6,6,6,6,6,: ವೇಗದ ಶತಕ ಬಾರಿಸಿದ ಸಂಜು ಸ್ಯಾಮ್ಸನ್
ಹೈದರಾಬಾದ್: ಟೀಮ್ ಇಂಡಿಯಾದ ಭರವಸೆಯ ಆಟಗಾರ ಸಂಜು ಸ್ಯಾಮ್ಸನ್ ಮುತ್ತಿನ ನಗರಿಯಲ್ಲಿ ಮುತ್ತಿನಂತಹ ಇನಿಂಗ್ಸ್ ಕಟ್ಟಿದ್ದಾರೆ. ಆರಂಭಿಕರಾಗಿ ಕಣಕ್ಕೆ ಇಳಿದ ಸಂಜು ಸ್ಯಾಮ್ಸನ್ ಅಮೋಘ ಇನಿಂಗ್ಸ್ ಕಟ್ಟಿದರು. ಅಲ್ಲದೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಭಿಸಿದ ಸಂಜು ಕ್ಲಾಸಿಕ್ ಆಟವನ್ನು ಆಡಿದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಬಾಂಗ್ಲಾ ಬೌಲರ್‌ಗಳು ವಿಫಲರಾದರು. ಇವರ ಆಟವನ್ನು ಕಂಡು ಹೈದರಾಬಾದ್ ಅಭಿಮಾನಿಗಳು ಫುಲ್ ಖುಷ್ ಆದರು. ಅವಕಾಶಕ್ಕಾಗಿ ಕಾದು ಕಾದು ಸುಸ್ತಾಗಿದ್ದ ಸಂಜು ಹೈದರಾಬಾದ್‌ನಲ್ಲಿ ಅಬ್ಬರಿಸಿದರು.

ಮುತ್ತಿನ ನಗರಿಯಲ್ಲಿ ಮುತ್ತಿನಂತ ಇನಿಂಗ್ಸ್
ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ರಿಶಾದ್ ಹುಸೇನ್ ಅವರ ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಬ್ಬರಿಸಿದ್ದಾರೆ. ಈ ಮೂಲಕ ಒಂದೇ ಓವರ್‌ನಲ್ಲಿ ಒಟ್ಟು 30 ರನ್ ಗಳಿಸಿದರು. ಮೂರನೇ ಪಂದ್ಯದಲ್ಲಿ ಸ್ಯಾಮ್ಸನ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದೇ ವೇಳೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಗೇರ್ ಶಿಫ್ಟ್ ಮಾಡಿದ್ದು ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಗೈದರು. ಇವರು ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಸತತ ಐದು ಸಿಕ್ಸರ್
ಭಾರತ ತಂಡ ಬ್ಯಾಟಿಂಗ್ ಮಾಡುವಾಗ 10ನೇ ಓವರ್ ಬೌಲಿಂಗ್ ಮಾಡಿದ ಬಾಂಗ್ಲಾದ ರಿಶಾದ್ ಹುಸೇನ್ ಬೌಲಿಂಗ್ ಮಾಡಲು ಮುಂದಾದರು. ಈ ಓವರ್ ಬೌಲ್ ಮಾಡುವ ಮುನ್ನ ರಿಶಾದ್ ಹುಸೇನ್ 16 ರನ್ ನೀಡಿದ್ದರು. ಆದರೂ ಅವರ ಮೇಲೆ ನಾಯಕ ಅವರ ಮೇಲೆ ನಂಬಿಕೆ ಇಟ್ಟು ಚೆಂಡನ್ನು ನೀಡಿದರು. ಓವರ್‌ನ ಮೊದಲ ಎಸೆತ ಡಾಟ್ ಆಗಿತ್ತು. ಬಳಿಕ ಎಸೆದ ಐದು ಎಸೆತಗಳನ್ನು ಸಂಜು ಬೌಂಡರಿ ಗೆರೆಯನ್ನು ದಾಟಿಸುವ ಮೂಲಕ ದಾಖಲೆ ಪುಟಕ್ಕೆ ಎಂಟ್ರಿ ನೀಡಿದರು. ಇವರು ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ದಾಖಲಿಸಿದ ಡೆವಿಡ್ ಮಿಲ್ಲರ್ ಅವರ ದಾಖಲೆಯನ್ನು ಸರಿ ಗಟ್ಟಿದ್ದರು.
ಈ ಬಾರಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಅವರ ಐಪಿಎಲ್ ಫಾರ್ಮ್ ಅಮೋಘವಾಗಿತ್ತು. ಅವರ ಶನಿವಾರ ಆಡಿದ ಧಾಟಿಯನ್ನು ಕಂಡರೆ ಐಪಿಎಲ್‌ನಲ್ಲಿ ಆಡಿದ ಧಾಟಿಯಲ್ಲೇ ಬ್ಯಾಟ್ ಮಾಡಿದಂತೆ ಕಂಡು ಬಂದಿತು. ಇವರು ಕೇವಲ 41 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ ಸಹಾಯದಿಂದ 111 ರನ್ ಬಾರಿಸಿ ಔಟ್ ಆದರು.
ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸಂಜು ಅಮೋಘ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಮೂರನೇ ಪಂದ್ಯಕ್ಕೂ ಮುನ್ನ ಅವರನ್ನು ಕೈ ಬಿಡಬಹುದು ಎಂಬ ಊಹಾಪೋಹಗಳಿಗೆ ಮೈದಾನದಲ್ಲಿ ಉತ್ತರ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications