Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sanju Samson: ರಾಜಸ್ಥಾನ ರಾಯಲ್ಸ್ ಪರ ಸಂಜು ಸ್ಯಾಮ್ಸನ್ ವಿಶೇಷ ಸಾಧನೆ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಎರಡು ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್‌ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 6 ವಿಕೆಟ್ ಕಳೆದುಕೊಂಡು 242 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಹೈದರಾಬಾದ್ 44 ರನ್‌ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.

ಹೈದರಾಬಾದ್ ನೀಡಿದ 286 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ರಾಜಸ್ಥಾನ ಪರ ಅರ್ಧಶತಕ ಗಳಿಸುವ ಮೂಲಕ ಸಂಜು ಸ್ಯಾಮ್ಸನ್ ತಮ್ಮ ಐಪಿಎಲ್ 2025ರ ಅಭಿಯಾನವನ್ನು ಅಬ್ಬರದಿಂದ ಆರಂಭಿಸಿದರು. ಸಂಜು ಸ್ಯಾಮ್ಸನ್ ಈ ಅರ್ಧಶತಕದ ಮೂಲಕ ರಾಜಸ್ಥಾನ ಪರ ವಿಶೇ‍ಷ ದಾಖಲೆ ಸೃಷ್ಟಿಸಿದರು.

Sanju Samson becomes first player to score 4000 runs for Rajasthan Royals

ಸಂಜು ಸ್ಯಾಮ್ಸನ್ ರಾಜಸ್ಥಾನ ಪರ ತಮ್ಮ 142 ನೇ ಇನ್ನಿಂಗ್ಸ್‌ನಲ್ಲಿ 4000 ರನ್‌ಗಳ ಪೂರ್ಣಗೊಳಿಸಿದರು. ಈ ದಾಖಲೆ ಮಾಡುವ ಮುನ್ನ ಸಂಜುಗೆ 64 ರನ್‌ಗಳ ಅಗತ್ಯವಿತ್ತು. ಸ್ಯಾಮ್ಸನ್ ಐಪಿಎಲ್‌ನಲ್ಲಿ 141 ಪಂದ್ಯಗಳಿಂದ 31.72 ಮತ್ತು 140.55 ಸರಾಸರಿಯಲ್ಲಿ 3934 ರನ್ ಗಳಿಸಿದ್ದರು. ಹೈದರಾಬಾದ್ ವಿರುದ್ಧ ಅವರು 37 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ ದಾಖಲೆ ಮಾಡಿದರು. ಇದು ಅವರ 30ನೇ ಐಪಿಎಲ್ ಅರ್ಧಶತಕವಾಗಿತ್ತು.

ಐಪಿಎಲ್ ಇತಿಹಾಸದಲ್ಲಿ 4500 ರನ್‌ಗಳ ಮೈಲಿಗಲ್ಲು ತಲುಪಲು ಅವರು ವಿಫಲರಾದರೂ, 4000 ರನ್ ಗಳಿಸಿದ ಮೂರನೇ ರಾಜಸ್ಥಾನ ರಾಯಲ್ಸ್ ಆಟಗಾರ ಎನಿಸಿಕೊಂಡರು. ಹೈದರಾಬಾದ್ ವಿರುದ್ಧ ಸ್ಯಾಮ್ಸನ್ ಆಡಿರುವ 24 ಪಂದ್ಯಗಳಿಂದ 45.63 ಸರಾಸರಿಯಲ್ಲಿ 867 ರನ್‌ಗಳನ್ನು ಗಳಿಸಿದ್ದಾರೆ.

ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್‌ ತಂಡದ ಮೊದಲ ಮೂರು ಪಂದ್ಯಗಳಿಗೆ ಆಟಗಾರನಾಗಿ ಮಾತ್ರ ಆಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ. ಬೆರಳಿನ ಗಾಯದಿಂದಾಗಿ ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ನಿರ್ವಹಿಸಲು ಸಂಪೂರ್ಣವಾಗಿ ಫಿಟ್ ಆಗಿಲ್ಲ, ಆದ್ದರಿಂದ ಅವರನ್ನು ಇಂಪ್ಯಾಕ್ಟ್ ಆಟಗಾರನಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

ದುಬಾರಿ ಬೌಲರ್

ರಾಜಸ್ಥಾನ್ ರಾಯಲ್ಸ್ ವೇಗದ ಬೌಲರ್ ಜೋಫ್ರಾ ಆರ್ಚರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಆರ್ಚರ್ ತಮ್ಮ ನಾಲ್ಕು ಓವರ್‌ಗಳಲ್ಲಿ 76 ರನ್‌ಗಳನ್ನು ಬಿಟ್ಟುಕೊಟ್ಟರು.ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು. ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೋಹಿತ್ ಶರ್ಮಾ 73 ರನ್‌ಗಳನ್ನು ನೀಡಿದ್ದರು.

ಈಗ ಮೋಹಿತ್ ಶರ್ಮಾ ಅವರನ್ನು ಆರ್ಚರ್ ಹಿಂದಿಕ್ಕಿ ತಮ್ಮ ಹೆಸರಿಗೆ ಬೇಡದ ದಾಖಲೆಯನ್ನುನ ಸೇರಿಕೊಂಡಿದ್ದಾರೆ. 2023 ರಲ್ಲಿ ಕೊನೆಯ ಬಾರಿಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಆರ್ಚರ್, ಒಂದು ವರ್ಷದ ನಂತರ ಐಪಿಎಲ್‌ಗೆ ಮರಳಿದ್ದರು. ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಅವರನ್ನು 12.50 ಕೋಟಿ ರೂ.ಗೆ ಖರೀದಿಸಿತು.

Story first published: Sunday, March 23, 2025, 22:19 [IST]
Other articles published on Mar 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+