IPL 2025: ರಿಟೆನ್ಷನ್ ಬಳಿಕ ಕೆಎಲ್ ರಾಹುಲ್ ವಿರುದ್ಧ ಲಕ್ನೋ ಮಾಲೀಕ ವಾಗ್ದಾಳಿ
ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಫ್ರಾಂಚೈಸಿ ಐಪಿಎಲ್ 2025 ಟೂರ್ನಿಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೂವರು ಕ್ಯಾಪ್ಡ್ ಆಟಗಾರರಿದ್ದರೆ, ಇನ್ನಿಬ್ಬರು ಅನ್‌ಕ್ಯಾಪ್ಡ್ ಆಟಗಾರರು ಸೇರಿದ್ದಾರೆ. ಆದರೆ ಎಲ್‌ಎಸ್‌ಜಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ತಂಡದ ನಾಯಕ ಕೆಎಲ್ ರಾಹುಲ್ ಹೆಸರು ಕಾಣೆಯಾಗಿದೆ.
ಕೆಎಲ್ ರಾಹುಲ್ ಅವರು ಲಕ್ನೋ ತಂಡದಿಂದ ಹೊರ ಬಂದಿದ್ದು, ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ರಿಟೆನ್ಷನ್ ಬಳಿಕ ಕೆಎಲ್ ರಾಹುಲ್ ವಿರುದ್ಧಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಬಗ್ಗೆ ಸಾರ್ವಜನಿಕವಾಗಿ ನಾಲಿಗೆ ಹರಿಬಿಟ್ಟಿದ್ದಾರೆ. ಪರೋಕ್ಷವಾಗಿ ಕನ್ನಡಿಗ ಕೆಎಲ್ ರಾಹುಲ್ ವಿರುದ್ಧ ಸಂಜೀವ್ ಗೋಯೆಂಕಾ ವಾಗ್ದಾಳಿ ನಡೆಸಿದ್ದಾರೆ.

2022ರ ಐಪಿಎಲ್ ಆವೃತ್ತಿಯಿಂದ ಕೆಎಲ್ ರಾಹುಲ್ ಲಕ್ನೋ ತಂಡದ ನಾಯಕರಾಗಿದ್ದರು. ರಾಹುಲ್ ಅವರು ತಮ್ಮ ನಾಯಕ್ವತದಲ್ಲಿ ಲಕ್ನೋ ತಂಡವನ್ನು ಎರಡು ಬಾರಿ ಪ್ಲೇಆಫ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ ಎರಡೂ ಬಾರಿಯೂ ತಂಡ ಚಾಂಪಿಯನ್ ಆಗುವುದಕ್ಕೆ ಸಾಧ್ಯವಾಗಿರಲಿಲ್ಲ.
ಆದರೆ ಕಳೆದ ಆವೃತ್ತಿಯಲ್ಲಿ ರಾಹುಲ್ ನೇತೃತ್ವದ ಲಕ್ನೋ ತಂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಿರಲಿಲ್ಲ. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 7 ರಲ್ಲಿ ಗೆದ್ದರೆ, 7 ರಲ್ಲಿ ಸೋತು ಟೂರ್ನಿಯಿಂದ ಹೊರಗುಳಿದಿತ್ತು. ಇದರಿಂದ ನಾಯಕ ರಾಹುಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ನಿರ್ಧರಿಸಿದ್ದಾರೆ.
ಲಕ್ನೋ ಮಾಲೀಕ ಹೇಳಿದ್ದೇನು?
ಈಗ, ಎಲ್ಎಸ್‌ಜಿ ಉಳಿಸಿಕೊಂಡಿರುವ ಆಟಗಾರ ಪಟ್ಟಿಯನ್ನು ಬಿಡುಗಡೆಗೊಳಿಸಿದ ನಂತರ ಮಾತನಾಡಿರುವ ಮಾಲೀಕ ಸಂಜೀವ್ ಗೋಯೆಂಕಾ, ರಾಹುಲ್ ಅವರ ಹೆಸರನ್ನು ತೆಗೆದುಕೊಳ್ಳದೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. 'ತಮ್ಮ ಹಿತಾಸಕ್ತಿಗಾಗಿ ಅಲ್ಲ, ಗೆಲುವಿನ ಮನಸ್ಥಿತಿ ಹೊಂದಿರುವ ಮತ್ತು ತಂಡಕ್ಕಾಗಿ ಆಡುವಂತಹ ಆಟಗಾರರನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ. ಇದೀಗ ಸಂಜೀವ ಅವರ ಹೇಳಿಕೆ ಎಲ್ಲೆಡೆ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮತ್ತೊಂದೆಡೆ ಈ ಹೇಳಿಕೆಯಿಂದ ರಾಹುಲ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.
ಮನಸ್ತಾಪ
ಕಳೆದ ಬಾರಿಯ ಐಪಿಎಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋಲು ಕಂಡಿತ್ತು. ಪಂದ್ಯದ ನಂತರ ಮೈದಾನದಲ್ಲೇ ಕೆಎಲ್ ರಾಹುಲ್ ಅವರನ್ನು ಸಂಜೀವ್ ಗೋಯೆಂಕಾ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಾಹುಲ್ ತಂಡದಿಂದ ಹೊರ ಬರುವುದು ಅನುಮಾನ ಎನ್ನಲಾಗಿತ್ತು. ಇದೀಗ ಮೆಗಾ ಹರಾಜಿನಲ್ಲಿ ರಾಹುಲ್ ಅದೃಷ್ಟದ ಪರೀಕ್ಷೆ ಇಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications