For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ Sanju Samson: ಸಿಕ್ಸರ್‌ಗೆ ಹೊಸ ಸುಲ್ತಾನ್‌

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್ ಫೈನಲ್‌ ಪಂದ್ಯ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ 96 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಟೂರ್ನಿಯಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡುವಲ್ಲಿ ಹಲವು ಆಟಗಾರರು ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿದ್ದಾರೆ. ಅದರಲ್ಲಿ ಎದ್ದು ಕಾಣುವ ಹೆಸರು ದೇವರ ನಾಡಿನ ಆಟಗಾರ ಸಂಜು ಸ್ಯಾಮ್ಸನ್.

ಒಂದು ತಿಂಗಳ ಹಿಂದೆ ಟಿ20 ವಿಶ್ವಕಪ್ ಆರಂಭವಾದಾಗ ಸಂಜು ಸ್ಯಾಮ್ಸನ್‌ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲೂ ಸ್ಥಾನ ಇರಲಿಲ್ಲ. ಆದರೆ ಟೂರ್ನಿ ಮುಗಿಯುವ ಹೊತ್ತಿಗೆ ಸಂಜು ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾದರು. ಅಲ್ಲದೆ ಒತ್ತಡದ ಸನ್ನಿವೇಶದಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡರು. ಸಂಜು ಸ್ಯಾಮ್ಸನ್ ಈ ಟೂರ್ನಿಯಲ್ಲಿ ಆಡಿದ ಧಾಟಿ ನಿಜಕ್ಕೂ ಅಭಿಮಾನಿಗಳ ಮನ ಗೆದ್ದಿತು. ತಂಡಕ್ಕೆ ಅವಶ್ಯಕತೆ ಇದ್ದಾಗಲೆಲ್ಲಾ ಜವಾಬ್ದಾರಿಯ ಭಾರವನ್ನು ತಮ್ಮ ಮೇಲೆ ಹಾಕಿಕೊಂಡ ಸಂಜು ಅಮೋಘ ಇನಿಂಗ್ಸ್ ಕಟ್ಟಿದರು.

Sanju Samson

ಟೂರ್ನಿಯ ಆರಂಭದಿಂದಲೂ ಸಂಜು ಸ್ಯಾಮ್ಸನ್‌ ಟೀಮ್ ಇಂಡಿಯಾದ ಭಾಗವಾಗಿದ್ದರೆ, ಇನ್ನು ಹತ್ತು ಹಲವು ದಾಖಲೆಗಳನ್ನು ಬರೆಯುತ್ತಿದ್ದರು. ಆದರೆ ಸಂಜು ಅದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ತನಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಸಂಜು ಟಿ20 ವಿಶ್ವಕಪ್‌ನಲ್ಲಿ ಆರ್ಭಟಿಸಿದರು. ಇವರು ಆಡಿದ ಐದು ಪಂದ್ಯಗಳಲ್ಲಿ 88ರ ಸರಾಸರಿಯಲ್ಲಿ 321 ರನ್‌ ಬಾರಿಸಿದರು. ಈ ಮೂಲಕ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಗರಿಷ್ಠ ರನ್ ಸಾಧನೆ ಮಾಡಿದರು.

India Creates History: ವಿಶ್ವಕಪ್‌ ಗೆಲ್ಲುತ್ತಿದ್ದಂತೆ 3 ದಾಖಲೆ ನಿರ್ಮಿಸಿದ ಭಾರತ India Creates History: ವಿಶ್ವಕಪ್‌ ಗೆಲ್ಲುತ್ತಿದ್ದಂತೆ 3 ದಾಖಲೆ ನಿರ್ಮಿಸಿದ ಭಾರತ

