Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜಿನಲ್ಲಿ ವಿ ಐಯ್ಯರ್ ಬೆಲೆ ಊಹಿಸಿದ ಸಂಜಯ್ ಮಂಜ್ರೇಕರ್

Sanjay Manjrekar thinks Venkatesh Iyer will get 12 to 14 crores in upcoming IPL mega auction

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ವೆಂಕಟೇಶ್ ಐಯ್ಯರ್ ಬಹಳ ಮಿಂಚುತ್ತಿದ್ದಾರೆ. ಯುವ ಓಪನರ್ ಆಗಿರುವ ವಿ ಅಯ್ಯರ್ ಆಲ್ ರೌಂಡರ್ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕರಾಗಿ ಬಂದು ಅಯ್ಯರ್ ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 41, 53, 18, 14, 67 ರನ್ ಗಳಿಸಿದ್ದಾರೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್‌ 1) ನಡೆದ ಐಪಿಎಲ್ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್‌ ಜಯ ಗಳಿಸಿತ್ತು. ಈ ಪಂದ್ಯದಲ್ಲೂ ವೆಂಕಟೇಶ್ ಐಯ್ಯರ್ ಉತ್ತಮ ಪ್ರದರ್ಶನ ನೀಡಿದ್ದರು. 67 ರನ್, 1 ವಿಕೆಟ್‌ ಕೂಡ ಪಡೆದಿದ್ದರು. ಹೀಗಾಗಿ ಐಪಿಎಲ್‌ನಲ್ಲಿ ವೆಂಕಟೇಶ್ ಈಗ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಮುಂದಿನ ವರ್ಷ ಐಪಿಎಲ್ 15ನೇ ಆವೃತ್ತಿಗೂ ಮುನ್ನ ಮೆಗಾ ಆಕ್ಷನ್ ನಡೆಯಲಿದೆ. ಆ ವೇಳೆ ಎಲ್ಲಾ ತಂಡಗಳಲ್ಲೂ ಪ್ರಮುಖ ಆಟಗಾರರು ಅದಲು ಬದಲಾಗಲಿದ್ದಾರೆ. ಈ ವೇಳೆ ಅಯ್ಯರ್ ಅವರು ಹರಾಜು ಕಣದಲ್ಲಿದ್ದರೆ ಎಷ್ಟು ಮೊತ್ತಕ್ಕೆ ಹರಾಜಾಗಬಹುದು ಅನ್ನೋದನ್ನು ಮಾಜಿ ಕ್ರಿಕೆಟರ್, ಈಗ ಕಾಮೆಂಟೇಟರ್ ಆಗಿರುವ ಸಂಜಯ್ ಮಂಜ್ರೇಕರ್ ಊಹಿಸಿದ್ದಾರೆ.

"ವೆಂಕಟೇಶ್ ಅಯ್ಯರ್ ಮುಂದಿನ ಹರಾಜಿನಲ್ಲಿ ಏನಿಲ್ಲವೆಂದರೂ 12-14 ಕೋಟಿ ರೂ.ಗೆ ಹೋಗುತ್ತಾರೆ ಎಂದು ನನಗನ್ನಿಸುತ್ತಿದೆ. ಯಾಕೆಂದರೆ ಅವರು ಅಂಥ ಪ್ರದರ್ಶನ ನೀಡುತ್ತಿದ್ದಾರೆ. ನಾನವರ ಪ್ರಥಮದರ್ಜೆ ಕ್ರಿಕೆಟ್ ಮತ್ತು ಲಿಸ್ಟ್‌ ಎ ದಾಖಲೆಗಳನ್ನು ನೋಡಿದೆ. ಅದು ಅಸಾಮಾನ್ಯವಾಗಿದೆ," ಎಂದು ಮಂಜ್ರೇಕರ್ ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಹೇಳಿಕೊಂಡಿದ್ದಾರೆ.

Story first published: Saturday, October 2, 2021, 16:19 [IST]
Other articles published on Oct 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+