Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಹುಕಾಲದ ಗೆಳತಿಯನ್ನು ವರಿಸಿದ ಕೇರಳದ ಕ್ರಿಕೆಟರ್ ಸಂಜು ಸ್ಯಾಮ್ಸನ್

Sanju Samson ties the knot with college-mate in Kerala

ತಿರುವನಂತಪುರಂ, ಡಿಸೆಂಬರ್ 23: ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ವಿಶ್ವನಾಥ್ ಸ್ಯಾಮ್ಸನ್ ತನ್ನ ಬಹುಕಾಲದ ಗೆಳತಿಯನ್ನು ವರಿಸಿದ್ದಾರೆ.

ಕೇರಳ ಮೂಲದ 23 ವರ್ಷ ವಯಸ್ಸಿನ ಸಂಜು ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಮದುವೆ ಬಗ್ಗೆ ಘೋಷಿಸಿದ್ದರು. ತನ್ನ ಗೆಳತಿ ಚಾರು ಜತೆಗಿನ ಹಳೆ ಚಿತ್ರವನ್ನು ಹಂಚಿಕೊಂಡು ತಮ್ಮ ಗೆಳೆತನ ಬಗ್ಗೆ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಿರಿಯ ಪತ್ರಕರ್ತ ಬಿ ರಮೇಶ್ ಕುಮಾರ್ ಅವರ ಪುತ್ರಿ ಚಾರುಲತಾರನ್ನು ಸರಳ ಸಮಾರಂಭದಲ್ಲಿ ಸಂಜು ಮದುವೆಯಾಗಿದ್ದಾರೆ. ಮದುವೆ ಸಮಾರಂಭಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮುಂತಾದ ಗಣ್ಯರು ಆಗಮಿಸಿ, ನೂತನ ದಂಪತಿಯನ್ನು ಹರಿಸಿದರು.

ಇಬ್ಬರು ಮಾರ್ ಇವಾನಿಯಾಸ್ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ಎರಡು ಕುಟುಂಬದವರು ಒಪ್ಪಿಗೆ ನೀಡಿದ ಬಳಿಕ ಮದುವೆ ನಿಶ್ಚಯ ಮಾಡಲಾಗಿದೆ. ಚಾರು ಅವರು ಸದ್ಯ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಅಂಡರ್ 19 ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ನೆಚ್ಚಿನ ಶಿಷ್ಯರಲ್ಲಿ ಒಬ್ಬರಾಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ.

Story first published: Sunday, December 23, 2018, 11:07 [IST]
Other articles published on Dec 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+