
ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಇತ್ತೀಚೆಗೆ ನೀಡುತ್ತಿರುವ ಪ್ರದರ್ಶನ ಕ್ರಿಕೆಟ್‌ನ ದಿಗ್ಗಜರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಅತ್ಯಂತ ಜವಾಬ್ಧಾರಿಯುತ ಪ್ರದರ್ಶನ ನಿಡುವಲ್ಲಿ ಪಂತ್ ಸತತವಾಗಿ ಯಶಸ್ವಿಯಾಗಿದ್ದಾರೆ. ಈಗ ಇಂಗ್ಲೆಂಡ್ ತಂಡದ ಆಟಗಾರ ಸ್ಯಾಮ್ ಬಿಲ್ಲಿಂಗ್ಸ್ ತಾನು ಕಂಡ ಅತ್ಯುತ್ತಮ ಯುವ ಆಟಗಾರ ಎನ್ನುವ ಮೂಲಕ ಪಂತ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಯಾಮ್ ಬಿಲ್ಲಿಂಗ್ಸ್ 2016 ಮತ್ತು2017ರ ಆವೃತ್ತಿಯಲ್ಲಿ ಡೆಲ್ಲಿ ಮೂಲದ ಫ್ರಾಂಚೈಸಿಯ ಪರವಾಗಿ ಕಣಕ್ಕಿಳಿದಿದ್ದರು. ಈಗ ಈ ಬಾರಿಯ ಆವೃತ್ತಿಗೆ ಇಂಗ್ಲೆಂಡ್ ಕ್ರಿಕೆಟಿಗ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೂಲ ಬೆಲೆಗೆ ಹರಾಜಾಗಿದ್ದಾರೆ.
ಐಪಿಎಲ್‌ಗೆ ಮತ್ತೆ ಮರಳಿರುವುದು ಶ್ರೇಷ್ಠವಾದ ಅನುಭವ. ಉತ್ತಮ ಆಟಗಾರರ ಶ್ರೇಷ್ಠ ಬಳಗವೇ ಇಲ್ಲಿದೆ. ಡೆಲ್ಲಿ ಬಳಗ ಅದ್ಭುತವಾಗಿ ನಮ್ಮನ್ನು ಸ್ವಾಗತಿಸಿದೆ. ನಾನು ಇಲ್ಲಿ ಇರುವುದಕ್ಕೆ ಸಾಕಷ್ಟು ಉತ್ಸುಕನಾಗಿದ್ದೇನೆ. ಈ ಹಿಂದಿನ ಬಾರಿ ಡೆಲ್ಲಿ ತಂಡದಲ್ಲಿರುವಾಗ ಸಾಕಷ್ಟು ಸಮಯವನ್ನು ಅವರು ಪಂತ್ ಜೊತೆಗೆ ಕಳೆದಿದ್ದರು.
"ರಿಷಭ್ ಪಂತ್‌ನನ್ನು ಮೊದಲ ಬಾರಿಗೆ ನೋಡಿರುವುದು ನನಗೆ ನೆನಪಿದೆ. ಮಧ್ಯದಲ್ಲಿ ನಾವು ಅಭ್ಯಾಸವನ್ನು ನಡೆಸಿದ್ದೆವು. ಕ್ರಿಸ್ ಮೋರಿಸ್, ನಥನ್ ಕೌಲ್ರ್‌ನೈಟ್ ಅವರಂತಾ ಆಟಗಾರ ಎಸೆತಗಳನ್ನು ಆತ ಸಿಕ್ಸರ್‌ಗೆ ಅಟ್ಟುತ್ತಿದ್ದ. ಆಗ ನಾನು ಅಂದು ನಮ್ಮ ಮೆಂಟರ್ ಆಗಿದ್ದ ರಾಹುಲ್ ದ್ರಾವಿಡ್ ಅವರನ್ನು ಯಾರೀತ? ಎಂದು ಕೇಳಿದ್ದೆ. ಆದರೆ ಈಗ ನಮಗೆಲ್ಲರಿಗೂ ರಿಷಭ್ ಪಂತ್ ಅಂದರೆ ಯಾರು ಎಂಬುದು ತಿಳಿದಿದೆ" ಎಂದಿದ್ದಾರೆ.
ಇನ್ನು ಐಪಿಎಲ್‌ನ ಸ್ಪರ್ಧೆಯ ಬಗ್ಗೆಯೂ ಸ್ಯಾಮ್ ಪ್ರತಿಕ್ರಿಯಿಸಿದ್ದರು. ನನಗೆ ಐಪಿಎಲ್ ಎಂದರೆ ತುಂಬಾ ಇಷ್ಟ. ವಿಶ್ವದಲ್ಲಿ ಇದು ಅತ್ಯುತ್ತಮವಾದ ಸ್ಪರ್ಧೆಗಳಲ್ಲಿ ಒಂದು. ಐಪಿಎಲ್‌ನಲ್ಲಿ ನೀವು ಪಡೆಯುವ ಅಬ್ಬರವನ್ನು ನೀವು ಜಗತ್ತಿನ ಯಾವ ಮೂಲೆಯಲ್ಲಿಯೂ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ಟೂರ್ನಿಯಲ್ಲಿ ಮತ್ತೊಮ್ಮೆ ಪಾಲ್ಗೊಳ್ಳಲು ನಾನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ ರಿಷಭ್ ಪಂತ್