Sanju Samson: ಏಳು ಎಸೆತ ಎದುರಿಸಿದರೂ ದಾಖಲೆ ಬರೆದ ಸಂಜು: ಏನದು?
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಐದನೇ ಪಂದ್ಯ ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಪಂದ್ಯವನ್ನು 150 ರನ್‌ಗಳಿಂದ ಗೆದ್ದು ಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಅಮೋಘ ಆಲ್‌ರೌಂಡರ್ ಆಟವನ್ನು ಆಡಿದ್ದಾರೆ. ಇವರ ಶತಕ ಭಾನುವಾರದ ಮಜೆಯನ್ನು ಹೆಚ್ಚಿಸಿದೆ. ಆದರೆ ಇನ್ನೋಬ್ಬ ಬ್ಯಾಟರ್ ಸರಣಿಯಲ್ಲಿ ರನ್ ವೈಫಲ್ಯ ಅನುಭವಿಸಿದರೂ, ದಾಖಲೆ ಬರೆದಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಇಂಗ್ಲೆಂಡ್ ತಂಡದ ಪಾಲಾಯಿತು. ಇಂಗ್ಲೆಂಡ್ ನಾಯಕ ಮರು ಯೋಚನೆ ಮಾಡದೇ ಬೌಲಿಂಗ್ ಮಾಡಲು ಮುಂದಾದರು. ಟೀಮ್ ಇಂಡಿಯಾದ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಇವರು ಐದನೇ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟದೇ ಹೋದ್ರೂ ಸಹ ಎಲೈಟ್ ಕ್ಲಬ್‌ಗೆ ಎಂಟ್ರಿ ಪಡೆದಿದ್ದಾರೆ. ಇವರು ಎದುರಿಸಿದ 7 ಎಸೆತಗಳಲ್ಲಿ 16 ರನ್ ಬಾರಿಸಿ ಔಟ್ ಆದರು. ಇಷ್ಟೇ ಚಿಕ್ಕ ಇನಿಂಗ್ಸ್‌ನಲ್ಲಿ ಸಂಜು ದಾಖಲೆ ನಿರ್ಮಿಸಿದ್ದಾರೆ.

ಮೊದಲ ಎಸೆತದಲ್ಲೇ ದಾಖಲೆ
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅವರ ಮೇಲೆ ಹೆಚ್ಚಿನ ಒತ್ತಡವಿತ್ತು. ಪ್ರಸಕ್ತ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರಿಂದ ಟೀಕೆಗಳು ಸಹ ಕೇಳಿ ಬಂದಿದ್ದವು. ಆದರೆ ಮುಂಬೈನಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿದ ಸಂಜು ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು. ಇವರು ತಾವು ಎದುರಿಸಿದ ಇನಿಂಗ್ಸ್ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಬೌಲಿಂಗ್ ಆರಂಭಿಸಿದರು. ಲೆಂಥ್ ಡಿಲೆವರಿಯನ್ನು ಗಮನಿಸಿದ ಸಂಜು ಪುಲ್ ಮಾಡಿ ಸಿಕ್ಸರ್ ಬಾರಿಸಿದರು. ಈ ಮೂಲಕ ದಾಖಲೆ ನಿರ್ಮಿಸಿದರು.
ಸಂಜು ಸ್ಯಾಮ್ಸನ್ ಡೀಪ್ ಸ್ಕ್ವೇರ್ ಮೇಲೆ 70 ಮೀಟರ್ ಉದ್ದದ ಸಿಕ್ಸ್ ಬಾರಿಸಿ ಅದ್ಭುತ ಸಾಧನೆ ಮಾಡಿದರು. ಸಂಜು ಇನ್ನಿಂಗ್ಸ್ ಆರಂಭಿಸಿ, ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಅವರ ಜೊತೆ ವಿಶೇಷ ಕ್ಲಬ್ ಸೇರಿದರು.

ಭಾರತದ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಎಸೆತವನ್ನು ಸಿಕ್ಸರ್ ಬಾರಿಸಿ ಸಾಧನೆ ಮಾಡಿದ್ದರು. ಬಳಿಕ 2024ರಲ್ಲಿ ಯಶಸ್ವಿ ಜೈಸ್ವಾಲ್ ಜಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು. ಈಗ ಈ ಎಲೈಟ್ ಕ್ಲಬ್‌ಗೆ ಸಂಜು ಎಂಟ್ರಿ ನೀಡಿದ್ದಾರೆ.
ಪಂದ್ಯದ ಫಲಿತಾಂಶ
ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತು. ಈ ವೇಳೆ ಅಭಿಷೇಕ್ ಶರ್ಮಾ ಶತಕ ಬಾರಿಸಿ ಹಲವು ದಾಖಲೆಗಳನ್ನು ಬರೆದರು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಇಂಗ್ಲೆಂಡ್ 10.3 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲೌಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications