Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಬ್ಯಾಟಿಂಗ್‌ ಸಲಹೆಗಾರರಾಗಿ ಸಂಜಯ್ ಬಂಗಾರ್ ಆಯ್ಕೆ

Sanjay Bangar has been appointed as the batting consultant of RCB for IPL 2021

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಬ್ಯಾಟಿಂಗ್‌ ಸಲಹೆಗಾರರಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರನ್ನು ಆಯ್ಕೆ ಮಾಡಿದೆ. 2021ರ ಐಪಿಎಲ್‌ಗಾಗಿ ಸಿದ್ಧತೆ ನಡೆಸುತ್ತಿರುವ ಆರ್‌ಸಿಬಿ ಸಿಬ್ಬಂದಿ ಬಣದಲ್ಲಿ ಬದಲಾವಣೆ ಮಾಡಿಕೊಂಡಿದೆ.

ಕಳೆದ ಸೀಸನ್ ನಲ್ಲಿ ಆರ್ಸಿಬಿ ಪ್ಲೇಆಫ್ ಗೆ ಪ್ರವೇಶಿಸಿತ್ತಾದರೂ ಫೈನಲ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿತ್ತು. ನಾಲ್ಕನೇ ಸ್ಥಾನದಲ್ಲಿ ಟೂರ್ನಿ ಮುಗಿಸಿತ್ತು. ಒಂದು ಬಾರಿಯೂ ಕಪ್‌ ಗೆಲ್ಲದ ತಂಡಗಳಲ್ಲಿ ಆರ್‌ಸಿಬಿ ಕೂಡ ಸೇರಿದೆ. ಇನ್ನುಳಿದ ಎರಡು ತಂಡಗಳೆಂದರೆ ಕಿಂಗ್ಸ್ XI ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್.

ಸಂಜಯ್ ಬಂಗಾರ್ ಬ್ಯಾಟಿಂಗ್‌ ಸಲಹೆಗಾರರಾಗಿ ಆಯ್ಕೆಯಾಗಿರುವ ವಿಚಾರವನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ಬ್ಯಾಟಿಂಗ್‌ ಸಲಹೆಗಾರರಾಗಿ ಸಂಜಯ್ ಬಂಗಾರ್ ಅವರನ್ನು ಆರ್‌ಸಿಬಿ ಕುಟುಂಬಕ್ಕೆ ಬರ ಮಾಡಿಕೊಳ್ಳಲು ನಮಗೆ ಸಂತಸವಾಗುತ್ತಿದೆ,' ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದ ಬಂಗಾರ್, ಭಾರತದ ಪರ 12 ಟೆಸ್ಟ್‌ನಲ್ಲಿ 470 ರನ್, 7 ವಿಕೆಟ್‌ಗಳು, 15 ಏಕದಿನ ಪಂದ್ಯಗಳಲ್ಲಿ 180 ರನ್, 7 ವಿಕೆಟ್ ಪಡೆದಿದ್ದಾರೆ. ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿದ್ದ ಬಂಗಾರ್ ಬ್ಯಾಟಿಂಗ್ ಸಲಹೆಗಾರರಾಗಿ ಆಯ್ಕೆಯಾಗಿರುವುದರಿಂದ ಆರ್‌ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. 2021ರ ಐಪಿಎಲ್ ನಲ್ಲಾದರೂ ಆರ್ಸಿಬಿ ಕಪ್ ಗೆಲ್ಲುತ್ತಾ ಕಾದು ನೋಡಬೇಕಿದೆ.

Story first published: Wednesday, February 10, 2021, 14:33 [IST]
Other articles published on Feb 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+