Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sanju Samson: ದುಲೀಪ್ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್ ಉಗ್ರ ರೂಪ

ದುಲೀಪ್ ಟ್ರೋಫಿಯ ಎರಡನೇ ಸುತ್ತಿನಲ್ಲಿ ಆಟಗಾರರು ಬಿಸಿಸಿಐ ಗಮನ ಸೆಳೆಯುತ್ತಿದ್ದಾರೆ. ಅದ್ಬುತ ಪ್ರದರ್ಶನ ನೀಡುತ್ತಿರುವ ಆಟಗಾರರು ಟೀಮ್ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ. ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ ತಮ್ಮ ಉಗ್ರ ಸ್ವರೂಪ ತೋರಿದ್ದಾರೆ.

ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ-ಡಿ ವಿರುದ್ಧ ಭಾರತ-ಎ ತಂಡ 186 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್‌ಗೆ ವಿಕೆಟ್‌ ಕಳೆದುಕೊಂಡು ನಿರಾಸೆ ಮೂಡಿಸಿದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸಂಜು ಸಾಮ್ಸನ್ ಬಿರುಸಿನ ಬ್ಯಾಟಿಂಗ್ ಮಾಡಿದ್ದಾರೆ.

Sanju Samson brilliant innings in Duleep Trophy 2024

ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸಂಜು ಕ್ರೀಸ್‌ಗೆ ಬಂದ ತಕ್ಷಣ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಲು ಪ್ರಾರಂಭಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದೆ.

ಸಂಜು ಇನ್ನಿಂಗ್ಸ್

ಭಾರತ-ಎ ತಂಡ ನೀಡಿದ ಬೃಹತ್ ಗುರಿ ಬೆನ್ನಟ್ಟಿ ಭಾರತ-ಡಿ ತಂಡ ಸಂಕಷ್ಟದಲ್ಲಿತ್ತು. ಈ ವೇಳೆ ಬ್ಯಾಟಿಂಗ್‌ಗಿಳಿದ ಸಂಜು, 45 ಎಸೆತಗಳಲ್ಲಿ 3 ಬೌಂಡಿರಿ ಮತ್ತು ಸಿಕ್ಸರ್‌ಗಳ ನೆರವಿನಿಂದ 40 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದರು. ಆದರೆ, ತಂಡದ ಗೆಲುವಿಗೆ ಅವರ ಇನ್ನಿಂಗ್ಸ್ ಸಾಕಾಗಲಿಲ್ಲ. ಕನ್ನಡಿಗ ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿರುವ ಭಾರತ-ಎ ಈ ಪಂದ್ಯವನ್ನು ಗೆದ್ದು ಬೀಗಿತು.

ಟಿ20 ಸರಣಿ ಮೇಲೆ ಕಣ್ಣು

ಸೆಪ್ಟೆಂಬರ್ 19 ರಿಂದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಇದಾದ ಬಳಿಕ ಅಕ್ಟೋಬರ್ 7 ರಿಂದ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿವೆ. ಈ ಸರಣಿಗೆ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಬಿಸಿಸಿಐ ಮೂಲಗಳು ತಿಳಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಉಗ್ರ ರೂಪ ತೋರಿರುವ ಸಂಜು ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗುವ ಸಾಧ್ಯತೆ.

ಭಾರತ ಎ ತಂಡಕ್ಕೆ ಜಯ

ಪಂದ್ಯದ ನಾಲ್ಕನೇ ದಿನ ಭಾರತ ಡಿ ಗೆಲುವಿಗೆ 426 ರನ್‌ಗಳ ಅಗತ್ಯವಿತ್ತು. ಭಾರತ ಡಿ ಪರ ರಿಕಿ ಭುಯಿ ಮತ್ತು ಯಶ್ ದುಬೆ ಕ್ರೀಸ್‌ನಲ್ಲಿದ್ದರು. ಭುಯಿ ಮತ್ತು ದುಬೆ ಅವರ ಜೊತೆಯಾಟವು ಭಾರತ ಡಿ ತಂಡವನ್ನು ಗೆಲುವಿನ ಓಟದಲ್ಲಿ ಇರಿಸಿತು. ಆದರೆ ಶಮ್ಸ್ ಮುಲಾನಿ ಭಾರತ ಎ ತಂಡ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಗೆಲುವಿಗೆ ಶ್ರಮಿಸಿದರು.

ದುಬೆ ಅವರ ವಿಕೆಟ್ ಕಳೆದುಕೊಂಡ ನಂತರ ಭಾರತ ಡಿ ತಂಡವು ದೇವದತ್ ಪಡಿಕ್ಕಲ್ ಕೂಡ ಔಟಾದರಯ. ನಂತರ ಭುಯಿ ಅವರೊಂದಿಗೆ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟವಾಡಿದರು. ಆದರೆ ಅವರು ಕೂಡ ಮುಲಾನಿ ಬೌಲಿಂಗ್‌ನಲ್ಲಿ 41 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದಾದ ಬಳಿಕ ಯಾವುದೇ ಬ್ಯಾಟರ್‌ಗಳು ಕೂಡ ವಿಶೇಷ ಪ್ರದರ್ಶನ ತೋರಲು ಸಾಧ್ಯವಾಗದ ಕಾರಣ ಭಾರತ ಡಿ ತಂಡ 301 ರನ್ ಗಳಿಸಿ ಆಲೌಟ್ ಆಯಿತು.

Story first published: Sunday, September 15, 2024, 17:12 [IST]
Other articles published on Sep 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+