ಇಂಗ್ಲೆಂಡ್ ಕ್ರಿಕೆಟರ್ ಸ್ಯಾಮ್ ಕರನ್‌ಗೆ ಅನಾರೋಗ್ಯ, ಕೊರೊನಾ ಪರೀಕ್ಷೆ

ಲಂಡನ್, ಜುಲೈ 3: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಸ್ಯಾಮ್ ಕರನ್‌ಗೆ ಅನಾರೋಗ್ಯ ಕಾಡಿದ್ದರಿಂದ ಅವರು ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಿದ್ದಾರೆ. ಪರೀಕ್ಷೆಯ ಬಳಿಕ ಸ್ಯಾಮ್ ಸದ್ಯ ಏಜಸ್ ಬೌಲ್‌ನಲ್ಲಿರುವ ಹೋಟೆಲ್‌ನಲ್ಲಿ ಸೆಲ್ಫ್ ಐಸೊಲೇಶ್‌ನಲ್ಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸ್ಯಾಮ್ ಕರನ್ ಅವರನ್ನು ಟೀಮ್ ಸ್ಟೋಕ್ಸ್ vs ಟೀಮ್ ಬಟ್ಲರ್ ಅಭ್ಯಾಸ ಪಂದ್ಯದಿಂದ ಹೊರಗಿಡಲಾಗಿದೆ.
'ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರನ್ ಅವರಿಗೆ ರಾತ್ರಿಯಿಂದಲೂ ಅನಾರೋಗ್ಯ ಮತ್ತು ಅತಿಸಾರ ಕಾಡುತ್ತಿತ್ತು. ಗುರುವಾರ (ಜುಲೈ 2) ಮಧ್ಯಾಹ್ನದ ನಂತರ ಅವರು ಸ್ವಲ್ಪ ಸುಧಾರಿಸಿದ್ದಾರೆ. ಈಗ ಏಜಸ್ ಬೌಲ್‌ನಲ್ಲಿ ಸೆಲ್ಫ್ ಐಸೊಲೇಶನ್‌ನಲ್ಲಿದ್ದಾರೆ. ಅವರಿನ್ನು ಮುಂದಿನ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ,' ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಹೇಳಿದೆ.
ಇಂಗ್ಲೆಂಡ್ ಅಭ್ಯಾಸ ಪಂದ್ಯದಲ್ಲಿ ಟೀಮ್ ಬಟ್ಲರ್ ತಂಡದಲ್ಲಿದ್ದ ಸ್ಯಾಮ್ ಕರನ್ ಅಜೇಯ 15 ರನ್ ಗಳಿಸಿದ್ದರು. ಬಟ್ಲರ್ ತಂಡ 287 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ಟೀಮ್ ಸ್ಟೋಕ್ಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 233 ರನ್ ಬಾರಿಸಿದೆ. ವೆಸ್ಟ್ ಇಂಡೀಸ್-ಇಂಗ್ಲೆಂಡ್ ಟೆಸ್ಟ್ ಸರಣಿ ಜುಲೈ 8ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications