For Quick Alerts
ALLOW NOTIFICATIONS  
For Daily Alerts
 

T20 World Cup: ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ಗೆ 8 ಆಟಗಾರರ ನಾಮನಿರ್ದೇಶನ

ಟಿ20 ವಿಶ್ವಕಪ್ ಮುಕ್ತಾಯಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಈ ಟೂರ್ನಿಯ ಚಾಂಪಿಯನ್ ಪಟ್ಟಕ್ಕಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಅಹಮದಾಬಾದ್‌ನಲ್ಲಿ ಭಾನುವಾರ (ಮಾ.8) ರಂದು ಕಾದಾಟ ನಡೆಸಲಿವೆ. ಭಾರತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸಿನಲ್ಲಿದೆ. ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಮಣಿಸಿದ್ದ ನ್ಯೂಜಿಲೆಂಡ್‌ ಫೈನಲ್‌ ಪ್ರವೇಶಿಸಿತ್ತು. ಇನ್ನು ಇಂಗ್ಲೆಂಡ್ ತಂಡವನ್ನು 7 ರನ್‌ಗಳಿಂದ ಸೋಲಿಸಿದ್ದ ಭಾರತ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದಿದೆ. ಈ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಏಕೈಕ ಆಟಗಾರ ಸ್ಥಾನ ಪಡೆದಿದ್ದಾನೆ. ಈ ಪಟ್ಟಿಯಲ್ಲಿ ಇರುವ ಆಟಗಾರರ ಪರಿಚಯ ಇಲ್ಲಿದೆ.

ಇಂಗ್ಲೆಂಡ್ ತಂಡದ ಭರವಸೆಯ ಆಲ್‌ರೌಂಡರ್ ವಿಲ್ ಜಾಕ್ಸ್‌ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು 8 ಪಂದ್ಯಗಳಲ್ಲಿ 6ರಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೆ ಇವರು ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಆಟಗಾರ ಪಾಕಿಸ್ತಾನದ ಸಾಹಿಬ್‌ಜಾದ ಫರ್ಹಾನ್‌. ಇವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ರನ್‌ಗಳನ್ನು ಕಲೆ ಹಾಕಿ, ಎದುರಾಳಿ ಬೌಲರ್‌ಗಳನ್ನು ಕಾಡಿದ್ದಾರೆ. ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ಹೆಗ್ಗಳಿಕೆ ಸಹ ಈಗ ಇವರ ಹೆಸರಿನಲ್ಲಿದೆ. ಫರ್ಹಾನ್‌ ಆರು ಇನಿಂಗ್ಸ್‌ಗಳಲ್ಲಿ 383 ರನ್‌ ಕಲೆ ಹಾಕಿದ್ದಾರೆ. ಅಲ್ಲದೆ ಒಂದೇ ಟಿ20 ವಿಶ್ವಕಪ್‌ನಲ್ಲಿ 2 ಶತಕ ಬಾರಿಸಿದ ಏಕೈಕ ಆಟಗಾರ ಎಂಬ ಶ್ರೇಯ ಇವರದ್ದಾಗಿದೆ.

ಶಾಡ್ಲಿ ವ್ಯಾನ್ ಶಾಲ್ಕ್‌ವೈಕ್

ಯುಎಸ್‌ಎ ತಂಡ ಈ ಬಾರಿ ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳಿದೆ. ಇವರು ಆಡಿದ 4 ಪಂದ್ಯಗಳಲ್ಲಿ ತಂಡಕ್ಕೆ ಆಧಾರವಾಗಿದ್ದರು. ಇವರು 6.80 ಎಕಾನಮಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Jacob Bethell: ಟೀಮ್ ಇಂಡಿಯಾಗೆ ನಡುಕ ಹುಟ್ಟಿಸಿದ ಆ ಪ್ಲೇಯರ್ ಬ್ಯಾಟಿಂಗ್ ಕಂಡು RCB ಫ್ಯಾನ್ಸ್‌ ಫುಲ್ ಖುಷ್Jacob Bethell: ಟೀಮ್ ಇಂಡಿಯಾಗೆ ನಡುಕ ಹುಟ್ಟಿಸಿದ ಆ ಪ್ಲೇಯರ್ ಬ್ಯಾಟಿಂಗ್ ಕಂಡು RCB ಫ್ಯಾನ್ಸ್‌ ಫುಲ್ ಖುಷ್

ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಆಟಗಾರರು

8 ಜನರನ್ನು ನಾಮನಿರ್ದೇಶನ ಮಾಡಿದ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್‌ ಲುಂಗಿ ಎನ್‌ಗಿಡಿ ತಂಡ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರು 7 ಪಂದ್ಯಗಳನ್ನು ಆಡಿ 12 ವಿಕೆಟ್‌ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ದಕ್ಷಿಣ ಆಫ್ರಿಕಾ ಆಟಗಾರ ಐಡನ್ ಮಾರ್ಕ್ರಾಮ್. ಇವರು ಸಹ ಆರಂಭಿಕರಾಗಿ ಕಣಕ್ಕೆ ಇಳಿದು ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಇವರು ಎಂಟು ಇನ್ನಿಂಗ್ಸ್‌ಗಳಲ್ಲಿ 286 ರನ್ ಸಿಡಿಸಿದ್ದು, ಬೌಲಿಂಗ್‌ನಲ್ಲೂ ಉತ್ತಮ ಕಾಣಿಕೆ ನೀಡಿದ್ದಾರೆ.

ರೇಸ್‌ನಲ್ಲಿ ಇಬ್ಬರು ಕಿವೀಸ್ ಆಟಗಾರರು

ನ್ಯೂಜಿಲೆಂಡ್ ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ರಚಿನ್ ರವೀಂದ್ರ ಪಾತ್ರ ಬಹಳ ಮುಖ್ಯ. ಇವರು ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನೆರವಾಗಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 11 ವಿಕೆಟ್‌ ಪಡೆದಿದ್ದು, 128 ರನ್‌ ಕಲೆ ಹಾಕಿದ್ದಾರೆ. ಹೀಗಾಗಿ ಇವರ ಮೇಲೆ ಫೈನಲ್‌ನಲ್ಲಿ ಎಲ್ಲರ ಕಣ್ಣುಗಳು ನೆಟ್ಟಿರಲಿವೆ.

IND v ENG Semifinal: ಮುಂಬೈನಲ್ಲಿ ನಿರ್ಮಾಣವಾದ ಟಾಪ್‌ 5 ದಾಖಲೆಗಳುIND v ENG Semifinal: ಮುಂಬೈನಲ್ಲಿ ನಿರ್ಮಾಣವಾದ ಟಾಪ್‌ 5 ದಾಖಲೆಗಳು

ಈ ಪಟ್ಟಿಯಲ್ಲಿ ಕಿವೀಸ್ ತಂಡದ ಆರಂಭಿಕ ಆಟಗಾರ ಟಿಮ್ ಸಿಫರ್ಟ್‌ ಅವರಿಗೂ ಸ್ಥಾನ. ಇವರು ಈ ವರೆಗೆ ಆಡಿದ 8 ಪಂದ್ಯಗಳಲ್ಲಿ 45.66 ಸರಾಸರಿಯಲ್ಲಿ 274 ರನ್ ಗಳಿಸಿದ್ದಾರೆ. ಇವರು ಈಗಾಗಲೇ ಟೂರ್ನಿಯಲ್ಲಿ ಮೂರು ಅರ್ಧಶತಕ ಬಾರಿಸಿದ್ದು ಇವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ.

ಸಂಜು ಸ್ಯಾಮ್ಸನ್

ಟಿ20 ವಿಶ್ವಕಪ್ ಆರಂಭವಾದಾಗ ಸಂಜು ಸ್ಯಾಮ್ಸನ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗುತ್ತದೋ ಇಲ್ಲವೋ ಎಂಬ ಸಂಶಯಗಳು ಇದ್ದವು. ಆದರೆ ನಾಕೌಟ್‌ ಹಂತಕ್ಕೂ ಮುನ್ನ ತಂಡದಲ್ಲಿ ಆದ ಮಹತ್ವದ ಬದಲಾವಣೆಯಲ್ಲಿ ಸಂಜು ತಂಡ ಸೇರಿಕೊಂಡರು. ಇವರು ವೆಸ್ಟ್‌ ಇಂಡೀಸ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದರು. ಅಲ್ಲದೆ ಈ ಪಂದ್ಯದಲ್ಲಿ ಅಜೇಯ 97 ರನ್‌ ಸಿಡಿಸಿದ್ದರು. ಅಲ್ಲದೆ ಸೆಮಿಫೈನಲ್‌ ಪಂದ್ಯದಲ್ಲಿ 42 ಎಸೆತಗಳಲ್ಲಿ 89 ರನ್ ಗಳಿಸಿದರು. ಈ ಮೂಲಕ ನಾಲ್ಕು ಪಂದ್ಯಗಳಲ್ಲಿ 77.33 ಸರಾಸರಿಯಲ್ಲಿ 232 ರನ್ ಗಳಿಸಿದ್ದಾರೆ. ಇವರು ಸಹ ಟೂರ್ನಿಯ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

Story first published: Friday, March 6, 2026, 14:55 [IST]
Other articles published on Mar 6, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+