈಗ ಟ್ವೀಟ್ ಮಾಡಿದ್ದಾರೆ.

Story first published: Saturday, October 17, 2020, 10:41 [IST]
Other articles published on Oct 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+