ಮೊಬೈಲ್, ಸಮಾಜಿಕ ತಾಣದಿಂದ ದೂರ; ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಗುಟ್ಟು ಬಹಿರಂಗ
ಕ್ರಿಕೆಟ್ ಆಟಗಾರ ಒಮ್ಮೆ ತಂಡ ಸಂಕಷ್ಟದಲ್ಲಿದ್ದಾಗ ತಾನು ಆಧಾರವಾಗಬೇಕು ಎಂದು ಕನಸು ಕಂಡಿರುತ್ತಾರೆ. ಆದರೆ ಈ ಕನಸು ಅದೆಷ್ಟೋ ಆಟಗಾರರ ಕೈ ಹಿಡಿಯುವುದಿಲ್ಲ. ಇನ್ನು ಕೆಲವರಿಗೆ ಈ ಕನಸು ಕೈ ಹಿಡಿದರೂ, ಅದಕ್ಕೆ ವೇದಿಕೆ ಸರಿಯಾಗಿ ಸಿಕ್ಕಿರುವುದಿಲ್ಲ. ಆದರೆ ವಿಶ್ವಕಪ್‌ನಂತಹ ವೇದಿಕೆಯಲ್ಲಿ ಇಂತಹ ಒಂದು ಅವಕಾಶ ಸಿಕ್ಕು, ಇದನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಪ್ರತಿಭೆ ಸಂಜು ಸ್ಯಾಮ್ಸನ್.
ಟೀಮ್ ಇಂಡಿಯಾದ ಪರ ಕಳೆದ 11 ವರ್ಷಗಳಿಂದ ಟಿ20 ತಂಡದ ಭಾಗವಾಗಿರುವ ಸಂಜು ಕೇವಲ 60 ಪಂದ್ಯಗಳನ್ನು ಆಡಿದ್ದಾರೆ. ಇವರಿಗೆ ಅವಕಾಶಗಳು ಕಡಿಮೆ ಸಿಕ್ಕಿವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡ ಸಂಜು, ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದಾರೆ. ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಸಂಜು ಸ್ಯಾಮ್ಸನ್ ಅವರ ಕೊಡುಗೆ ಅಪಾರ. ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವೋಘ ಪ್ರದರ್ಶನ ನೀಡಿದ್ದಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಬಳಿಕ ಮಾತನಾಡಿದ ಸಂಜು, ಈ ಯಶಸ್ಸಿನ ಹಿಂದಿನ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ. ದೊಡ್ಡ ಟೂರ್ನಿಗೆ ನಾನು ಮುಂಬೈಲ್ ಹಾಗೂ ಸಾಮಾಜಿಕ ತಾಣದೊಂದ ದೂರ ಉಳಿದು ತಂಡಕ್ಕಾಗಿ ಆಡಿದ್ದೇನು ಎಂದು ಬಹಿರಂಗ ಪಡಿಸಸಿದ್ದಾರೆ. ನಾನು ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಿದ್ದು ಖುಷಿ ನೀಡಿದೆ ಎಂದಿದ್ದಾರೆ.
ಈ ಕ್ಲಾಸಿಕ್ ಇನಿಂಗ್ಸ್ ಮೂಲಕ ಟೀಮ್ ಇಂಡಿಯಾ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 190+ ರನ್‌ಗಳನ್ನು ಬೆನ್ನಟ್ಟುವಾಗ ಅತ್ಯಧಿಕ ಮೊತ್ತವನ್ನು ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಸಂಜು ಪಾಲಾಗಿದೆ.
ಟಿ20 ವಿಶ್ವಕಪ್‌ನಲ್ಲಿ 190ಕ್ಕೂ ಹೆಚ್ಚು ರನ್‌ಗಳನ್ನು ಬೆನ್ನಟ್ಟುವಾಗ ದಾಖಲಿಸಿದ ರನ್‌ಗಳು
97 ರನ್, ಸಂಜು ಸ್ಯಾಮ್ಸನ್, ವಿಂಡೀಸ್ ವಿರುದ್ಧ 2026
90 ರನ್, ಹರ್ಷಲ್ ಗಿಬ್ಸ್, ವಿಂಡೀಸ್ ವಿರುದ್ಧ 2007
83 ರನ್, ಜೋ ರೂಟ್, ದಕ್ಷಿಣ ವಿರುದ್ಧ 2016
82 ರನ್, ಆಂಡ್ರಿ ಸಿಮನ್ಸ್, ಭಾರತ ವಿರುದ್ಧ 2016
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮಹತ್ವದ ಪಂದ್ಯದಲ್ಲಿ ಒಟ್ಟು 12 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಈ ಮೂಲಕ ಭಾರತದ ಪರ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರ ಹೆಸರಿನಲ್ಲಿತ್ತು.
ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ಸ್
16, ಸಂಜು ಸ್ಯಾಮ್ಸನ್ 97
15, ರೋಹಿತ್ ಶರ್ಮಾ 92
14, ಸೂರ್ಯಕುಮಾರ್ ಯಾದವ್ 84
14, ಸುರೇಶ್ ರೈನಾ 101
13, ಇಶಾನ್ ಕಿಶನ್ 77
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications