ಮಾಜಿ ಡೆಲ್ಲಿ ಕ್ರಿಕೆಟರ್ ಸಂಜಯ್ ದೋಬಲ್ ಕೊರಾನಾ ವೈರಸ್‌ಗೆ ಬಲಿ

ಕೊರೊನಾ ವೈರಸ್ ಭಾರತದಲ್ಲಿ ತನ್ನ ಉಗ್ರರೂಪವನ್ನು ಪ್ರದರ್ಶಿಸುತ್ತಿದ್ದೆ. ಈ ವೈರಸ್‌ಗೆ ಡೆಲ್ಲಿ ಮೂಲದ ಖ್ಯಾತ ಮಾಜಿ ಕ್ಲಬ್ ಕ್ರಿಕೆಟರ್ ಸಂಜಯ್ ದೋಬಲ್ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರು ಡೆಲ್ಲಿ ಅಂಡರ್ 23 ತಂಡದ ಸಿಬ್ಬಂದಿಯಾಗಿಯೂ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೊರೊನಾ ವೈರಸ್‌ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿದ್ದಾರೆ. ಸಂಜಯ್ ದೋಬಲ್‌ಗೆ 53 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ವಾರದ ಹಿಂದೆ ಸಂಜಯ್ ದೋಬಲ್‌ಗೆ ಕೊರೊನಾ ವೈರಸ್‌ನ ಲಕ್ಷಣಗಳು ಕಂಡುಬಂದಿತ್ತು. ಬಹದುರ್ಘರ್‌ನ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸಿದೆ ಸಂಜಯ್ ಆರೋಗ್ಯ ಹದಗೆಡುತ್ತಿದ್ದ ಕಾರಂ ಅವರನ್ನು ಬಳಿಕ ದ್ವಾರಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೊಗೆ ಪ್ಲಾಸ್ಮಾ ಚಿಕಿತ್ಸೆಯನ್ನೂ ನೀಡಲಾಗಿತ್ತು ಆದರೆ ಅದರಿಂದ ಪ್ರಯೋಜನವಾಗಲಿಲ್ಲ ಎಂದು ಡೆಲ್ಲಿ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟೀಮ್ ಇಂಡಿಯಾ ಮಾಜಿ ಆರಂಬಿಕ ಆಟಗಾರ ಡೆಲ್ಲಿ ಸಂಸದ ಗೌತಮ್ ಗಂಭೀರ್ ಟ್ವಿಟ್ಟರ್‌ನಲ್ಲಿ ಸಂಜಯ್ ದೋಬಲ್ ಚಿಕಿತ್ಸೆಗಾಗಿ ಪ್ಲಾಸ್ಮಾ ಚಿಕಿತ್ಸೆಗಾಗಿ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆಮ್ ಆದ್ಮಿ ಪಕ್ಷದ ಶಾಸಕ ದಿಲೀ್ ಪಾಂಡೆ ದಾನಿಗಳ ನೆರವಿನಿಂದ ಪ್ಲಾಸ್ಮಾ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಪ್ಲಾಸ್ಮಾ ಚಿಕಿತ್ಸೆ ಸಂಜಯ್ ದೋಬಲ್‌ಗೆ ಯಶಸ್ವಿಯಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications