T20 World Cup: ಸಂಜಯ್ ಮಾಂಜ್ರೇಕರ್ ತಂಡದಲ್ಲಿ ಸ್ಟಾರ್ ಆಟಗಾರರಿಗೆ ಗೇಟ್ ಪಾಸ್
ಪ್ರಸ್ತುತ ನಡೆಯುತ್ತಿರುವ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ 2024 ಮುಗಿಯುತ್ತಿದ್ದಂತೆ ಎಲ್ಲರ ಗಮನ ಟಿ 20 ಪುರುಷರ ವಿಶ್ವಕಪ್ ಕಡೆ ಜಾರಲಿದೆ. ಈ ಚುಟುಕು ಕ್ರಿಕೆಟ್ ವಿಶ್ವ ಸಮರಕ್ಕೆ ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ ಸಾರಥ್ಯ ವಹಿಸಿವೆ.
ಈ ಟೂರ್ನಿಯಲ್ಲಿ ವಿಶ್ವದ 20 ತಂಡಗಳು ಕಣಕ್ಕೀಳಿಯುತ್ತಿದ್ದು, ಪ್ರತಿಯೊಂದು ತಂಡವು ಬಲಿಷ್ಠವಾಗಿ ಮೈದಾನಕ್ಕೆ ಬರಲು ಸಿದ್ಧತೆ ನಡೆಸಿವೆ. ಅದರಂತೆ ಭಾರತ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜೋರಾಗಿದೆ. ಅಧಿಕೃತವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಿ 20 ವಿಶ್ವಕಪ್ ಟೂರ್ನಿಗೆ ಆಟಗಾರ ಹೆಸರನ್ನು ಘೋಷಣೆ ಮಾಡಿಲ್ಲ.

ಆದರೂ ಮಾಜಿ ಕ್ರಿಕೆಟ್ ದಿಗ್ಗಜರು ತಮ್ಮ ಸಂಭಾವ್ಯ ತಂಡದಲ್ಲಿರುವ ಇರುವ ಆಟಗಾರ ಹೆಸರನ್ನು ಬಹಿರಂಗಪಡಿಸುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರು ಬಹಿರಂಗಪಡಿಸಿದವರಲ್ಲಿ ಸ್ಟಾರ್ ಆಟಗಾರರು ಕಣ್ಮರೆಯಾಗಿರುವುದು ಅಚ್ಚರಿ ಉಂಟು ಮಾಡಿದೆ.
ಎಲ್ಲರಂತೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಕೂಡ ತಮ್ಮ ಟಿ 20 ವಿಶ್ವಕಪ್‌ನ ಸಂಭ್ಯಾವ ತಂಡವನ್ನು ಹೆಸರಿಸಿದ್ದಾರೆ. ಈ ಸಂಭ್ಯಾವ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ (ನಾಯಕ) ಮತ್ತು ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಮತ್ತು ಕೆ.ಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಮಾಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್, ರಿಷಬ್ ಪಂತ್ (ವಿ.ಕೀ), ಅವರನ್ನು ಆಯ್ಕೆ ಮಾಡಿದ್ದಾರೆ. ಆಲ್ ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಮತ್ತು ಕೃನಾಲ್ ಪಾಂಡ್ಯ ಇದ್ದಾರೆ. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್ ಇದ್ದು, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ಹರ್ಷಿತ್ ರಾಣಾ, ಮಯಾಂಕ್ ಯಾದವ್ ವೇಗಿಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ಈ 15 ಆಟಗಾರರ ಪಟ್ಟಿಯಿಂದ ರನ್ ಮಷಿನ್ ಖ್ಯಾತಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಆರಂಭಿಕ ಶುಭ್ಮನ್ ಗಿಲ್ ಹಾಗು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಸಂಜಯ್ ಮಾಂಜ್ರೇಕರ್ ಕೈ ಬಿಟ್ಟಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮವಾಗಿ ರನ್ ಕಲೆ ಹಾಕುತ್ತಿದ್ದಾರೆ.
ಆದರೆ ಕೊಹ್ಲಿ ಸ್ಟ್ರೆಟ್ ರೇಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಟಿ20 ವಿಶ್ವಕಪ್‌ನಲ್ಲಿ ಪುನರವರ್ತನೆಯಾದರೆ ಟೀಮ್ ಇಂಡಿಯಾ ಬೃಹತ್ ರನ್ ಗಳಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ವಿರಾಟ್ ಕೊಹ್ಲಿ ಹೆಸರನ್ನು ಬಿಟ್ಟಿರಬಹುದು ಎನ್ನಲಾಗಿದೆ.
ಇನ್ನೊಂದೆಡೆ ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಆಡುತ್ತಿದ್ದ ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಆಟವಾಡಿದ್ದರು. ಹೀಗಾಗಿಯೇ ಎರಡು ಬಾರಿಯೂ ಗುಜರಾತ್ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಮುಂಬೈ ಇಂಡಿಯನ್ಸ್‌ಗೆ ಪುನರಾಗಮನ ಮಾಡಿದ ಹಾರ್ದಿಕ್ ಸತತ ವೈಫಲ್ಯಗಳನ್ನು ಕಂಡಿದ್ದಾರೆ.ಶುಭ್ಮನ್ ಗಿಲ್ ಕೂಡ ಫಾರ್ಮ್ ಕಳೆದುಕೊಂಡಿದ್ದಾರೆ. ಜೊತೆಗೆ ಇಶಾನ್ ಕಿಶಾನ್, ಶ್ರೇಯಸ್ ಅಯ್ಯರ್ ಹೆಸರನ್ನು ಸಂಜಯ್ ಮಾಂಜ್ರೇಕರ್ ಹೆಸರಿಸಿಲ್ಲ
ಸಂಜಯ್ ಮಾಂಜ್ರೇಕರ್ ಟಿ 20 ವಿಶ್ವಕಪ್ ತಂಡ ಹೀಗಿದೆ :
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ಕೆ.ಎಲ್ ರಾಹುಲ್ (ವಿ.ಕೀ), ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ಕೃನಾಲ್ ಪಾಂಡ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications