For Quick Alerts
ALLOW NOTIFICATIONS  
For Daily Alerts
 

ICC Ranking: ಸಂಜು, ನಿತೀಶ್‌ಗೆ ಭರ್ಜರಿ ಬಡ್ತಿ

ಐಸಿಸಿ ನೂತನ ಶ್ರೇಯಾಂಕವನ್ನು ಬುಧವಾರ ಬಿಡುಗಡೆ ಮಾಡಿದೆ. ಇತ್ತೀಚಿಗೆ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್‌ ಹಾಗೂ ಆಲ್‌ರೌಂಡರ್‌ ನಿತೀಶ್‌ ಕುಮಾರ್ ರೆಡ್ಡಿ ಸ್ಥಿರ ಪ್ರದರ್ಶನವನ್ನು ನೀಡಿದ್ದಾರೆ. ಪರಿಣಾಮ ಶ್ರೇಯಾಂಕದಲ್ಲಿ ಭಾರೀ ಲಾಭವಾಗಿದೆ.

ಟಿ20 ಶ್ರೇಯಾಂಕದಲ್ಲಿ ಟಾಪ್‌ 10ರಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಆದರೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಮುಗ್ಳನಗೆ ಬೀರುವ ಸುದ್ದಿ ಹೊರ ಬಿದ್ದಿದೆ. ಇಷ್ಟು ದಿನ ಶ್ರೇಯಾಂಕದಲ್ಲಿ 100ರ ಆಸುಪಾಸಿನಲ್ಲಿ ಇರುತ್ತಿದ್ದ ಒಬ್ಬ ಬ್ಯಾಟರ್ ನೂತನ ಶ್ರೇಯಾಂಕದಲ್ಲಿ ಭರ್ಜರಿ ಬಡ್ತಿ ಪಡೆದಿದ್ದಾರೆ.

Sanju Samson Nitish Kumar Reddy Soar in ICC T20 Rankings Joe Root Nears Record

91 ಸ್ಥಾನ ಬಡ್ತಿ

ಬಾಂಗ್ಲಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಶತಕ ಬಾರಿಸಿದ್ದರು. ಇದು ಅವರ ಶ್ರೇಯಾಂಕದಲ್ಲಿ ಏರಿಕೆಗೆ ಭಾರೀ ಲಾಭವಾಗಿದೆ. ಸಂಜು ಸ್ಯಾಮ್ಸನ್ ಮೊದಲ ಎರಡು ಪಂದ್ಯಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ, ಆದರೆ ಮೂರನೇ ಪಂದ್ಯದಲ್ಲಿ ಅವರು ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಇದರ ಪರಿಣಾಮ ಅವರ ಶ್ರೇಯಾಂಕದಲ್ಲಿ ಭಾರೀ ಏರಿಕೆ ಆಗಿದೆ. ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್‌ ಅವರು ಸಿಡಿಸಿದ ಶತಕ ಅವರನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಈ ಮೂಲಕ ಸಂಜು 91 ಸ್ಥಾನ ಏರಿಕೆ ಕಂಡಿದ್ದು, 65ನೇ ಸ್ಥಾನಕ್ಕೆ ತಲುಪಿದ್ದಾರೆ.

ನಿತೀಶ್‌ ಕುಮಾರ್‌ಗೆ ಭರ್ಜರಿ ಬಡ್ತಿ

ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರ ಶ್ರೇಯಾಂಕದಲ್ಲಿ ಭರ್ಜರಿ ಬಡ್ತಿ ಆಗಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಕ್ಲಾಸಿಕ್ ಪ್ರದರ್ಶನ ನೀಡಿದ್ದ ನಿತೀಶ್‌ಗೆ ಭಾರತ ತಂಡದಲ್ಲಿ ಸ್ಥಾನ ಲಭಿಸಿತು. ಸಿಕ್ಕ ಅವಕಾಶವನ್ನು ಸೊಗಸಾಗಿ ಬಳಸಿಕೊಂಡ ಇವರು 499 ಸ್ಥಾನ ಮೇಲಕ್ಕೇರಿದ್ದಾರೆ. ಇದೀಗ ನಿತೀಶ್‌ 60ನೇ ಸ್ಥಾನಕ್ಕೆ ಏರಿದ್ದಾರೆ.

Sanju Samson Nitish Kumar Reddy Soar in ICC T20 Rankings Joe Root Nears Record

ಟ್ರಾವಿಸ್‌ ಹೆಡ್‌ ನಂಬರ್‌ 1

ಚುಟಕು ಫಾರ್ಮೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸುತ್ತಿರುವ ಟ್ರಾವಿಸ್ ಹೆಡ್ 881 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ್‌ 1 ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್‌ 818 ಅಂಕಗಳೊಂದಿಗೆ ಎರಡು, ಇಂಗ್ಲೆಂಡ್ ತಂಡದ ಫಿಲ್ ಸಾಲ್ಟ್‌ ಮೂರನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಆಡದ ಯಶಸ್ವಿ ಜೈಸ್ವಾಲ್‌ ಶ್ರೇಯಾಂಕದಲ್ಲಿ ಕುಸಿತವಾಗಿದೆ. ಉಳಿದಂತೆ ಭಾರತದ ರುತುರಾಜ್ ಗಾಯಕ್ವಾಡ್‌ ಅವರ ಶ್ರೇಯಾಂಕದಲ್ಲೂ ಇಳಿಕೆ ಆಗಿದೆ.

ರವಿ ಬಿಷ್ಣೋಯಿಗೆ ಬಡ್ತಿ

ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್‌ ರವಿ ಬಿಷ್ಣೋಯಿ 645 ರೇಟಿಂಗ್ ಅಂಕಗಳೊಂದಿಗೆ ನಾಲ್ಕು ಸ್ಥಾನ ಜಿಗಿತ ಕಂಡು, ಬೌಲರ್‌ಗಳ ಶ್ರೇಯಾಂಕದಲ್ಲಿ ಒಂಬತ್ತನೇ ಶ್ರೇಯಾಂಕವನ್ನು ಪಡೆದಿದ್ದಾರೆ. ಇನ್ನು ಭಾರತದ ಸ್ಟಾರ್ ಪೇಸರ್‌ ಅರ್ಷದೀಪ್‌ ಸಿಂಗ್ ಎಂಟನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

Story first published: Wednesday, October 16, 2024, 18:59 [IST]
Other articles published on Oct 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+