Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಂಜ್ರೇಕರ್ ಆಯ್ಕೆಯ ಐಪಿಎಲ್ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ?

Sanjay Manjrekar Picks His Best IPL 2020 XI for IPL 2020

ಟೀಂ ಇಂಡಿಯಾದ ಮಾಜಿ ಆಟಗಾರ ಕಮ್ ಕಾಮೆಂಟೆಟರ್ ಸಂಜಯ್ ಮಂಜ್ರೇಕರ್ ಅವರು ಐಪಿಎಲ್ 2020ಕ್ಕಾಗಿ ತಮ್ಮ ಆಯ್ಕೆಯ ಅತ್ಯುತ್ತಮ ಇಲೆವೆನ್ ಪ್ರಕಟಿಸಿದ್ದಾರೆ. ಮಂಜೇಕ್ರರ್ ಆಯ್ಕೆಯ ತಂಡದಲ್ಲಿ.. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಯಾವುದೇ ಅವಕಾಶವಿಲ್ಲ!

ಕೊರೊನಾವೈರಸ್ ಅಡೆತಡೆಗಳ ನಡುವೆ ಆಯೋಜನೆಗೊಂಡಿರುವ ಐಪಿಎಲ್ ಭರ್ಜರಿ ಯಶಸ್ಸನ್ನು ಕಂಡಿದೆ. ನಾಲ್ಕು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಯಾವ ತಂಡ ಆಡಲಿದೆ ಎಂಬುದು ಭಾನುವಾರದಂದು ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ನಿರ್ಧರಿಸಲಿದೆ. ಈ ನಡುವೆ ಮಂಜೇಕ್ರರ್ ತಮ್ಮ ತಂಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಇಬ್ಬರನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಕಾರಣವನ್ನು ನೀಡಿದ್ದಾರೆ.

ಸೂರ್ಯಕುಮಾರ್ ಯಾದವ್ ಆಯ್ಕೆ

ಸೂರ್ಯಕುಮಾರ್ ಯಾದವ್ ಆಯ್ಕೆ

ಕೊಹ್ಲಿಯನ್ನು ತೆಗೆದುಕೊಳ್ಳದೆ ಸೂರ್ಯ ಕುಮಾರ್ ಯಾದವ್ ಆಯ್ಕೆ ಏಕೆ ಎಂಬುದಕ್ಕೆ ಸಂಜಯ್ ಕಾರಣ ನೀಡಿದ್ದಾರೆ.''ನನ್ನ ತಂಡದ 3 ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸೂರ್ಯ ಕುಮಾರ್ ಯಾದವ್, ಐಪಿಎಲ್ ನಲ್ಲಿ ಸ್ಥಿರವಾದ ಪ್ರದರ್ಶನವೇ ಆಯ್ಕೆಗೆ ಕಾರಣ. ಬೇರೆ ಆಟಗಾರರು ಈ ಕ್ರಮಾಂಕದಲ್ಲಿ ಹೆಚ್ಚು ರನ್ ಗಳಿಸಿಲ್ಲ. ಜೊತೆಗೆ ರನ್ ಗಳಿಸುವುದರ ಬಗ್ಗೆ ಮಾತ್ರವಲ್ಲ. ಯಾದವ್ ಗುಣಮಟ್ಟದ ಹೊಡೆತಗಳಿಂದ ನಾನು ಪ್ರಭಾವಿತನಾಗಿದ್ದೇನೆ ''ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಕರ್ನಾಟಕದ ಆರಂಭಿಕ ಜೋಡಿ

