Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ or ಚೆನ್ನೈ: ನೆಚ್ಚಿನ ಐಪಿಎಲ್ ತಂಡ ಹೆಸರಿಸಿದ ಸಂಜಯ್ ಮಂಜ್ರೇಕರ್

Sanjay Manjrekar picks which side holds the edge in IPL

ಮುಂಬೈ, ಏಪ್ರಿಲ್ 6: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಪಾರಮ್ಯ ಮೆರೆದಿರುವ ಎರಡು ತಂಡಗಳು. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಿಎಸ್‌ಕೆಯನ್ನು ಮುನ್ನಡೆಸುತ್ತಿದ್ದರೆ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಎಂಐ ನಾಯಕತ್ವ ವಹಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ಮುಂಬೈ ಇಂಡಿಯನ್ಸ್ ಇನ್ನಷ್ಟು ಸುಧಾರಣೆ ತೋರಿಕೊಂಡಿತ್ತು. ಅಲ್ಲದೆ ಹೆಚ್ಚು ಅದೃಷ್ಟಶಾಲಿ ತಂಡವಾಗಿಯೂ ಗುರುತಿಸಿಕೊಂಡಿತ್ತು. ಐಪಿಎಲ್‌ನ ಬಲಿಷ್ಟ ತಂಡಗಳಾದ ಮುಂಬೈ ಮತ್ತು ಚೆನ್ನೈಯಲ್ಲಿ ತನ್ನ ನೆಚ್ಚಿನ ತಂಡ ಯಾವುದೆಂದು ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೇಳಿಕೊಂಡಿದ್ದಾರೆ.

ಮುಂಬೈ ಮತ್ತು ಚೆನ್ನೈ ತಂಡಗಳಲ್ಲಿ ಎಂಐ ಎದುರಾಳಿಗೆ ಹೆಚ್ಚು ಸವಾಲೊಡ್ಡುವ ತಂಡವೆಂದು ಮಂಜ್ರೇಕರ್ ಹೇಳಿದ್ದಾರೆ. ಸಿಎಸ್‌ಕೆ ಮತ್ತು ಎಂಐ ತಂಡಗಳಲ್ಲಿ ಎಂಐ ಹೆಚ್ಚು ಸವಾಲೊಡ್ಡಬಲ್ಲ ತಂಡ. ಮುಂಬೈಯ ಜಯದ ಶೇಕಡವೂ ಹೆಚ್ಚಿದೆ ಎಂದು ಮಂಜ್ರೇಕರ್ ಅಭಿಪ್ರಾಯಿಸಿದ್ದಾರೆ.

'ಐಪಿಎಲ್ ಆರಂಭವಾಗಿ 12 ವರ್ಷಗಳು ಕಳೆದಿವೆ. ಟೂರ್ನಿಯಲ್ಲಿ ತಂಡಗಳ ವಿಜಯದ ಶೇಕಡಾವಾರು ತೆಗೆದರೆ, ಗೆಲುವಿನ ದಾಖಲೆಗಳನ್ನು ಗಮನಿಸಿದರೆ, ಸಿಎಸ್‌ಕೆ ಎದ್ದು ಕಾಣುತ್ತದೆ. ಆದರೆ ಮುಂಬೈ ಇನ್ನೂ ಹೆಚ್ಚಿಗೆ ಹೊಳೆಯುತ್ತದೆ. ಮಂಬೈ 4 ಬಾರಿ ಟ್ರೋಫಿ ಗೆದ್ದಿದೆ. ಆದರೆ ಚೆನ್ನೈ ಕಡಿಮೆ ಪಂದ್ಯಗಳನ್ನಾಡಿ 3 ಬಾರಿ ಪ್ರಶಸ್ತಿ ಗೆದ್ದಿದೆ. ಗಮನಿಸಿದರೆ ಚೆನ್ನೈಗೆ ಮುಂಬೈ ಹೆಚ್ಚು ಭೀತಿ ಮೂಡಿಸಿದ ತಂಡವಾಗಿ ತೋರುತ್ತದೆ,' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಸಂಜಯ್ ವಿವರಿಸಿದರು.

Story first published: Monday, April 6, 2020, 14:08 [IST]
Other articles published on Apr 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+