ಇಂಗ್ಲೆಂಡ್ ಏಕದಿನ ಸರಣಿ: ಸಂಜು ಇನ್, ಯುವಿ ಔಟ್
ಮುಂಬೈ, ಆ.6: ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಯುವ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಆಗಸ್ಟ್ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿ ಮತ್ತು ಏಕೈಕ ಟಿ-20 ಪಂದ್ಯಕ್ಕೆ 17 ಸದಸ್ಯರ ಟೀಮ್ ಇಂಡಿಯಾವನ್ನ ಪ್ರಕಟಿಸಲಾಗಿದೆ.
ಟೀಂ ಇಂಡಿಯಾದಿಂದ ಯುವರಾಜ್ ಸಿಂಗ್ ಅವರನ್ನ ತಂಡದಿಂದ ಕೈಬಿಡಲಾಗಿದ್ದು, ಟೆಸ್ಟ್ ತಂಡದಲ್ಲಿರುವ ಗೌತಮ್ ಗಂಭೀರ್ ಕೂಡಾ ಅವಕಾಶ ಕಳೆದುಕೊಂಡಿದ್ದಾರೆ. ಕೇರಳದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಗೆ ಚೊಚ್ಚಲ ಅವಕಾಶ ಸಿಕ್ಕಿದೆ. ಕನ್ನಡಿಗ ಸ್ಟುವರ್ಟ್ ಬಿನ್ನಿಗೆ ಏಕದಿನ ಕ್ರಿಕೆಟ್ ನಲ್ಲೂ ಆಡುವ ಅವಕಾಶ ಲಭಿಸಿದೆ.
ಸಂಜು ಜೊತೆಗೆ ರೈಲ್ವೆಸ್ ಪರ ಆಡುವ 26 ವರ್ಷದ ಕರಣ್ ಗೂ ಅವಕಾಶ ಸಿಕ್ಕಿದೆ, ಐಪಿಎಲ್ 7 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಉತ್ತಮ ಪ್ರದರ್ಶನ ನೀಡಿ 13 ವಿಕೆಟ್ ಪಡೆದುಕೊಂಡಿದ್ದರು.

ಟೀಮ್ ಇಂಡಿಯಾ ಇಂತಿದೆ:
* ಮಹೇಂದ್ರ ಸಿಂಗ್ ಧೋನಿ(ನಾಯಕ)
* ವಿರಾಟ್ ಕೊಹ್ಲಿ
* ಶಿಖರ್ ಧವನ್
* ರೋಹಿತ್ ಶರ್ಮಾ
* ಅಜಿಂಕ್ಯರಹಾನೆ
* ಸುರೇಶ್ ರೈನಾ
* ರವೀಂದ್ರ ಜಡೇಜಾ
* ಆರ್. ಅಶ್ವಿನ್
* ಸ್ಟುವರ್ಟ್ ಬಿನ್ನಿ
* ಭುವನೇಶ್ವರ್ ಕುಮಾರ್
* ಮಹಮ್ಮದ್ ಶಮಿ
* ಮೋಹಿತ್ ಶರ್ಮಾ
* ಅಂಬಾಟಿ ರಾಯುಡು
* ಧವಲ್ ಕುಲಕರ್ಣಿ
* ಉಮೇಶ್ ಯಾದವ್
* ಸಂಜು ಸ್ಯಾಮ್ಸನ್
* ಕರಣ್ ಶರ್ಮಾ
ಐದು ಏಕದಿನ ಸರಣಿ ಆಗಸ್ಟ್ 25ರಂದು ನಡೆಯಲಿದ್ದು, ಬ್ರಿಸ್ಟೋಲ್ ನಲ್ಲಿ ಮೊದಲ ಪಂದ್ಯ ನಿಗದಿಯಾಗಿದೆ.ಟಿ20 ಪಂದ್ಯ ಬರ್ಮಿಂಗ್ ಹ್ಯಾಮ್ ನಲ್ಲಿ ಸೆ.7 ರಂದು ನಡೆಯಲಿದೆ
* ಆಗಸ್ಟ್ 27: ಕಾರ್ಡಿಫ್
* ಆಗಸ್ಟ್ 30: ನಾಟಿಂಗ್ ಹ್ಯಾಮ್
* ಸೆಪ್ಟೆಂಬರ್ 2: ಬರ್ಮಿಂಗ್ ಹ್ಯಾಮ್
* ಸೆಪ್ಟೆಂಬರ್ 5: ಲೀಡ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications