Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆ.ಎಲ್ ರಾಹುಲ್ ಕ್ರಮಾಂಕದ ಬಗ್ಗೆ ಹೇಳಿಕೆ ನೀಡಿದ ಸಂಜಯ್ ಮಂಜ್ರೇಕರ್

Sanjay Manjrekar Says Kl Rahul ‘Right Fit’ For Number 5 Slot In Odis

ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಐದನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರ ಎಂಬ ಮಾತನ್ನು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಟೀಮ್ ಇಂಡಿಯಾದಲ್ಲಿ ರಾಹುಲ್ ಆರನೇ ಕ್ರಮಾಂಕದವರೆಗೆ ಎಲ್ಲಾ ಕ್ರಮಾಂಕದಲ್ಲೂ ಆಡಿದ್ದಾರೆ.

ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದು ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಈ ಸಂದರ್ಭದಲ್ಲಿ ರಾಹುಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ ಎಂಬ ಮಾತನ್ನು ಮಂಜ್ರೇಕರ್ ಹೇಳಿದ್ದಾರೆ.

ಐದನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಯುವರಾಜ್ ಸಿಂಗ್ ಸುರೇಶ್ ರೈನಾ ಅವರಂತಾ ಆಟಗಾರನ ಅವಶ್ಯಕತೆಯಿದೆ. ಕೆ.ಎಲ್ ರಾಹುಲ್ ಈ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಅಭಿಪ್ರಾಯಯವನ್ನು ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಂಜ್ರೇಕರ್ ಒಂದು ವೇಳೆ ಕೆ.ಎಲ್ ರಾಹುಲ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಮುಂದುವರಿಸುವ ಅಗತ್ಯ ಬಂದಲ್ಲಿ ಐದನೇ ಕ್ರಮಾಂಕಕ್ಕೆ ಯುವರಾಜ್ ಸಿಂಗ್ ಅಥವಾ ಸುರೇಶ್ ರೈನಾ ಅವರಂತಾ ಆಟಗಾರರನ್ನು ಹುಡುಕಬೇಕು ಎಂದಿದ್ದಾರೆ.

ಸಂಜಯ್ ಮಂಜ್ರೇಕರ್ ಇದೇ ಸಂದರ್ಭದಲ್ಲಿ ನಾಲ್ಕನೇ ಕ್ರಮಾಂಕ ಮತ್ತು ಆಲ್‌ರೌಂಡರ್ ಆಗಿ ಯಾರು ಸೂಕ್ತ ಎಂಬುದನ್ನು ಹೇಳಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯಾ ಮುಂದಿನ ವಿಶ್ವಕಪ್‌ನಲ್ಲಿ ಆಡುವುದು ಸೂಕ್ತ ಎಂದು ಮಂಜ್ರೇಕರ್ ಅಭಿಪ್ರಾಯವನ್ನು ತಿಳಿಸಿದ್ದಾರೆ.

Story first published: Monday, March 23, 2020, 17:22 [IST]
Other articles published on Mar 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+