ಸ್ಟೀವನ್ ಸ್ಮಿತ್ ನಿಕ್‌ನೇಮ್ ಹುಟ್ಟಿದ ಗುಟ್ಟು ಬಿಚ್ಚಿಟ್ಟ ಸಂಜು ಸ್ಯಾಮ್ಸನ್

ನವದೆಹಲಿ, ಮೇ 6: ಭಾರತದ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರಿಗೆ 'ಚಾಚೂ' ಹೆಸರು ಬಂದಿದ್ಹೇಗೆ ಎಂದು ಸ್ಯಾಮ್ಸನ್ ಹೇಳಿಕೊಂಡಿದ್ದಾರೆ. ಮಂಗಳವಾರ (ಮೇ 5) ಸಂದರ್ಶನದಲ್ಲಿ ಮಾತನಾಡಿದ ಸಂಜು, ಸ್ಮಿತ್ ಅವರ ನಿಕ್‌ನೇಮ್ ಹುಟ್ಟಿನ ಗುಟ್ಟು ಬಿಚ್ಚಿಟ್ಟಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ ಸಲಹೆಗಾರ, ನ್ಯೂಜಿಲೆಂಡ್ ಸ್ಪಿನ್ನರ್ ಇಶ್ ಸೋಧಿ ಜೊತೆ ಚಾಟ್ ನಡೆಸಿದ ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ ಮತ್ತು ತನಗೆ ಚಾಚೂ ಅನ್ನೋ ಅಡ್ಡ ಹೆಸರು ಬಂದಿದ್ದೇಗೆ ಎಂದು ಬಾಯ್ಬಿಟ್ಟಿದ್ದಾರೆ. 'ಚಾಚೂ' ನಿಕ್ ನೇಮ್ ಅನ್ನು ಆರಂಭಿಸಿದ್ದು ಆಸೀಸ್ ಮಾಜಿ ಬ್ಯಾಟ್ಸ್‌ಮನ್ ಬ್ರಾಡ್ ಹಾಗ್ ಎಂದು ಸ್ಯಾಮ್ಸನ್ ತಿಳಿಸಿದ್ದಾರೆ.
'ಆ ಹೆಸರು ಮೊದಲು ಆರಂಭಗೊಂಡಿದ್ದು ಬ್ರಾಡ್ ಹಾಗ್ ಅವರಿಂದ. ಅವರು ಸ್ಮಿತ್ ಅವರನ್ನು 'ಚಾಚೂ' ಅಂತ ಕರೆದರು, ಹಾಗ್ ಆಚೆ ಹೋದ ಮೇಲೆ ನಾನೂ ಸ್ಮಿತ್‌ರನ್ನು ಚಾಚೂ ಅಂತ ಕರೆದೆ. ಅದಕ್ಕೆ ಪ್ರತಿಯಾಗಿ ಸ್ಟೀವ್ ಕೂಡ ನನ್ನನ್ನು ಚಾಚೂ ಅಂದರು. ಆವತ್ತಿನಿಂದ ನಾವಿಬ್ಬರೂ ಅದೇ ಹೆಸರನ್ನು ತಮಾಷೆಯಾಗಿ ಕರೆದುಕೊಳ್ಳುತ್ತಿದ್ದೇವೆ,' ಎಂದು ಸ್ಯಾಮ್ಸನ್ ವಿವರಿಸಿದರು.
'ಸ್ಮಿತ್ ಜೊತೆ ನನಗೆ ಒಳ್ಳೆಯ ಸ್ನೇಹ ಸಂಬಂಧವಿದೆ. ವಿಶ್ವಕ್ರಿಕೆಟ್‌ನಲ್ಲಿ ಅವರೊಬ್ಬರು ಚತುರ ಆಟಗಾರ. ಅವರ ಅಡಿಯಲ್ಲಿ ಆಡೋಕೆ ನಮಗೆಲ್ಲರಿಗೂ ಖುಷಿ ಅನ್ನಿಸುತ್ತೆ,' ಎಂದು ಆರ್‌ಆರ್ ನಾಯಕ ಸ್ಟೀವ್ ಸ್ಮಿತ್ ಬಗ್ಗೆ ಸ್ಯಾಮ್ಸನ್ ಅಭಿಪ್ರಾಯಿಸಿದ್ದಾರೆ. ಆರ್‌ಆರ್ ತಂಡದಲ್ಲಿ ಆಡುವಾಗ ತಾನು ಸ್ಮಿತ್, ವಿಕೆಟ್ ಕೀಪರ್ ಜೋಸ್ ಬಟ್ಲರ್, ಆಲ್ ರೌಂಡರ್ ಬೆನ್ ಸ್ಟೋಕ್ಸ್ ಆಟವನ್ನು ಗಮನಿಸುತ್ತಿರುವುದಾಗಿ ಸಂಜು ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications