For Quick Alerts
ALLOW NOTIFICATIONS  
For Daily Alerts
 

Sanju Samson: ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಅಬ್ಬರಿಸಿದ ಸಂಜು ಸ್ಯಾಮ್ಸನ್‌

ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸಕ್ಕೆ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಇಂತಹದ್ದೇ ಅವಕಾಶವನ್ನು ಎದುರು ನೋಡುತ್ತಿರುವ ಒಬ್ಬ ಪ್ಲೇಯರ್‌ ದೇಶೀಯ ಋತುವಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.

ದಕ್ಷಿಣ ಆಫ್ರಿಕಾಕ್ಕೆ ಆಯ್ಕೆಯಾದ ಕೆಲವು ಆಟಗಾರರು ಈಗ ದೇಶೀಯ ಟೂರ್ನಿಗಳಲ್ಲಿ ಬೆವರು ಹರಿಸುತ್ತಿದ್ದಾರೆ. ಇವರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಸಂಜು ಸ್ಯಾಮ್ಸನ್‌.

Sanju Samson made a century before the tour of South Africa

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಸಂಜು ಸ್ಯಾಮ್ಸನ್ ದೇಶೀಯ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ವಿಜಯ್ ಹಜಾರಾ ಟ್ರೋಫಿ ಏಕದಿನ ಟೂರ್ನಿಯಲ್ಲಿ ರೈಲ್ವೇಸ್ ವಿರುದ್ಧ ಸಂಜು ಶತಕ ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಸಂಜು, ಈ ಪ್ರದರ್ಶನದ ಬಳಿಕ ಪ್ಲೇಯಿಂಗ್-11ರಲ್ಲೂ ಸ್ಥಾನ ಪಡೆಯುವಲ್ಲಿ ಖಂಡಿತಾ ಯಶಸ್ವಿಯಾಗುತ್ತಾರೆ ಎಂಬುದು ಖಚಿತವಾಗಿದೆ. ಇನ್ನು ಅವರನ್ನು ನಿರ್ಲಕ್ಷಿಸಲು ತಂಡದ ಆಡಳಿತ ಮಂಡಳಿಗೆ ಸಾಧ್ಯವಿಲ್ಲ.

ವಿಜಯ್ ಹಜಾರಾ ಟ್ರೋಫಿಯಲ್ಲಿ ಮಂಗಳವಾರ ಕೇರಳ ಪರ ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ 139 ಎಸೆತಗಳಲ್ಲಿ 128 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. 256 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೇರಳ ತಂಡ ಕೇವಲ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಮಯದಲ್ಲಿ ಅವರ ಇನ್ನಿಂಗ್ಸ್ ಮೂಡಿ ಬಂದಿತ್ತು.

ಸಂಜು ನಾಲ್ಕನೇ ವಿಕೆಟ್‌ಗೆ ಕೃಷ್ಣ ಪ್ರಸಾದ್ ಅವರೊಂದಿಗೆ 33 ರನ್‌ಗಳ ಜೊತೆಯಾಟವನ್ನು ಆಡಿದರು ಮತ್ತು ನಂತರ ಐದನೇ ವಿಕೆಟ್‌ಗೆ ಶ್ರೇಯಸ್ ಗೋಪಾಲ್ ಅವರೊಂದಿಗೆ 138 ರನ್ ಸೇರಿಸಿದರು.

ಕೃಷ್ಣ ಮತ್ತು ಶ್ರೇಯಸ್ ಔಟ್ ಆಗುತ್ತಿದ್ದಂತೆ, ಸಂಜುಗೆ ಇನ್ನೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಆದರೆ ಅವರು ಏಕಾಂಗಿಯಾಗಿ ರನ್ ಗಳಿಸಿದರು. ಇವರ ಏಕಾಂಗಿ ಪ್ರದರ್ಶನ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸುವಲ್ಲಿ ವಿಫಲವಾಯಿತು.

ಕೇರಳ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 237 ರನ್ ಗಳಿಸಿ 18 ರನ್‌ಗಳಿಂದ ಸೋಲನುಭವಿಸಿತು. ಸಂಜು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗದಿರಬಹುದು ಆದರೆ ಈ ಇನ್ನಿಂಗ್ಸ್ ಅವರಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮಾನಸಿಕ ಶಕ್ತಿಯನ್ನು ನೀಡುತ್ತದೆ.

ಸಂಜು ಏಕದಿನ ದಾಖಲೆ

ಸಂಜು ಸ್ಯಾಮ್ಸನ್ ಇದುವರೆಗೆ 13 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 55.71 ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯೊಂದಿಗೆ 390 ರನ್ ಗಳಿಸಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 19 ಸಿಕ್ಸರ್‌ಗಳನ್ನೂ ಬಾರಿಸಿದ್ದಾರೆ.

Story first published: Wednesday, December 6, 2023, 12:23 [IST]
Other articles published on Dec 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+