Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sanju Samson: ಧೋನಿ, ಶಿಖರ್, ರೈನಾ ದಾಖಲೆಯ ಮೇಲೆ ಸಂಜು ಕಣ್ಣು

ಇಂದಿನಿಂದ ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ದೃಷ್ಟಿ ನೆಟ್ಟಿದೆ. ಇದಕ್ಕಾಗಿ ಭಾರತ ಬಲಿಷ್ಠ ತಂಡವನ್ನು ಘೋಷಿಸಿದೆ. ಆದರೆ ಯಾವ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಬೇಕು ಎಂಬುದೇ ದೊಡ್ಡ ಪ್ರಶ್ನೆ ಆಗಿದೆ. ಟೀಮ್ ಇಂಡಿಯಾದ ಸದ್ಯ ಮೂವರು ನುರಿತ ಓಪನರ್‌ಗಳು ಇದ್ದಾರೆ. ಎಲ್ಲರೂ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇದೇ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಂಜು ಸ್ಯಾಮ್ಸನ್‌ ಏಷ್ಯಾ ಕಪ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ.

ಕಳೆದ ಒಂದು ವರ್ಷದಿಂದ ಸಂಜು ಸ್ಯಾಮ್ಸನ್‌ ಟಿ20 ಫಾರ್ಮೆಟ್‌ನಲ್ಲಿ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಂಡಿರುವ ಆಟಗಾರ. ಇವರು ತಂಡಕ್ಕೆ ಆರಂಭದಲ್ಲಿ ಭದ್ರ ಬುನಾದಿಯನ್ನು ಹಾಕಿಕೊಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸಂಜು ಇದೇ ಫಾರ್ಮ್‌ನ್ನು ಮುಂದುವರೆಸಿದ್ದೇ ಆದಲ್ಲಿ, ಟೀಮ್ ಇಂಡಿಯಾದ ಮಾಜಿ ಆಟಗಾರರ ಎಂಎಸ್ ಧೋನಿ, ಸುರೇಶ್ ರೈನಾ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಹಾಗಿದ್ದರೆ ಸಂಜು ನಿರ್ಮಿಸಲಿರುವ ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

Sanju Samson aims to surpass MS Dhoni and Suresh Raina s records in Asia Cup

ಸಂಜು ಸ್ಯಾಮ್ಸನ್‌ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ 10 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಸಫಲರಾದರೆ, ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಈ ಮೂಲಕ ಎಂಎಸ್ ಧೋನಿ, ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಮೀರಿ ನಿಲ್ಲುವ ಅವಕಾಶ ಸಂಜುಗೆ ಇದೆ. ಈ ಸಾಧನೆಯನ್ನು ಸಂಜು ಮಾಡುವಲ್ಲಿ ಸಫಲರಾದಲ್ಲಿ, ಇನ್ನು ಟೀಮ್ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಲೆಕ್ಕಾಚಾರದಲ್ಲಿ 8ನೇ ಸ್ಥಾನಕ್ಕೆ ಬಡ್ತಿ ಪಡೆಯಲಿದ್ದಾರೆ.

ಸಂಜು ಸಾಧನೆ

ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್‌ 42 ಟಿ20 ಪಂದ್ಯಗಳ 38 ಇನಿಂಗ್ಸ್‌ಗಳಲ್ಲಿ 49 ಸಿಕ್ಸರ್ ಬಾರಿಸಿದ್ದಾರೆ. ಇವರು ಏಷ್ಯಾ ಕಪ್‌ನಲ್ಲಿ ಇನ್ನೊಂದು ಸಿಕ್ಸರ್ ಬಾರಿಸಿದ ಬಳಿಕ ಚುಟುಕು ಫಾರ್ಮೆಟ್‌ನಲ್ಲಿ 50 ಸಿಕ್ಸರ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಚುಟುಕು ಫಾರ್ಮೆಟ್‌ನಲ್ಲಿ 50 ಸಿಕ್ಸರ್ ಬಾರಿಸಿದ ಭಾರತದ 10ನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ಸಹ ಸಂಜು ಅವರದ್ದಾಗಲಿದೆ.

Sanju Samson aims to surpass MS Dhoni and Suresh Raina s records in Asia Cup

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್‌

ರೋಹಿತ್ ಶರ್ಮಾ - 205
ಸೂರ್ಯಕುಮಾರ್ ಯಾದವ್ - 146
ವಿರಾಟ್ ಕೊಹ್ಲಿ - 124
ಕೆಎಲ್ ರಾಹುಲ್ - 99
ಹಾರ್ದಿಕ್ ಪಾಂಡ್ಯ - 95
ಯುವರಾಜ್ ಸಿಂಗ್ - 74
ಸುರೇನ್ ರೈನಾ - 58
ಎಂಎಸ್ ಧೋನಿ - 52
ಶಿಖರ್ ಧವನ್ - 50

Story first published: Tuesday, September 9, 2025, 10:16 [IST]
Other articles published on Sep 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+