ಕಾಲೇಜು ಗೆಳತಿ ಜತೆ ಕ್ರಿಕೆಟರ್ ಸಂಜು ಸ್ಯಾಮ್ಸನ್ ಮದುವೆ

ಬೆಂಗಳೂರು, ಸೆಪ್ಟೆಂಬರ್ 09: 23 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರು ತಮ್ಮ ಮದುವೆ ಬಗ್ಗೆ ಸುದ್ದಿ ಕೊಟ್ಟಿದ್ದಾರೆ. ಬಹುಕಾಲದ ಗೆಳತಿಯನ್ನು ವರಿಸುತ್ತೇನೆ. ಡಿಸೆಂಬರ್ ನಲ್ಲಿ ನನ್ನ ಮದುವೆ ಎಂದು ಭಾನುವಾರ(ಸೆಪ್ಟೆಂಬರ್ 09)ದಂದು ಘೋಷಿಸಿದ್ದಾರೆ.
ಕೇರಳ ಮೂಲದ 23 ವರ್ಷ ವಯಸ್ಸಿನ ಸಂಜು ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಮದುವೆ ಬಗ್ಗೆ ಘೋಷಿಸಿದ್ದಾರೆ. ತನ್ನ ಗೆಳತಿ ಚಾರು ಜತೆಗಿನ ಹಳೆ ಚಿತ್ರವನ್ನು ಹಂಚಿಕೊಂಡು ತಮ್ಮ ಗೆಳೆತನ ಬಗ್ಗೆ ಹೇಳಿಕೊಂಡಿದ್ದಾರೆ.
' 2013ರ ಆಗಸ್ಟ್ 22ರ ರಾತ್ರಿ11.11 ಸಮಯಕ್ಕೆ 'Hi' ಎಂದು ಅವಳಿಗೆ ಸಂದೇಶ ಕಳಿಸಿದೆ. ಅಂದಿನಿಂದ ಐದು ವರ್ಷ ಗೆಳೆತನ, ಈ ರೀತಿ ಒಟ್ಟಿಗೆ ಚಿತ್ರ ಹಾಕಲು ಈ ಕ್ಷಣಕ್ಕಾಗಿ ಕಾದಿದ್ದೆ. ನಮ್ಮ ಎರಡು ಕುಟುಂಬದವರು ನಮ್ಮ ಗೆಳೆತನ, ಪ್ರೀತಿಗೆ ಮದುವೆಯ ಮುದ್ರೆ ಬೀಳಲು ಕಾರಣರಾಗಿದ್ದಾರೆ. ನಾನು ತುಂಬಾ ಸಂತಸ ಭರಿತನಾಗಿದ್ದೇನೆ' ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
ಚಾರು ಅವರ ತಂದೆ ತಿರುವನಂತಪುರಂನಲ್ಲಿ ಹಿರಿಯ ಪತ್ರಕರ್ತ ಬಿ ರಮೇಶ್ ಕುಮಾರ್ ಅವರು ಸುದ್ದಿಯನ್ನು ಖಚಿತಪಡಿಸಿ, ಡಿಸೆಂಬರ್ 22ರಂದು ಮದುವೆ ನಡೆಯಲಿದೆ ಎಂದಿದ್ದಾರೆ.
ಇಬ್ಬರು ಮಾರ್ ಇವಾನಿಯಾಸ್ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ಎರಡು ಕುಟುಂಬದವರು ಒಪ್ಪಿಗೆ ನೀಡಿದ ಬಳಿಕ ಮದುವೆ ನಿಶ್ಚಯ ಮಾಡಲಾಗಿದೆ ಎಂದರು.
ಚಾರು ಅವರು ಸದ್ಯ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಅಂಡರ್ 19 ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ನೆಚ್ಚಿನ ಶಿಷ್ಯರಲ್ಲಿ ಒಬ್ಬರಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications