ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ ಆಡಿದ ಎರಡೂ ಸೆಷನ್‌ಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ. ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನಿರ್ಧಾರವನ್ನು ಬ್ಯಾಟರ್‌ಗಳು ಸಮರ್ಥಿಸಿಕೊಂಡರು. ಸರಣಿಯಲ್ಲಿ ಆಡುವ ಅವಕಾಶ ಪಡೆದ ನಾಥನ್ ಮೆಕ್‌ಸ್ವೀನಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ 19 ವರ್ಷದ ಯುವ ಆಟಗಾರ ಸ್ಯಾಮ್ ಕೋನ್‌ಸ್ಟಾಸ್ ಅವರಿಗೆ ಸ್ಥಾನ ಲಭಿಸಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದರು.
ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಸ್ಯಾಮ್ ಕೋನ್‌ಸ್ಟಾಸ್ ಅಮೋಘ ಬ್ಯಾಟಿಂಗ್ ನಡೆಸಿದರು. ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ವಿರುದ್ಧ ಸ್ಯಾಮ್ ಕೋನ್‌ಸ್ಟಾಸ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ರನ್ ಕಲೆ ಹಾಕಿದರು. ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಬುಮ್ರಾ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ ಯುವ ಬ್ಯಾಟರ್ ಭರವಸೆ ಮೂಡಿಸಿದರು.

ಜಸ್ಪ್ರೀತ್ ಬುಮ್ರಾ ವಿರುದ್ಧ ಬ್ಯಾಟರ್‌ಗಳು ರನ್ ಕಲೆ ಹಾಕಲು ಪರದಾಡುತ್ತಾರೆ. ಆದರೆ ಸ್ಯಾಮ್ ಕೋನ್‌ಸ್ಟಾಸ್ ತಮ್ಮ ನೈಜ ಆಟವಾಡಿ ಅಬ್ಬರಿಸಿದರು. ಅವರು ಜಸ್ಪ್ರೀತ್ ಬುಮ್ರಾ ವಿರುದ್ಧ ಈ ಎರಡೂ ಸಿಕ್ಸರ್ಗಳನ್ನು ಬಾರಿಸಿ ದಾಖಲೆ ಬರೆದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬುಮ್ರಾ ವಿರುದ್ಧ ಎರಡು ಸಿಕ್ಸರ್ಗಳನ್ನು ಬಾರಿಸಿದ ವಿಶ್ವದ ಎರಡನೇ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಇವರಿಗಿಂತ ಮೊದಲು ಜೋಸ್ ಬಟ್ಲರ್ ಮಾತ್ರ ಇಂತಹ ಸಾಧನೆ ಮಾಡಿದ್ದರು.
ಸ್ಯಾಮ್ ಕೋನ್‌ಸ್ಟಾಸ್, ಬುಮ್ರಾ ವಿರುದ್ಧ ಒಟ್ಟು 6 ಬೌಂಡರಿಗಳನ್ನು ಬಾರಿಸಿದರು. ಇದು ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಬುಮ್ರಾ ವಿರುದ್ಧ ಯಾವುದೇ ಬ್ಯಾಟ್ಸ್‌ಮನ್‌ನ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ.
ಸ್ಯಾಮ್ ಕೋನ್‌ಸ್ಟಾಸ್ ಮೊದಲ ಇನ್ನಿಂಗ್ಸ್‌್ನಲ್ಲಿ 60 ರನ್ಗಳನ್ನು ಗಳಿಸಿದರು. ಈ ಮೂಲಕ ಇವರು ಅನೇಕ ಹೊಸ ದಾಖಲೆಗಳನ್ನು ಸಹ ರಚಿಸಿದರು. ಸ್ಯಾಮ್ ಕಾನ್‌ಸ್ಟಾಸ್ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಾಲ್ಕನೇ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಬಾಕ್ಸಿಂಗ್-ಡೇ ಟೆಸ್ಟ್ ಪದಾರ್ಪಣಾ ಪಂದ್ಯದಲ್ಲಿ ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಪದಾರ್ಪಣೆ ಮಾಡುವಾಗ ಅರ್ಧಶತಕ ಗಳಿಸಿದ ಬಾಕ್ಸಿಂಗ್-ಡೇ ಟೆಸ್ಟ್ ಇತಿಹಾಸದಲ್ಲಿ ನಾಲ್ಕನೇ ಆಟಗಾರರಾದರು.
ಸ್ಯಾಮ್ ಕಾನ್‌ಸ್ಟಾಸ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಸ್ಯಾಮ್ ಕೇವಲ 19 ವರ್ಷ 85 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ವಿಷಯದಲ್ಲಿ ಕೊಂಟಾಸ್ ನೀಲ್ ಹಾರ್ವೆ ಮತ್ತು ಆರ್ಚಿ ಜಾಕ್ಸನ್ ಅವರ ದಾಖಲೆಗಳನ್ನು ಮುರಿದಿದ್ದಾರೆ.
ಸ್ಯಾಮ್ ಕೋನ್‌ಸ್ಟಾಸ್ ಮೊದಲು ವೆಸ್ಟ್ ಇಂಡೀಸ್‌ನ ರಾಯ್ ಫ್ರೆಡೆರಿಕ್ಸ್, ಭಾರತದ ಮಯಾಂಕ್ ಅಗರ್ವಾಲ್ ಮತ್ತು ಆಸ್ಟ್ರೇಲಿಯಾದ ಎಡ್ ಕೋವನ್ ಈ ಸಾಧನೆ ಮಾಡಿದ್ದರು. 1968 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫ್ರೆಡೆರಿಕ್ಸ್ 76 ರನ್ ಗಳಿಸಿದ್ದರೆ, ಮಯಾಂಕ್ ಅಗರ್ವಾಲ್ 2018 ರಲ್ಲಿ 76 ರನ್ ಗಳಿಸಿದ್ದರು ಮತ್ತು ಕೋವನ್ 2011 ರಲ್ಲಿ 68 ರನ್ ಗಳಿಸಿದ್ದರು. ಇದಲ್ಲದೇ ಸ್ಯಾಮ್ ಕಾನ್‌ಸ್ಟಾಸ್ 60 ರನ್‌ಗಳ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ.