Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿ ಯಶಸ್ಸು ಕಂಡಿದ್ದು ಹೇಗೆ? ಸಿಕ್ರೇಟ್‌ ರಿವೀಲ್ ಮಾಡಿದ ಸಂಜಯ್ ಬಂಗಾರ್

ವಿದೇಶಿ ಪಿಚ್‌ಗಳಲ್ಲಿ ರನ್‌ ಬಾರಿಸಲು ಬರೀ ಪ್ರತಿಭೆ ಇದ್ದರೆ ಸಾಲದು. ಬದಲಿಗೆ ಸತತ ಪರಿಶ್ರಮ ಹಾಗೂ ಸಿದ್ಧತೆ ಅವಶ್ಯಕವಾಗಿ ಬೇಕಾಗುತ್ತದೆ. ಟೀಮ್ ಇಂಡಿಯಾ ಸೂಪರ್ ಸ್ಟಾರ್ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ಪಿಚ್‌ಗಳಲ್ಲಿ ತಮ್ಮ ಬ್ಯಾಟಿಂಗ್ ಸುಧಾರಣೆಗೆ ಹೇಗೆ ಶ್ರಮಿಸಿದರು ಎಂಬುದನ್ನು, ಮಾಜಿ ಬ್ಯಾಟಿಂಗ್ ಕೋಚ್‌ ಸಂಜಯ್ ಬಂಗಾರ್ ರಿವೀಲ್ ಮಾಡಿದ್ದಾರೆ. ಭಾರತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ವೇಳೆ ನಿರಾಶಾದಾಯಕ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಎಲ್ಲರ ಗಮನ ಸೆಳೆದಿದೆ.

ಇಂಗ್ಲೆಂಡ್‌ ಸರಣಿಗಾಗಿ ವಿರಾಟ್‌ ಹೇಗೆ ಅಭ್ಯಾಸ ನಡೆಸಿದರು ಎಂಬ ಬಗ್ಗೆ ಸಂಜಯ್ ಬಂಗಾರ ಬಹಿರಂಗ ಪಡಿಸಿದ್ದಾರೆ. ವಿರಾಟ್‌ ಕೊಹ್ಲಿ ಕಳೆದ ಜನವರಿಯಿಂದ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕಣಕ್ಕೆ ಇಳಿದಿಲ್ಲ. ಐಪಿಎಲ್‌ ಬಳಿಕ ಇವರು ಗಾಯದ ಕಾರಣದಿಂದ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದರು.

Sanjay Bangar

ವಿರಾಟ್‌ ಕೊಹ್ಲಿ ದೊಡ್ಡ ಸರಣಿಗಳಿಗೂ ಮುನ್ನ ತಮ್ಮನ್ನು ಸಂಪರ್ಕಿಸುತ್ತಾರೆ ಎಂದು ಸಂಜಯ್ ಬಂಗಾರ್ ತಿಳಿಸಿದ್ದಾರೆ. ಅಲ್ಲದೆ ಬ್ಯಾಟಿಂಗ್‌ ಸೆಷನ್‌ ನಡೆಸುತ್ತಾರೆ. ವಿರಾಟ್‌ ಸತತ 2 ರಿಂದ 3 ಗಂಟೆ ನಿರಂತರ ಅಭ್ಯಾಸ ಮಾಡುತ್ತಾರೆ. ಅಲ್ಲದೆ ತಮ್ಮ ಬ್ಯಾಟಿಂಗ್‌ನಲ್ಲಿ ಆಗುವ ಸಣ್ಣ ಸಣ್ಣ ತಪ್ಪುಗಳನ್ನು ಸಹ ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ತಮಗೆ ಖುಷಿ ನೀಡುವ ವರೆಗೂ ಅಭ್ಯಾಸ ಮಾಡುವುದನ್ನು ಬಿಡುವುದಿಲ್ಲ ಎಂದು ಬಂಗಾರ ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಸಕ್ಸಸ್‌ ಸಿಕ್ಕಿದ್ದು ಹೀಗೆ

ದಿ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋನಲ್ಲಿ ಸಂಜಯ್ ಬಂಗಾರ್ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ನೀವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವಾಗ ಎರಡು ವಿಷಯಗಳ ಮೇಲೆ ನೀವು ಗಮನ ಹರಿಸಬೇಕು. ಒಂದು ಸ್ವಿಂಗ್‌ನ್ನು ಹೇಗೆ ಆಡುತ್ತೀರಿ ಹಾಗೂ ಎರಡನೇಯದ್ದು ನೀವು ಎಷ್ಟು ತಡವಾಗಿ ಆಡಬಹುದು ಎಂಬುದನ್ನು ಗಮನಿಸಬೇಕು. 2014ರಲ್ಲಿ ವಿರಾಟ್‌ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಲಿಲ್ಲ. 2017-18ರ ಸಾಲಿನಲ್ಲಿ ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ವಿರಾಟ್ ಭರ್ಜರಿ ಅಭ್ಯಾಸ ನಡೆಸಿದರು ಎಂದು ಸಂಜಯ್ ತಿಳಿಸಿದ್ದಾರೆ.

Sanjay Bangar

ವಿರಾಟ್‌ ಕೊಹ್ಲಿ ಬೆಳಗ್ಗೆ 6 ರಿಂದ 6.30ರ ಒಳಗೆ ಮುಂಬೈನ ಮೈದಾನಕ್ಕೆ ಬಂದು ಬಿಡುತ್ತಿದ್ದರು. ಈ ವಾತಾವರಣದಲ್ಲಿ ಇಬ್ಬನಿ ಬೀಳುತ್ತದೆ. ಹೀಗಾಗಿ ಚೆಂಡು ಸ್ವಿಂಗ್ ಆಗುತ್ತಿತ್ತು. ಆಗ ಅಭ್ಯಾಸ ಮಾಡಿದರೆ ಇಂಗ್ಲೆಂಡ್‌ನಲ್ಲಿ ಬೌಲರ್‌ಗಳನ್ನು ಸುಲಭವಾಗಿ ಎದುರಿಸಬಹುದು ಎಂಬುದು ವಿರಾಟ್‌ಗೆ ತಿಳಿದಿತ್ತು. ಅಲ್ಲದೆ ಅಭ್ಯಾಸ ಮಾಡುವಾಗ ಪಿಚ್‌ ಮೇಲೆ ಹೆಚ್ಚಿನ ನೀರನ್ನು ಹಾಕುತ್ತಿದ್ದರು. ಇದರಿಂದ ಚೆಂಡು ತಿರುಗುತ್ತಿತ್ತು ಎಂದು ವಿರಾಟ್‌ ಜೊತೆಗಿನ ಅನುಭವವನ್ನು ಸಂಜಯ್ ಬಂಗಾರ್ ಹಂಚಿಕೊಂಡಿದ್ದಾರೆ.

2017-18ರಲ್ಲಿ ವಿರಾಟ್‌ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಈ ವೇಳೆ ಆಡಲಾಗಿದ್ದ 5 ಟೆಸ್ಟ್‌ ಪಂದ್ಯಗಳಲ್ಲಿ ವಿರಾಟ್‌ 59ರ ಸರಾಸರಿಯಲ್ಲಿ 593 ರನ್‌ ಕಲೆ ಹಾಕಿದ್ದರು. ಇದರಲ್ಲಿ 2 ಶತಕಗಳು ಸಹ ಸೇರಿವೆ.

Story first published: Saturday, July 11, 2026, 17:44 [IST]
Other articles published on Jul 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+