Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಸಂಜು ಸ್ಯಾಮ್ಸನ್‌ ಮೈದಾನದಿಂದ ಹೊರ ಹೋಗಿದ್ದು ಏಕೆ?

ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ಸಂಜು ಸ್ಯಾಮ್ಸನ್‌ ಏಕಾಏಕಿ ಮೈದಾನದಿಂದ ಹೊರಗುಳಿಯಬೇಕಾಯಿತು. ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಂಜು ಏಕೆ ಮೈದಾನ ಬಿಟ್ಟರು ಎಂಬ ಪ್ರಶ್ನೆ ಎಲ್ಲರಲ್ಲಿ ಉದ್ಭವಿಸಿದೆ. ಅವರು ಮೈದಾನದಿಂದ ಏಕೆ ಹೊರ ನಡೆದರು ಎಂಬ ಬಗ್ಗೆ ವರದಿ ಇಲ್ಲಿದೆ.

189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಂಜು ಸ್ಯಮ್ಸನ್‌ ಅಮೋಘವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಇವರು ತಂಡಕ್ಕೆ ಯಾವ ರೀತಿಯ ಆರಂಭದ ಅವಶ್ಯಕತೆ ಇತ್ತೋ ಅದೇ ರೀತಿಯ ಆರಂಭವನ್ನು ನೀಡಿದರು. ತಮ್ಮ ಧಮಾಕೆದಾರ್ ಬ್ಯಾಟಿಂಗ್ ಮೂಲಕವೇ ರನ್‌ಗಳನ್ನು ಕಲೆ ಹಾಕುತ್ತಾ ಸಾಗಿದ ಸಂಜು ಆರಂಭದಲ್ಲಿ ಆರ್ಭಟಿಸಿದರು. ಯಶಸ್ವಿ ಜೈಸ್ವಾಲ್‌ ಜೊತೆಗೂಡಿ ಸಂಜು ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಇವರಿಬ್ಬರ ಅಬ್ಬರದ ಆಟದ ನೆರವಿನಿಂದ ರಾಜಸ್ಥಾನ ಐದು ಓವರ್‌ಗಳಲ್ಲಿ 50 ರನ್‌ ಸಿಡಿಸಿತು.

Sanju Samson Retires Hurt After Explosive Start Against Delhi Capitals at Arun Jaitley Stadium

ಸಂಜು ಸ್ಯಾಮ್ಸನ್‌ ಆರನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು. ಈ ಮಧ್ಯೆ ಮೂರನೇ ಬಾಲ್ ನೋಬಾಲ್ ಆಯಿತು. ಆಗ ಸಂಜು ಕೊಂಚ್ ಅನ್‌ ಕನ್ಫರ್ಟ್‌ ಕಂಡರು. ಇದನ್ನು ಕಂಡು ಅಂಪೈರ್ ರಾಜಸ್ಥಾನ ತಂಡದ ಫಿಸಿಯೋಗೆ ಮೈದಾನಕ್ಕೆ ಬರುವ ಅನುಮತಿ ನೀಡಿದರು. ಫಿಸಿಯೋ ಬಂದು ಸಂಜುಗೆ ಉಪಚಾರ ಮಾಡಿದ್ರು. ಆ ನಂತರ ಸಂಜು ಸ್ಯಾಮ್ಸನ್‌ ಫ್ರಿ ಹಿಟ್‌ನಲ್ಲಿ ಕಟ್ ಮಾಡಿದ್ರು. ಆಗ ಅವರಿಗೆ ಸ್ನಾಯು ಸೆಳೆತ ಜೋರಾಯಿತು. ಆಗ ಪಂದ್ಯ ಕೆಲ ಕಾಲ ನಿಂತಿತ್ತು.

ಸಂಜು ಸ್ಯಾಮ್ಸನ್‌ ಮುಂದೆ ಆಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಅವರು ಮೈದಾನವನ್ನು ತೊರೆಯಬೇಕಾಯಿತು. ಇವರು ಮೈದಾನವನ್ನು ತೊರೆಯುತ್ತಿದ್ದಂತೆ ಇವರ ಸ್ಥಾನವನ್ನು ರಿಯಾನ್ ಪರಾಗ್‌ ತುಂಬಿದರು. ರಾಜಸ್ಥಾನ ತಂಡಕ್ಕೆ ಅವಶ್ಯಕತೆ ಇದ್ರೆ ಸಂಜು ಮೈದಾನಕ್ಕೆ ಪ್ರವೇಶಿಸಬಹುದು. ಸಂಜು ಸ್ಯಾಮ್ಸನ್‌ ರಿಟೈರ್ಡ್‌ ಹರ್ಟ್‌ ಆಗುವ ಮುನ್ನ 19 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್‌ ನೆರವಿನಿಂದ 31 ರನ್‌ ಸಿಡಿಸಿ ಮೈದಾನದಿಂದ ಹೊರ ನಡೆದರು.

Story first published: Wednesday, April 16, 2025, 23:27 [IST]
Other articles published on Apr 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+