ಮುಲ್ಗ್ರೇವ್ ಕ್ಲಬ್‌ಗೆ ಕೋಚಿಂಗ್ ನೀಡಲಿದ್ದಾರೆ ಸನತ್ ಜಯಸೂರ್ಯ

ಕೊಲಂಬೋ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧ ಮುಗಿಸಿರುವ ಶ್ರೀಲಂಕಾ ಕ್ರಿಕೆಟ್ ದಂತಕತೆ ಸನತ್ ಜಯಸೂರ್ಯ ಮತ್ತೆ ಕ್ರಿಕೆಟ್ ವೃತ್ತಿಗೆ ಕಮ್‌ಬ್ಯಾಕ್ ಮಾಡಲಿದ್ದಾರೆ. ನಿಷೇಧ ಮುಗಿಸಿದ ಬಳಿಕ ಜಯಸೂರ್ಯ ಮುಲ್ಗ್ರೇವ್ ಕ್ರಿಕೆಟ್ ಕ್ಲಬ್‌ಗೆ ಕೋಚಿಂಗ್ ನೀಡಲಿದ್ದಾರೆ.
ಫೆಬ್ರವರಿ 2019ರಲ್ಲಿ ಸನತ್ ಜಯಸೂರ್ಯ ನಿಷೇಧಕ್ಕೀಡಾಗಿದ್ದರು. ಐಸಿಸಿಯ ಭ್ರಷ್ಟಾಚಾರ ವಿರೋಧಿ ನಿಯಮ ಉಲ್ಲಂಘಿಸಿದ ಕಾರಣ ಅವರಿಗೆ ನಿಷೇಧ ಹೇರಲಾಗಿತ್ತು. ನಿಷೇಧ ಮುಕ್ತಾಯವಾಗಿರುವುದರಿಂದ ಮತ್ತೆ ಕ್ರಿಕೆಟ್ ಹುದ್ದೆಗೆ ಸೇರಲು ಜಯಸೂರ್ಯಗೆ ತಿಲಕರತ್ನೆ ದಿಲ್ಶನ್ ಮನವೊಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಯಸೂರ್ಯ ಮುಲ್ಗ್ರೇವ್ ಕ್ಲಬ್‌ಗೆ ಕೋಚಿಂಗ್ ನೀಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
'ನಾವು ಈ ಬಗ್ಗೆ ಕಾರ್ಯೋನ್ಮುಖರಾಗಿ ಆ ಬಳಿಕ ಒಪ್ಪಂದಕ್ಕೆ ಬರಬೇಕಿದೆ. ದಿಲ್ಶನ್ ನಮಗಾಗಿ ಬಾಗಿಲು ತೆರೆಸಿದ್ದಾರೆ. ಇದು ನಮಗೊಲಿದ ಅದ್ಭುತ ಅವಕಾಶ. ಅಂತಾರಾಷ್ಟ್ರೀಯ ಕ್ರಿಕೆಟ್ ಗುಣಮಟ್ಟ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಲು ನಮ್ಮ ಯುವ ಆಟಗಾರರಿಗೂ ಇದು ಒಂದೊಳ್ಳೆ ಅವಕಾಶ,' ಎಂದು ಮುಲ್ಗ್ರೇವ್ ಅಧ್ಯಕ್ಷ ಮಲಿನ್ ಪುಲ್ಲನಾಯೆಗಂ ಹೇಳಿದ್ದಾರೆ.
ಶ್ರೀಲಂಕಾ ಮಾಜಿ ಆಟಗಾರರಾದ ತಿಲಕರತ್ನೆ ದಿಲ್ಶಾನ್ ಮತ್ತು ಉಪುಲ್ ತರಂಗಾ ಈಗ ಮುಲ್ಗ್ರೇವ್ ಕ್ರಿಕೆಟ್ ಕ್ಲಬ್‌ನಲ್ಲಿ ಆಡುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications