ವಿರಾಟ್ ಕೊಹ್ಲಿ ಜೊತೆಗೆ ಜಸ್‌ಪ್ರೀತ್ ಬೂಮ್ರಾ ಪತ್ನಿಯಿರುವ ಚಿತ್ರ ವೈರಲ್!

ನವದೆಹಲಿ: ಟಿವಿ ನಿರೂಪಕಿ ಸಂಜನಾ ಗಣೇಶನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಾರಣ ಸಂಜನಾ ಅವರು ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ವರಿಸಿದ್ದಾರೆ. ಮದುವೆಯ ಕಾರಣಕ್ಕಾಗಿಯೇ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಕೊನೇ ಪಂದ್ಯದಲ್ಲಿ ಜೂಮ್ರಾ ಆಡಿರಲಿಲ್ಲ. ಮದುವೆಯ ಸಿದ್ಧತೆಗಾಗಿ ಬೂಮ್ರಾ ರಜೆ ಪಡೆದುಕೊಂಡಿದ್ದಾರೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಾಹಿತಿ ನೀಡಿತ್ತು.
ಮಿಸ್ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಮತ್ತು ಸ್ಟಾರ್ ಸ್ಪೋರ್ಟ್ಸ್‌ನ ಆ್ಯಂಕರ್‌ಗಳಲ್ಲಿ ಒಬ್ಬರಾದ ಸಂಜನಾ ಗಣೇಶನ್ ಮತ್ತು ಜಸ್‌ಪ್ರೀತ್ ಬೂಮ್ರಾ ವಿವಾಹ ಮಾರ್ಚ್ 14ರಂದು ಗೋವಾದಲ್ಲಿ ನಡೆದಿತ್ತು. ಬೂಮ್ರಾ ಮದುವೆಯಾಗುತ್ತಲೇ ಬೂಮ್ರಾ ಪತ್ನಿ ಸಂಜನಾ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ಜೊತೆಗಿರುವ ಫೋಟೋ ವೈರಲ್ ಆಗಿದೆ.
ಕೊಹ್ಲಿ ಜೊತೆಗಿರುವ ಚಿತ್ರ
ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೆಲಸ ಮಾಡುವ ಸಂಜನಾ ಗಣೇಶನ್ ಅವರು ಕೊಂಚ ತಮಾಷೆಯ ಸ್ವಭಾವದವರು. ಸಂಜನಾ ಅವರು ಹಿಂದೊಮ್ಮೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಚಿತ್ರ ಹಾಕಿಕೊಂಡಿದ್ದರು. ಇದರಲ್ಲಿ ಕೊಹ್ಲಿ ಜೊತೆಗೆ ತಾನು ಟ್ರಿಪ್‌ಗೆ ಹೋಗುತ್ತಿರುವುದಾಗಿ ಸಂಜನಾ ಬರೆದುಕೊಂಡಿದ್ದರು. ಪೋಸ್ಟ್‌ನಲ್ಲಿ ಕೊಹ್ಲಿ ಕೂಡ ಇದ್ದರು.

2016ರ ಇನ್‌ಸ್ಟಾಗ್ರಾಮ್ ಫೋಟೋ
ಸಂಜನಾ ಅವರು 2016 ಫೆಬ್ರವರಿ 17ರಂದು ಮಾಡಿದ್ದ ಇನ್‌ಸ್ಟಾಗ್ರಾಮ್ ಪೋಸ್ಟ್ ಅದು. 'ಸಂಜನಾ ಗಣೇಶನ್ ಅವರು ವಿರಾಟ್ ಕೊಹ್ಲಿ ಜೊತೆ ರೋಡ್ ಟ್ರಿಪ್ ಹೋಗುತ್ತಿದ್ದಾರೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿತ್ತು. ಆ ಪೋಸ್ಟ್‌ನಲ್ಲಿ ಸಂಜನಾ ಜೊತೆಗೆ ಕಿಂಗ್ ಕೊಹ್ಲಿ ಇದ್ದು ಹೌದು, ಆದರೆ ನಿಜವಾಗಿಯೂ ಅಲ್ಲ. ಸಂಜನಾ ಕಾರಿನ ಹಿಂಬಾಗದ ಸೀಟಿನಲ್ಲಿ ಕೊಹ್ಲಿಯ ಚಿತ್ರವಿತ್ತಷ್ಟೇ.
ಆ ಚಿತ್ರ ಈಗ್ಯಾಕೆ ವೈರಲ್?
ಸಂಜನಾ ತರಲೆಯಾಗಿ ಮಾಡಿದ್ದ ಪೋಸ್ಟ್ ಆಗ ಅಷ್ಟೇನೂ ಗಮನ ಸೆಳೆದಿರಲಿಲ್ಲ. ಆದರೆ ಬೂಮ್ರಾ ಮದುವೆಯ ಬಳಿಕ ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡತೊಡಗಿದೆ. ಕಾರಣ, ಬೂಮ್ರಾ ಅವರನ್ನು ಸಂಜನಾ ವರಿಸಿರುವುದರಿಂದ ಸಂಜನಾ ಸಾಮಾಜಿಕ ಜಾಲತಾಣಗಳನ್ನು ಅಭಿಮಾನಿಗಳು ಈಗ ಹೆಚ್ಚು ಗಮನಿಸಲಾರಂಭಿಸಿದ್ದಾರೆ. ಸಂಜನಾ ಹಳೆ ಪೋಸ್ಟ್‌ಗಳನ್ನು ನೋಡುತ್ತಿದ್ದ ಯಾರಿಗೋ ಈ ಪೋಸ್ಟ್ ಕಣ್ಣಿಗೆ ಸಿಕ್ಕಿದೆ. ಆಮೇಲೆ ನೆಟ್ಟಿನಲ್ಲಿ ಅದು ಓಡಾಡತೊಡಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications