ಬ್ಯಾಟಿಂಗ್‍ನಲ್ಲಿ ಫ್ಲಾಪ್ ಆದರೂ ವಿಂಡೀಸ್ ವಿರುದ್ಧದ ಪ್ರಥಮ ಪಂದ್ಯದ ಗೆಲುವಿಗೆ ಸಂಜು ಸ್ಯಾಮ್ಸನ್ ಕಾರಣ!

ಇಂಗ್ಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದು, 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ.
ಇತ್ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ಆರಂಭವಾಗಿದ್ದು, ಪ್ರಥಮ ಪಂದ್ಯ ನಿನ್ನೆ ( ಜುಲೈ 22 ) ಟ್ರಿನಿಡಾಡ್ ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಶಿಖರ್ ಧವನ್, ಶುಬ್ ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಕಲೆಹಾಕಿತು. ಅತ್ತ ಈ ಗುರಿಯನ್ನು ಮುಟ್ಟುವಲ್ಲಿ ಅಂತಿಮ ಹಂತದಲ್ಲಿ ಎಡವಿದ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ರನ್ ಕಲೆಹಾಕಿತು. ಈ ಮೂಲಕ ಟೀಮ್ ಇಂಡಿಯಾ 3 ರನ್‌ಗಳ ರೋಚಕ ಜಯ ಸಾಧಿಸಿತು.
ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. 18 ಎಸೆತಗಳಲ್ಲಿ 12 ರನ್ ಕಲೆಹಾಕಿದ ಸಂಜು ಸ್ಯಾಮ್ಸನ್ ರೊಮಾರಿಯೋ ಶೆಫರ್ಡ್ ಎಸೆತದಲ್ಲಿ ಎಲ್ ಬಿಡಬ್ಲ್ಯುಗೆ ಔಟ್ ಆದರು. ಹೀಗೆ ಹಲವು ದಿನಗಳ ನಂತರ ಏಕದಿನ ಅವಕಾಶ ಸಿಕ್ಕರೂ ಸಹ ಸರಿಯಾಗಿ ಬಳಸಿಕೊಳ್ಳದ ಸಂಜು ಸ್ಯಾಮ್ಸನ್ ವಿರುದ್ಧ ಸಾಮಾಜಿಕ ಜಾಲತಣದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದವು. ಆದರೆ ಪಂದ್ಯ ಮುಕ್ತಾಯವಾದ ನಂತರ ಅದೇ ನೆಟ್ಟಿಗರು ಸಂಜು ಸ್ಯಾಮ್ಸನ್ ಅದ್ಭುತ ವಿಕೆಟ್ ಕೀಪಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
The save from Sanju Samson made a huge impact on the victory of the Indian team, it was a certain 4 extra runs for West Indies & they could have won the game. pic.twitter.com/wxcDLVqY29
— Johns. (CricCrazyJohns) July 22, 2022
ಗೆಲುವಿಗೆ ಸಂಜು ಸ್ಯಾಮ್ಸನ್ ಕಾರಣ
ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ಅಂತಿಮ ಓವರ್‌ನಲ್ಲಿ 15 ರನ್‌ಗಳ ಅಗತ್ಯತೆ ಇತ್ತು. ಕಣದಲ್ಲಿ ನೆಲ ಕಚ್ಚಿ ಆಡುತ್ತಿದ್ದ ವೆಸ್ಟ್ ಇಂಡೀಸ್ ತಂಡದ ರೋಮಾರಿಯೋ ಶೆಫರ್ಡ್ ಮತ್ತು ಅಖೆಲ್ ಹೊಸೈನ್ ಇದ್ದರು. ಅಂತಿಮ ಓವರ್‌ನ್ನು ಮೊಹಮ್ಮದ್ ಸಿರಾಜ್ ಎಸೆದರು. ಹಾಗೂ ಈ ಓವರ್‌ನ ಐದನೇ ಎಸೆತ ಎಸೆದ ಸಿರಾಜ್ ವೈಡ್ ಬಾಲ್ ಹಾಕಿದ್ದರು. ಈ ವೈಡ್ ಎಸೆತ ತೀರ ಅಗಲವಾಗಿತ್ತು ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಚೆಂಡನ್ನು ಹಕ್ಕಿಯಂತೆ ಹಾರಿ ಹಿಡಿದಿದ್ದರು. ಸಂಜು ಸ್ಯಾಮ್ಸನ್ ಈ ವೈಡ್ ತಡೆಯದೇ ಇದ್ದಿದ್ದರೆ ಟೀಮ್ ಇಂಡಿಯಾ ಪಂದ್ಯವನ್ನು 3 ರನ್‌ಗಳಿಂದ ಗೆಲ್ಲಲಾಗದೇ ಸೋಲನ್ನು ಅನುಭವಿಸುತ್ತಿತ್ತು ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಶಿಖರ್ ಧವನ್ ಪಂದ್ಯಶ್ರೇಷ್ಠ
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ 99 ಎಸೆತಗಳಲ್ಲಿ 97 ರನ್ ಕಲೆಹಾಕಿ ಔಟ್ ಆಗಿ ಶತಕ ವಂಚಿತರಾದರು. 10 ಫೋರ್‌ಗಳು ಮತ್ತು 3 ಸಿಕ್ಸರ್ ಚಚ್ಚಿದ ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆಡುವ ಬಳಗ
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications