ಭಾರತದ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತೆ ಭಾರತ ವೈಟ್‌ಬಾಲ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಟೀಮ್ ಇಂಡಿಯಾದ ಮುಂದಿನ ಏಕದಿನ ಹಾಗೂ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ ದೊರೆಯುವುದು ಬಹುತೇಕ ನಿಶ್ಚಿತ. ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಳಿರುವ ಟೀಮ್ ಇಂಡಿಯಾ ಟೆಸ್ಟ್ ಏಕದಿನ ಹಾಗೂ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಗೆ ಇನ್ನಷ್ಟೇ ಟೀಮ್ ಇಂಡಿಯಾ ತಂಡವನ್ನು ಬಿಸಿಸಿಐ ಪ್ರಕಟಿಸಬೇಕಿದೆ.
ಸಂಜು ಸ್ಯಾಮ್ಸನ್ ಈ ಹಿಂದಿನ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗಳಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಆದರೆ ಇದೀಗ ಕೆರಿಬಿಯನ್ ಪ್ರವಾಸಕ್ಕಾಗಿ ಏಕದಿನ ಮತ್ತು ಟಿ20 ತಂಡಗಳಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಸಂಜು ತಂಡದಲ್ಲಿ ಸ್ಥಿರವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ. ಇದೀಗ ತಂಡದಲ್ಲಿನ ಕೆಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯಲು ಸಂಜು ಸಿದ್ಧರಾಗಿದ್ದಾರೆ.

ಸಂಜು ಸ್ಯಾಮ್ಸನ್ ಕೊನೆಯ ಬಾರಿ ಟಿ20ಐ ಪಂದ್ಯವನ್ನಾಡಿದ್ದು ಶ್ರೀಲಂಕಾ ವಿರುದ್ಧ. ಆದರೆ ಆ ಸರಣಿಯಲ್ಲಿ ಅವರು ಗಾಯಗೊಂಡು ಹೊರಗುಳಿಯಬೇಕಾಯಿತು. ಅದಾದ ಬಳಿಕ ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿ ಸಂಜು ಅಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಆಡಿದ 13 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು 360ರನ್ ಮಾತ್ರ. ಇದೀಗ ವೆಸ್ಟ್ ಇಂಡೀಸ್ ವಿರುದ್ಧ ದೊರೆಯುವ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ವಿಶ್ವಾಸದಲ್ಲಿದ್ದಾರೆ ಕೇರಳದ ಈ ಕ್ರಿಕೆಟಿಗ.
ರಿಷಬ್ ಪಂತ್ ಕನಿಷ್ಠ ಏಕದಿನ ವಿಶ್ವಕಪ್‌ವರೆಗೆ ತಂಡದಿಂದ ಹೊರಗುಳಿದಿರುವುದರಿಂದ ಇಶಾನ್ ಕಿಶನ್ ಜೊತೆಗೆ ಸ್ಯಾಮ್ಸನ್ ಹೆಚ್ಚಿನ ಅವಕಾಶಗಳನ್ನು ಪಡೆಯುವ ಅವಕಾಶವಿದೆ. T20 ಪಂದ್ಯಗಳಿಗೆ ಮಾತ್ರವಲ್ಲದೆ ಏಕದಿನ ತಂಡದ ಯೋಜನೆಯಲ್ಲಿಯೂ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ದೊರೆತರೆ ಅಚ್ಚರಿಯಿಲ್ಲ. ಕೆಎಲ್ ರಾಹುಲ್ ಕೂಡ ಗಾಯಗೊಂಡಿರುವ ಕಾರಣ ಸ್ಯಾಮ್ಸನ್ 50 ಓವರ್‌ಗಳ ಮಾದರಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುವ ಅವಕಾಶವಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್, ಮೊಹಮ್ಮದ್ ಶಮಿ ಮತ್ತು ಸಿರಾಜ್ ಈ ಆಟಗಾರರಲಿ ಕೆಲವರು ಗಾಯಗೊಂಡಿದ್ದು ಕೆಲವರಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಸ್ಯಾಮ್ಸನ್‌ಗೆ ಏಕದಿನ ಮತ್ತು ಟಿ 20 ತಂಡದಲ್ಲಿ ಉತ್ತಮ ಪ್ರಮಾಣದ ಅವಕಾಶ ದೊರೆಯುವ ಸಾಧ್ಯತೆಯಿದೆ.
ಇಂಡೀಸ್ ಪ್ರವಾಸದ ವೇಳಾ ಪಟ್ಟಿ ಹೀಗಿದೆ.
ಮೊದಲನೇ ಟೆಸ್ಟ್: ಜುಲೈ 12-16 ಡೊಮಿನಿಕಾದ ವಿಂಡ್ಸರ್ ಪಾರ್ಕ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:30)
ಎರಡನೇ ಟೆಸ್ಟ್ ಪಂದ್ಯ: ಜುಲೈ 20-24 ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:30)
ಏಕದಿನ ಸರಣಿಯ ವೇಳಾಪಟ್ಟಿ
1ನೇ ODI: ಜುಲೈ 27, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
2ನೇ ODI: ಜುಲೈ 29, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
3ನೇ ODI: ಆಗಸ್ಟ್ 1, ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
ಟಿ20 ಸರಣಿಯ ವೇಳಾಪಟ್ಟಿ
ಮೊದಲನೇ T20I: ಆಗಸ್ಟ್ 3, ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
ಎರಡನೇ T20I: ಆಗಸ್ಟ್ 6, ರಾಷ್ಟ್ರೀಯ ಕ್ರೀಡಾಂಗಣ, ಗಯಾನಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
ಮೂರನೇ T20I: ಆಗಸ್ಟ್ 8, ರಾಷ್ಟ್ರೀಯ ಕ್ರೀಡಾಂಗಣ ಗಯಾನಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
4ನೇ T20I: ಆಗಸ್ಟ್ 12, ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಲಾಡರ್‌ಹಿಲ್, ಫ್ಲೋರಿಡಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
5ನೇ T20I: ಆಗಸ್ಟ್ 13, ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಲಾಡರ್‌ಹಿಲ್, ಫ್ಲೋರಿಡಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)