Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್‌, ರೋಹಿತ್‌, ಧೋನಿ ಮಾಡದ ದಾಖಲೆ ಮಾಡಿದ ಸಂಜು

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕುತೂಹಲ ಘಟ್ಟದತ್ತ ಮುಖಮಾಡಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅನುಭವಿ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಫಲದಿಂದ ತಮ್ಮ ತಮ್ಮ ತಂಡಕ್ಕೆ ನೆರವಾಗುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಪರ ಬ್ಯಾಟ್ ಮಾಡುತ್ತಿರುವ ಸಂಜು ಸ್ಯಾಮ್ಸನ್‌ ಅಬ್ಬರಿಸಿದ್ದಾರೆ. ಇವರು ಆರಂಭಿಕರಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದು, ದಾಖಲೆಯನ್ನು ಬರೆಯುತ್ತಿದ್ದಾರೆ.

ಭಾನುವಾರ ಗುಜರಾತ್ ಟೈಟಾನ್ಸ್‌ ವಿರುದ್ಧದ ಪಂದ್ಯದಲ್ಲಿ ಸಂಜು ಸಿಎಸ್‌ಕೆ ಪರ ಕಣಕ್ಕೆ ಇಳಿದರು. ಈ ವೇಳೆ ಇವರು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಕೇವಲ 11 ರನ್ ಬಾರಿಸಿ ಔಟ್ ಆದರು. ಇವರು ಚಿಕ್ಕ ಇನಿಂಗ್ಸ್ ಕಟ್ಟಿ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಈ ದಾಖಲೆಯನ್ನು ಈ ಹಿಂದೆ ಬೇರೆಯಾವೊಬ್ಬ ಭಾರತೀಯ ಬ್ಯಾಟರ್ ಮಾಡಿರಲಿಲ್ಲ.

Sanju Samson

ಸಂಜು ಸ್ಯಾಮ್ಸನ್‌ ಐಪಿಎಲ್‌ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 5 ಸಾವಿರ ರನ್‌ ಪೂರೈಸಿದ ಭಾರತೀಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಸುರೇಶ್‌ ರೈನಾ ಅವರ ಹೆಸರಿನಲ್ಲಿತ್ತು. ರೈನಾ ಐಪಿಎಲ್‌ನಲ್ಲಿ 5 ಸಾವಿರ ರನ್‌ ಪೂರ್ಣಗೊಳಿಸಲು 3620 ಎಸೆತವನ್ನು ತೆಗೆದುಕೊಂಡಿದ್ದರು. ಈಗ ಈ ದಾಖಲೆ ಸಂಜು ಪಾಲಾಗಿದೆ. ಸಂಜು ಸ್ಯಾಮ್ಸನ್‌ ಐಪಿಎಲ್‌ನಲ್ಲಿ ಕೇವಲ 3555 ಎಸೆತಗಳಲ್ಲಿ 5000 ರನ್‌ ಗಡಿ ದಾಟಿದ್ದಾರೆ. ಈ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ವೇಗವಾಗಿ 5000 ರನ್‌ ಕಲೆ ಹಾಕಿದ ಹೆಗ್ಗಳಿಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅವರಿಗೆ ಸಲ್ಲುತ್ತದೆ. ಇವರು ಕೇವಲ 3288 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಕಾಣಿಸಕೊಳ್ಳುತ್ತಾರೆ. ಇವರು ಐಪಿಎಲ್‌ನಲ್ಲಿ 5 ಸಾವಿರ ರನ್ ಪೂರ್ಣಗೊಳಿಸಲು 3554 ಎಸೆತಗಳನ್ನು ಎದುರಿಸಿದ್ದರು. ಈಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ ನಿಂತಿದ್ದಾರೆ.

Sanju Samson


ಐಪಿಎಲ್‌ನಲ್ಲಿ ವೇಗವಾಗಿ 5000 ರನ್ ಬಾರಿಸಿದ ಬ್ಯಾಟರ್ಸ್‌

ಎಬಿ ಡಿವಿಲಿಯರ್ಸ್, 3288 ಎಸೆತಗಳು
ಡೇವಿಡ್ ವಾರ್ನರ್, 3554 ಎಸೆತಗಳು
ಸಂಜು ಸ್ಯಾಮ್ಸನ್, 3555 ಎಸೆತಗಳು
ಸುರೇಶ್ ರೈನಾ, 3620 ಎಸೆತಗಳು
ಕೆಎಲ್ ರಾಹುಲ್, 3688 ಎಸೆತಗಳು
ಎಂಎಸ್ ಧೋನಿ, 3691 ಎಸೆತಗಳು
ರೋಹಿತ್ ಶರ್ಮಾ, 3817 ಎಸೆತಗಳು
ವಿರಾಟ್ ಕೊಹ್ಲಿ, 3827 ಎಸೆತಗಳು

ಐಪಿಎಲ್‌ನಲ್ಲಿ ಸಂಜು ದಾಖಲೆ

ಸಂಜು ಸ್ಯಾಮ್ಸನ್‌ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 185 ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 5008 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 5 ಶತಕ ಹಾಗೂ 26 ಅರ್ಧಶತಕಗಳು ಸೇರಿವೆ.

Story first published: Monday, April 27, 2026, 17:01 [IST]
Other articles published on Apr 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+