ರೋಹಿತ್‌ಗೆ ಅರ್ಧ ನೀಡಿ, ಇನ್ನರ್ಧದಲ್ಲಿ 22 ಆಟಗಾರರನ್ನು ನಿಭಾಯಿಸುವುದು ಹೇಗೆ?
ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿ ರೋಚಕತೆ ಹುಟ್ಟಿಸಿದೆ. ಈ ಲೀಗ್‌ಗೆ ಇನ್ನು ಸಾಕಷ್ಟು ದಿನಗಳು ಬಾಕಿ ಇದ್ದರೂ ಸಹ, ಮೆಗಾ ಹರಾಜು ನಡೆಯಲಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿದೆ. ಟೀಮ್ ಇಂಡಿಯಾದ ನಾಯಕ, ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಯಾವ ತಂಡಕ್ಕೆ ಸೇಲ್ ಆಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಐಪಿಎಲ್ ಮೆಗಾ ಹರಾಜಿಗೆ ಮಾಲೀಕರು ಇನ್ನು ತಮ್ಮ ತಂಡದಲ್ಲಿ ಉಳಿಸಿಕೊಂಡ ಆಟಗಾರರು ಹಾಗೂ ಕೈ ಬಿಟ್ಟ ಆಟಗಾರರ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕ ಬಳಿಕವೇ ರೋಹಿತ್ ಶರ್ಮಾ ಹರಾಜು ಅಂಗಳಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈಗಾಗಲೇ ಈ ಬಗ್ಗೆ ಊಹಾಪೋಹಗಳು ಆರಂಭವಾಗಿವೆ.

ಸಂಜೀವ್ ಗೋಯೆಂಕಾ ಹೇಳಿದ್ದೇನು?
ಟೀಮ್ ಇಂಡಿಯಾದ ಸ್ಟಾರ್ ನಾಯಕ ರೋಹಿತ್ ಶರ್ಮಾ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹಲವು ತಂಡಗಳು ಆಸಕ್ತಿ ಹೊಂದಿವೆ ಎಂದು ತಿಳಿದು ಬಂದಿದೆ. ಈ ಪಟ್ಟಿಯಲ್ಲಿ ಎಲ್‌ಎಸ್‌ಜಿ ತಂಡ ಸಹ ಒಂದು. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಹಲವು ಕುತೂಹಲ ಕಾರಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ರೋಹಿತ್‌ಗೆ ಮಣೆ ಹಾಕುತ್ತಾ LSG?
ಹಿಟ್‌ಮ್ಯಾನ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಾಲಿದೆ. ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಅವರನ್ನು ಕೊಳ್ಳಲು 50 ಕೋಟಿ ರೂಪಾಯಿಗಳನ್ನು ಎತ್ತಿಡಲಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ವಿಷಯದ ಬಗ್ಗೆ ಗೋಯೆಂಕಾ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ಹರಾಜಿಗೆ ಬಿಡುತ್ತದೋ ಇಲ್ಲವೋ ತಿಳಿದಿಲ್ಲ. ಈಗ ಹಬ್ಬಿರುವ ಊಹಾಪೋಹಗಳು ಅನಗತ್ಯವಾಗಿವೆ. ಅವರನ್ನು ಮುಂಬೈ ಇಂಡಿಯನ್ಸ್ ಕೈ ಬಿಡುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸಹ ಸ್ಪಷ್ಟತೆ ಇಲ್ಲ. ರೋಹಿತ್ ಹರಾಜಿಗೆ ಬಂದರೂ, ಒಬ್ಬ ಆಟಗಾರನಿಗೆ ನಿಮ್ಮ ಸಂಬಳದ 50 ಪ್ರತಿಶತವನ್ನು ನೀಡಿದರೆ, ಉಳಿದ 22 ಆಟಗಾರರನ್ನು ಹೇಗೆ ನಿರ್ವಹಿಸುತ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಉತ್ತರವನ್ನು ಕೇಳಿದ ಬಳಿಕ ಸಂದರ್ಶಕ ಮತ್ತೊಂದು ಪ್ರಶ್ನೆ ಹಾಕಿದರು. ರೋಹಿತ್ ಶರ್ಮಾ ನಿಮ್ಮ ಶಾರ್ಟ್ ಲೀಸ್ಟ್‌ನಲ್ಲಿ ಇದ್ದಾರಾ ಎಂದು ಕೇಳಿದರು. ಅದಕ್ಕೆ ಗೋಯೆಂಕಾ, ಇದು ಅವರನ್ನು ಶಾರ್ಟ್ ಲೀಸ್ಟ್ ಮಾಡುವುದರ ಮೇಲೆ ನಿಂತಿಲ್ಲ. ನೀವು ಎಂದಿಗೂ ಬೆಸ್ಟ್ ಪ್ಲೇಯರ್, ಬೆಸ್ಟ್ ನಾಯಕ, ಬೆಸ್ಟ್ ಆಟಗಾರನನ್ನು ತಂಡದಲ್ಲಿ ಬಯಸುತ್ತೀರಿ. ನೀವು ಯಾರನ್ನು ಬಯಸುತ್ತೀರಿ ಎಂಬುದಕ್ಕಿಂತಲೂ ನಿಮ್ಮಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಂಡದ ಅಗತ್ಯತೆಗೆ ಅನುಗುಣವಾಗಿ ಆಟಗಾರರಿಗೆ ಮಣೆ ಹಾಕುವುದು ಸೂಕ್ತ ಎಂದಿದ್ದಾರೆ.
ಇತ್ತೀಚಿಗೆ ಎಲ್‌ಎಸ್‌ಜಿ ಮಾಲೀಕರು ಒಂದು ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಎಲ್‌ಎಸ್‌ಜಿ ನಾಯಕತ್ವದ ಹುಡುಕಾಟದಲ್ಲಿರುವುದಾಗಿ ತಿಳಿದು ಬಂದಿದೆ. ಅಷ್ಟೇ ಅಲ್ಲ ತಮ್ಮ ತಂಡದಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಳ್ಳಲು ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿದೆ. ಇನ್ನು ಕೆಎಲ್ ರಾಹುಲ್ ಆಟ ಮಾಲೀಕರಿಗೆ ಇಷ್ಟವಾಗಿದ್ದು, ಅವರನ್ನು ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications