ರಾಯಲ್ಸ್ ಸೋತ ಬೆನ್ನಲ್ಲೆ ಸಂಜು ಸ್ಯಾಮ್ಸನ್ ಜೇಬಿಗೆ ಕತ್ತರಿ: 24 ಲಕ್ಷ ದಂಡ
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬುಧವಾರ ನಿರಾಶಾದಾಯಕವಾಗಿತ್ತು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 58 ರನ್‌ಗಳಿಂದ ರಾಜಸ್ಥಾನ ಸೋಲು ಕಂಡ ಬೆನ್ನಲ್ಲೆ, ಮತ್ತೊಂದು ಶಾಕ್ ನಾಯಕನಿಗೆ ಎದುರಾಗಿದೆ. ಸಂಜು ಸ್ಯಾಮ್ಸನ್ ಮಾಡಿದ ಆ ಒಂದು ತಪ್ಪಿಗೆ ಬಿಸಿಸಿಐ ಅವರಿಗೆ ಬರೆ ಎಳೆದಿದೆ. ಪ್ರಸಕ್ತ ಲೀಗ್‌ನಲ್ಲಿ ರಾಜಸ್ಥಾನ ವಿರುದ್ಧ ಈ ತೀರ್ಮಾನವನ್ನು ತೆಗೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ.
18ನೇ ಆವೃತ್ತಿಯ 23ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 217 ರನ್ ಸೇರಿಸಿತು. ಸವಾಲಿನ 218 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ 159 ರನ್‌ಗಳಿಗೆ ಆಲೌಟ್ ಆಯಿತು. ಅಲ್ಲದೆ 58 ರನ್‌ಗಳ ಸೋಲು ಕಂಡಿತು. ರಾಜಸ್ಥಾನಕ್ಕೆ ಪಂದ್ಯದಲ್ಲ ಸೋತ ನೋವು ಒಂದು ಕಡೆಯಾದರೆ, ನಾಯಕ ಸಂಜು ಸ್ಯಾಮ್ಸನ್‌ಗೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಬಿಸಿಸಿಐ ಶಾಕ್ ನೀಡಿದೆ.

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್ ಮಾಡಿದ್ದಕ್ಕಾಗಿ ನಾಯಕ ಸಂಜು ಸ್ಯಾಮ್ಸನ್‌ಗೆ ಬಿಸಿಸಿಐ 24 ಲಕ್ಷ ದಂಡ ವಿಧಿಸಿದೆ. ಅಲ್ಲದೆ ತಂಡದಲ್ಲಿದ್ದ ಪ್ರತಿ ಆಟಗಾರನಿಗೆ ಬಿಸಿಸಿಐ ಬರೆ ಎಳೆದಿದೆ. ಪ್ಲೇಯಿಂಗ್ ಇಲೆವೆನ್‌ನಲ್ಲಿರುವ ಆಟಗಾರರು 6 ಲಕ್ಷ ಅಥವಾ ಮ್ಯಾಚ್ ಫೀಯ 25 ರಷ್ಟು ದಂಡವನ್ನು ತೆತ್ತಲಿದ್ದಾರೆ. ಇದೇ ಆವೃತ್ತಿಯಲ್ಲಿ ರಾಜಸ್ಥಾನ ತಂಡಕ್ಕೆ ಎರಡನೇ ಬಾರಿಗೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಬರೆ ಬಿದ್ದಿದೆ.
ಸಂಜು ಸ್ಯಾಮ್ಸನ್‌ಗಿಂತಲೂ ಮೊದಲು ರಿಯಾನ್ ಪರಾಗ್ ಅವರಿಗೆ ಬಿಸಿಸಿಐ ಛಾಟಿ ಬೀಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ಹಂಗಾಮಿ ನಾಯಕ ರಿಯಾನ್ ಪರಾಗ್ ಅವರಿಗೆ 12 ಲಕ್ಷ ದಂಡವನ್ನು ವಿಧಿಸಿತ್ತು.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಬಿಸಿಸಿಐ "ರಾಜಸ್ಥಾನ ರಾಯಲ್ಸ್ ನಿಧಾನಗತಿಯ ಬೌಲಿಂಗ್ ನಡೆಸಿದ್ದಕ್ಕಾಗಿ ದಂಡಕ್ಕೆ ಗುರಿಯಾಗಿದ್ದು, ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಅವರ ತಂಡವು ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಈ ದಂಡವನ್ನು ವಿಧಿಸಲಾಗಿದೆ. ಈ ಋತುವಿನಲ್ಲಿ ಈ ತಂಡ ಎರಡನೇ ಬಾರಿಗೆ ಈ ತಪ್ಪನ್ನು ಮಾಡಿದ್ದರಿಂದ, ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ" ಎಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications