For Quick Alerts
ALLOW NOTIFICATIONS  
For Daily Alerts
 

2ನೇ ಟಿ20 ಪಂದ್ಯಕ್ಕೆ ಹೊಸ ಆರಂಭಿಕ ಜೋಡಿಯನ್ನು ಹೆಸರಿಸಿದ ಸಂಜಯ್ ಬಂಗಾರ್

Sanjay Bangar calls for Mayank Agarwal to open with Shikhar Dhawan in 2nd T20I

ಭಾರತ ಹಾಗೂ ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯಕ್ಕೆ ಕಣಕ್ಕಿಳಿಯುವ ಮುನ್ನ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಹೇಳಿಕೆಯನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಆರಂಭಿಕನಾಗಿ ಮಯಾಂಕ್ ಅಗರ್ವಾಲ್ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿ ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ಸಿಡ್ನಿ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಹೀಗಾಗಿ ಈಪಂದ್ಯದಲ್ಲಿ ಮಯಾಂಕ್ ಅಗರ್ವಾಲ್‌ಗೆ ಆರಂಭಿಕನಾಗಿ ಕಣಕ್ಕಿಳಿಯಲು ಅವಕಾಶ ನೀಡಬೇಕು ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್.

ಖಾಯಂ ಆರಂಬಿಕ ಆಟಗಾರ ರೋಹಿತ್ ಶರ್ಮಾ ದುರದೃಷ್ಟವಶಾತ್ ಲಭ್ಯವಿಲ್ಲದ ಕಾರಣ ಟೀಮ್ ಇಂಡಿಯಾ ಆರಂಭಿಕನಾಗಿ ಮಯಾಂಕ್ ಅಗರ್ವಾಲ್ ಜೊತೆಗೆ ಶಿಖರ್ ಧವನ್ ಆರಂಬಿಸಿಬೇಕೆಂದು ನಾನು ಭಾವಿಸುತ್ತೇನೆ. ಇದು ತಂಡಕ್ಕೆ ಮೇಲುಗೈಯನ್ನು ಒದಗಿಸಲಿದೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್‌ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದುಕೊಂಡಿರಲಿಲ್ಲ. ಆರಂಭಿಕನಾಗಿ ಉಪನಾಯಕ ಕೆಎಲ್ ರಾಹುಲ್ ಕಣಕ್ಕಿಳಿದಿದ್ದರು. ತನಡದ ಪರವಾಗಿ ಅದ್ಭುತ ಪ್ರದರ್ಶನವನ್ನು ನೀಡಿ ಅರ್ಧ ಶತಕವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.

"ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಇತ್ತೀಚೆಗೆ ಶ್ರೇಷ್ಠ ಆಟವನ್ನು ಭಾರತ ತಂಡಕ್ಕೆ ನೀಡಿದ್ದಾರೆ. ಆದರೆ ಆರಂಭಿಕನಾಗಿ ಎರಡನೇ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯುವುದು ಸೂಕ್ತ ಎಂದು ಬಂಗಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Sunday, December 6, 2020, 10:52 [IST]
Other articles published on Dec 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+