ಕರ್ನಾಟಕದ ಆರಂಭಿಕ ಜೋಡಿ

ಈ ಐಪಿಎಲ್ ಆರಂಭದ ಪಂದ್ಯಗಳಲ್ಲಿ ಸಕತ್ ಮಿಂಚಿದ ಕರ್ನಾಟಕ ಆಟಗಾರರಾದ ಮಾಯಾಂಕ್ ಅಗರ್ವಾಲ್ ಮತ್ತು ಕೆ.ಎಲ್. ರಾಹುಲ್ ಅವರನ್ನು ಮಂಜ್ರೇಕರ್ ಅವರು ತಮ್ಮ ತಂಡದ ಆರಂಭಿಕ ಜೋಡಿ ಎಂದು ಆಯ್ಕೆ ಮಾಡಿದ್ದಾರೆ. ಎಬಿ ಡಿವಿಲಿಯರ್ಸ್ ಮತ್ತು ನಿಕೋಲಸ್ ಪೂರನ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಎಬಿಡಿ ನಾಲ್ಕನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದೇ ರೀತಿ ಕಿಂಗ್ಸ್ ಎಲೆವನ್ ಪಂಜಾಬ್‌ನ ಅದ್ಭುತ ಪ್ರದರ್ಶನದಿಂದ ನಿಕೋಲಸ್ ಪೂರನ್ ತಂಡದಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಪ್ರಮುಖ ಸ್ಪಿನ್ನರ್ ಬ್ಯಾಟ್ಸ್ ಮನ್ ಅಕ್ಷರ್ ಪಟೇಲ್

ಪ್ರಮುಖ ಸ್ಪಿನ್ನರ್ ಬ್ಯಾಟ್ಸ್ ಮನ್ ಅಕ್ಷರ್ ಪಟೇಲ್

ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಅಕ್ಷರ್ ಪಟೇಲ್ ಅವರನ್ನು ತಮ್ಮತಂಡದ ಆಲ್‌ರೌಂಡರ್ ಆಗಿ ಆಯ್ಕೆ ಮಾಡಿಕೊಂಡಿರುವ ಮಂಜ್ರೇಕರ್, ಈ ಋತುವಿನಲ್ಲಿ ಅಕ್ಷರ್ ಕಡಿಮೆ ರನ್ ಸರಾಸರಿಯಲ್ಲಿ ರನ್ ನೀಡಿದ್ದರೆ ಅಲ್ಲದೆ, ತಂಡ ಕಠಿಣ ಸಂದರ್ಭಗಳಲ್ಲಿ ತಂಡದ ಪರವಾಗಿ ನಿಂತು ವಿಕೆಟ್ ಗಳಿಸಿದ್ದಾರೆ. ಅಲ್ಲದೆ, ಬ್ಯಾಟಿಂಗ್ ಆಲ್‌ರೌಂಡರ್ ಆಗಿ ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.

ವೇಗಿ ರಬಾಡಾಗೆ ಅವಕಾಶವಿಲ್ಲ

ವೇಗಿ ರಬಾಡಾಗೆ ಅವಕಾಶವಿಲ್ಲ

ದೆಹಲಿಯ ಕ್ಯಾಪಿಟಲ್ಸ್‌ನ ಪ್ರಮುಖ ವೇಗಿ ಕಗಿಸೊ ರಬಾಡ ಅವರನ್ನು ಸಂಜಯ್ ಮಂಜ್ರೇಕರ್ ನಿರ್ಲಕ್ಷಿಸಿದ್ದಾರೆ. ಮಂಜ್ರೇಕರ್ ಅವರು ಜಸ್ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್ ಮತ್ತು ಮೊಹಮ್ಮದ್ ಶಮಿ ಅವರನ್ನು ಮೂವರು ವೇಗಿಗಳಾಗಿ ಆಯ್ಕೆ ಮಾಡಿದ್ದಾರೆ. ಅಲ್ಲದೆ ಸ್ಪಿನ್ನರ್ ಗಳಾಗಿ ರಶೀದ್ ಖಾನ್ ಮತ್ತು ಯುಜ್ವೇಂದ್ರ ಚಾಹಲ್ ಆಯ್ಕೆ ನಿರೀಕ್ಷಿತವಾಗಿದೆ.

ಮಂಜ್ರೇಕರ್ ಅತ್ಯುತ್ತಮ ಐಪಿಎಲ್ ಇಲೆವೆನ್:

ಕೆ.ಎಲ್. ರಾಹುಲ್ (ಕೀಪರ್), ಮಾಯಾಂಕ್ ಅಗರ್ವಾಲ್, ಸೂರ್ಯ ಕುಮಾರ್ ಯಾದವ್, ಎಬಿ ಡಿವಿಲಿಯರ್ಸ್, ನಿಕೋಲಸ್ ಪೂರನ್, ಅಕ್ಷರ್ ಪಟೇಲ್, ರಶೀದ್ ಖಾನ್, ಜೋಫ್ರಾ ಆರ್ಚರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

Story first published: Monday, November 9, 2020, 13:11 [IST]
Other articles published on Nov 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+