ರಾಹುಲ್ ಟೆಸ್ಟ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ ಮಂಜ್ರೇಕರ್‌ಗೆ ಛಾಟಿ ಬೀಸಿದ ಶ್ರೀಕಾಂತ್

ಮಹತ್ವದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಇದರಲ್ಲಿ ರೋಹಿತ್ ಶರ್ಮಾ ಆಯ್ಕೆಯಾಗದಿರುವುದು ಹಾಗೂ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಆಯ್ಕೆಯಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೆಎಲ್ ರಾಹುಲ್ ಆಯ್ಕೆಯ ಮಾನದಂಡದ ಬಗ್ಗೆಯೇ ಪ್ರಶ್ನೆಯನ್ನು ಎತ್ತಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಿಂದ ಟೆಸ್ಟ್ ತಂಡದಿಂದ ಸ್ಥಾನವನ್ನು ಕಳೆದುಕೊಂಡಿದ್ದ ರಾಹುಲ್ ನ್ಯೂಜಿಲೆಂಡ್ ವಿರುದ್ದದ ಸರಣಿಯಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಆದರೆ ಸೀಮಿತ ಓವರ್‌ಗಳಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ರಾಹುಲ್ ಐಪಿಎಲ್‌ನಲ್ಲೂ ಈ ಫಾರ್ಮ್ ಮುಂದುವರಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಉಪನಾಯಕನಾಗಿಯೂ ಆಯ್ಕೆಯಾಗಿರುವ ರಾಹುಲ್ ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

ರಾಹುಲ್ ಆಯ್ಕೆ ಬಗ್ಗೆ ಮಂಜ್ರೇಕರ್ ಪ್ರಶ್ನೆ
ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ರಾಹುಲ್ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಬಗ್ಗೆ ಟ್ವಿಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. "ಐಪಿಎಲ್ ಪ್ರದರ್ಶನವನ್ನು ಗಮನಿಸಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವುದು ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿಯಾಗುತ್ತದೆ. ಅದರಲ್ಲೂ ಕಳೆದ ಕೆಲ ಟೆಸ್ಟ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರನ ಆಯ್ಕೆ. ಆಟಗಾರ ಯಶಸ್ಸು ಕಾಣುತ್ತಾನೋ ಇಲ್ಲವೋ ಬೇರೆ ಪ್ರಶ್ನೆ. ಆದರೆ ಈ ರೀತಿಯ ಆಯ್ಕೆಗಳು ರಣಜಿ ಆಟಗಾರರಿಗೆ ಸಾಕಷ್ಟು ನಿರಾಸೆ ಮೂಡಿಸುತ್ತದೆ ಎಂದಿದ್ದಾರೆ" ಎಂದು ಟ್ವುಟ್ ಮಾಡಿದ್ದಾರೆ.

ಶ್ರೀಕಾಂತ್ ಕಿಡಿ
ಸಂಜಯ್ ಮಂಜ್ರೇಕರ್ ಅವರ ಅಭಿಪ್ರಾಯಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಕ್ರಿಸ್ ಶ್ರೀಕಾಂತ್ ಕಟು ಮಾತುಗಳಲ್ಲಿ ತಿರುಗೇಟು ನೀಡಿದ್ದಾರೆ. "ಸಂಜಯ್ ಏನು ಮಾತನಾಡುತ್ತಿದ್ದಾರೆ ಅದು ರಬ್ಬಿಶ್, ನಾನು ಅದಕ್ಕೆ ಒಪ್ಪಲಾರೆ" ಎಂದು ನೆರವಾಗಿಯೇ ಹೇಳಿದ್ದಾರೆ ಕ್ರಿಸ್ ಶ್ರೀಕಾಂತ್

ಯೂಟ್ಯೂಬ್ ಚಾನೆಲ್‌ನಲ್ಲಿ ಮಂಜ್ರೇಕರ್ ವಿರುದ್ಧ ಟೀಕೆ
ಕ್ರಿಸ್ ಶ್ರೀಕಾಂತ್ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡುತ್ತಾ ಕೆಎಲ್ ರಾಹುಲ್ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಂಜ್ರೇಕರ್ ಹೇಳಿಕೆಯನ್ನು ಉದ್ದೇಶಿಸಿ "ಸಂಜಯ್ ಮಂಜ್ರೇಕರ್ ಅವರನ್ನು ಏಕಾಂಗಿಯಾಗಿ ಬಿಟ್ಟುಬಿಡಿ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ" ಎಂದು ಜರಿದಿದ್ದಾರೆ.

'ಬಾಂಬೆ' ಬಿಟ್ಟು ಯೋಚಿಸಲು ಬರುವುದಿಲ್ಲ
"ಸಂಜಯ್ ಮಂಜ್ರೇಕರ್ 'ಬಾಂಬೆ' ಬಿಟ್ಟು ಬೇರೆ ಯೋಚನೆ ಮಾಡುವುದಿಲ್ಲ. ಅದು ಅವರ ಸಮಸ್ಯೆ. ನಾವು ತಟಸ್ಥರಾಗಿ ಮಾತನಾಡುತ್ತೇವೆ. ಆದರೆ ಮಂಜ್ರೇಕರ್ ಬಾಂಬೆ ಹೊರತುಪಡಿಸಿ ಯೋಚಿಸಲಾರರು. ಮಂಜ್ರೇಕರ್ ತರದ ವ್ಯಕ್ತಿಗಳಿಗೆ ಎಲ್ಲವೂ ಬಾಂಬೆ, ಬಾಂಬೆ ಹಾಗೂ ಬಾಂಬೆ. ಅವರು ಬಾಂಬೆ ಹೊರತುಪಡಿಸಿ ಯೋಚಿಸಬೇಕು" ಎಂದು ಶ್ರೀಕಾಂತ್ ಮಂಜ್ರೇಕರ್ ಟ್ವೀಟ್‌ಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications