For Quick Alerts
ALLOW NOTIFICATIONS  
For Daily Alerts
 

Sanat Jayasuriya: ಶ್ರೀಲಂಕಾ ತಂಡಕ್ಕೆ ಸನತ್ ಜಯಸೂರ್ಯ ಪೂರ್ಣ ಪ್ರಮಾಣದ ಹೆಡ್ ಕೋಚ್

ಇತ್ತೀಚೆಗೆ ವಿಶ್ವ ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡ ಭಾರೀ ಸದ್ದು ಮಾಡುತ್ತಿದೆ. ಮಂಕಾಗಿದ್ದ ಲಂಕಾ ಪಡೆ ಗೆಲುವಿನ ಟ್ರಾಕ್‌ ಮರಳಿದ್ದು, ಬಲಿಷ್ಠ ತಂಡಗಳನ್ನು ಸೋಲಿಸಿದೆ. ಇದಕ್ಕೆ ಮುಖ್ಯ ಕಾರಣ ಆಟಗಾರರ ಪ್ರದರ್ಶನ ಒಂದೆಡೆ ಆದರೆ, ಮತ್ತೊಂದು ಕಡೆ ತಂಡದ ಹಂಗಾಮಿ ಕೋಚ್ ಆಗಿದ್ದ ಸನತ್ ಜಯಸೂರ್ಯ ಪ್ರಮುಖ ಪಾತ್ರವಹಿಸಿದ್ದರು.

ಈಗ ಸನತ್ ಜಯಸೂರ್ಯ ಅವರನ್ನು ಎರಡು ವರ್ಷಗಳ ಕಾಲ ಶ್ರೀಲಂಕಾ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅವರು ಈ ಹಿಂದೆ ಹಂಗಾಮಿ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಅವರು ಈ ಪಾತ್ರದಲ್ಲಿ ಶಾಶ್ವತವಾಗಿ ತಂಡಕ್ಕೆ ಕಾರ್ಯ ನಿರ್ವಹಸಲು ಅವಕಾಶ ಮಾಡಿಕೊಡಲಾಗಿದೆ. ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ಶ್ರೀಲಕಾ ತಂಡಕ್ಕೆ ಅವರು ಹಂಗಾಮಿ ಕೋಚ್ ಆಗಿದ್ದರು. ಇದೀಗ ಮುಂದಿನ ಎರಡು ವರ್ಷಗಳ ಕಾಲ ಅಂದರೆ 2026 ಮಾರ್ಚ್ 31 ರವರೆಗೆ ಸನತ್ ಜಯಸೂರ್ಯ ಅವರು ಶ್ರೀಲಂಕಾ ತಂಡದ ಹೆಡ್‌ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Sanath Jayasurya full head coach for Sri Lanka team

ಸನತ್ ಜಯಸೂರ್ಯ ಅವರನ್ನು ಪೂರ್ಣ ಪ್ರಮಾಣದ ಹೆಡ್ ಕೋಚ್ ಆಗಿ ನೇಮಕಗೊಂಡಿರುವುದನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ಪ್ರವಾಸಗಳಲ್ಲಿ ತಂಡದ ಉತ್ತಮ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಮೂರು ಸರಣಿಯ ಗೆಲುವಿನಲ್ಲಿ ಜಯಸೂರ್ಯ ಅವರು ಹಂಗಾಮಿ ಹೆಡ್ ಕೋಚ್ ಆಗಿ ತಂಡದ ಉಸ್ತುವಾರಿ ವಹಿಸಿದ್ದರು.

ಕೆಲವು ತಿಂಗಳ ಹಿಂದೆ ಶ್ರೀಲಂಕಾ ತವರಿನಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತವನ್ನು ಎದುರಿಸಿತ್ತು. ಭಾರತ ಟಿ20 ಸರಣಿಯನ್ನು ಗೆದ್ದುಕೊಂಡಿದ್ದರೂ, ಏಕದಿನ ಸರಣಿಯಲ್ಲಿ 2-0 ಅಂತರದ ಸೋಲನ್ನು ಎದುರಿಸಬೇಕಾಯಿತು. ಶ್ರೀಲಂಕಾ 1997ರ ನಂತರ ಮೊದಲ ಬಾರಿಗೆ ಭಾರತ ತಂಡದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಗೆದ್ದ ಸಾಧನೆ ಮಾಡಿತ್ತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವು 2-1 ಅಂತರದಲ್ಲಿ ಸೋತಿತು. ಆದರೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಜಯಸೂರ್ಯ ಅವರ ಮೊದಲ ಟಾಸ್ಕ್ ಅಕ್ಟೋಬರ್ 13 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಾಗಿದೆ. ಸರಣಿಯಲ್ಲಿ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ವೃತ್ತಿಜೀವನ

ಶ್ರೀಲಂಕಾ ಪರ ಜಯಸೂರ್ಯ 1991 ರಿಂದ 2007 ರವರೆಗೆ 110 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 6973 ರನ್ ಗಳಿಸಿದ್ದಾರೆ. ಇದಲ್ಲದೆ, 445 ಏಕದಿನ ಪಂದ್ಯಗಳಲ್ಲಿ 13430 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 98 ವಿಕೆಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 323 ವಿಕೆಟ್ ಪಡೆದ ಸಾಧನೆಯ್ನೂ ಮಾಡಿದ್ದಾರೆ.

Story first published: Monday, October 7, 2024, 16:26 [IST]
Other articles published on Oct 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+