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರು

ಸಾಹಿಬ್ಜಾದಾ ಫರ್ಹಾನ್, ಪಾಕಿಸ್ತಾನ, 383 ರನ್‌
ಟಿಮ್ ಸೀಫರ್ಟ್, ನ್ಯೂಜಿಲೆಂಡ್‌, 326 ರನ್‌
ಸಂಜು ಸ್ಯಾಮ್ಸನ್, ಭಾರತ, 321 ರನ್‌
ಇಶಾನ್ ಕಿಶನ್, ಭಾರತ, 317 ರನ್‌
ಫಿನ್ ಅಲೆನ್, ನ್ಯೂಜಿಲೆಂಡ್‌, 298 ರನ್‌

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಿಸಿಕೊಂಡು ತಂಡದ ಜಯದಲ್ಲಿ ಮಿಂಚಿದ್ದಾರೆ. ಇವರು ಈ ಟೂರ್ನಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಟೂರ್ನಿಯಲ್ಲಿ ಸಂಜು ಒಟ್ಟಾರೆ 24 ಸಿಕ್ಸರ್‌ ಸಿಡಿಸಿ ಮಿಂಚಿದರು. ಈ ಮೂಲಕ ಸಂಜು ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

Sanju Samson: ಒತ್ತಡ ಮೆಟ್ಟಿನಿಂತು ಬ್ಯಾಟ್ ಮಾಡಿದ ಸಂಜು: ಬ್ಯಾಕ್‌ ಟು ಬ್ಯಾಕ್‌ ಮೂರನೇ ಅರ್ಧಶತಕ Sanju Samson: ಒತ್ತಡ ಮೆಟ್ಟಿನಿಂತು ಬ್ಯಾಟ್ ಮಾಡಿದ ಸಂಜು: ಬ್ಯಾಕ್‌ ಟು ಬ್ಯಾಕ್‌ ಮೂರನೇ ಅರ್ಧಶತಕ

ಈ ದಾಖಲೆ ಇದಕ್ಕೂ ಮೊದಲು ವೆಸ್ಟ್‌ ಇಂಡೀಸ್ ತಂಡದ ನಿಕೋಲಸ್ ಪೂರನ್ ಹೆಸರಿನಲ್ಲಿತ್ತು. ಇವರು 2024ರಲ್ಲಿ 17 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ದಾಖಲೆಯನ್ನು ಸಂಜು ಸ್ಯಾಮ್ಸನ್‌ ಮುರಿದಿದ್ದಾರೆ. ಈ ಟೂರ್ನಿಯಲ್ಲಿ ಸಂಜು ಸೂಪರ್‌ 8 ಹಂತದ ಕೊನೆಯ ಪಂದ್ಯ, ಸೆಮಿಫೈನಲ್‌ ಪಂದ್ಯ, ಫೈನಲ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಜಯದಲ್ಲಿ ಮಿಂಚಿದ್ದಾರೆ.

ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್ಸ್‌

ಸಂಜು ಸ್ಯಾಮ್ಸನ್, ಭಾರತ, 24 ಸಿಕ್ಸರ್ (2026)
ಫಿನ್ ಅಲೆನ್, ನ್ಯೂಜಿಲೆಂಡ್‌, 20 ಸಿಕ್ಸರ್ (2026)
ಶಿಮ್ರಾನ್ ಹೆಟ್ಮೈಯರ್, ವೆಸ್ಟ್‌ ಇಂಡೀಸ್‌, 19 ಸಿಕ್ಸರ್‌ (2026)
ಇಶಾನ್ ಕಿಶನ್, ಭಾರತ, 18 ಸಿಕ್ಸರ್‌ (2026)
ಸಾಹಿಬ್ಜಾದಾ ಫರ್ಹಾನ್, ಪಾಕಿಸ್ತಾನ, 18 ಸಿಕ್ಸರ್‌ (2026)
ಶಿವಂ ದುಬೆ, ಭಾರತ, 17 ಸಿಕ್ಸರ್‌ (2026)
ನಿಕೋಲಸ್ ಪೂರನ್, ವೆಸ್ಟ್‌ ಇಂಡೀಸ್‌, 17 ಸಿಕ್ಸರ್‌ (2024)

Story first published: Monday, March 9, 2026, 11:33 [IST]
Other articles published on Mar 9, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+