19ನೇ ಆವೃತ್ತಿಯ ಐಪಿಎಲ್‌ಗೆ ಭರದ ಸಿದ್ದತೆಗಳು ನಡೆದಿವೆ. ಇನ್ನು ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡಬೇಕಿದೆ. ಈ ಮಧ್ಯೆಯೇ ಟ್ರೇಡಿಂಗ್ ಮಾತುಗಳು ಆರಂಭವಾಗಿವೆ. ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರ ಮೇಲೆ ಹಲವು ತಂಡಗಳು ಕಣ್ಣು ನೆಟ್ಟಿವೆ. ಮತ್ತು ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಸಹ ಸಿದ್ಧಮಾಡಿಕೊಂಡಿವೆ. ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ. ಈಗೆ ಬರುತ್ತಿರುವು ಮಾಹಿತಿಗಳು ಬಿಗ್ ಅಪ್‌ಡೇಟ್ ನೀಡಿವೆ.
ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿ ಉತ್ತರಾಧಿಕಾರಿಯ ಹುಡುಕಾಟದಲ್ಲಿದೆ. ಇದೇ ವೇಳೆ ರಾಜಸ್ಥಾ ರಾಯಲ್ಸ್ ನಾಯಕ ಸಂಜು ಸಹ ತಮ್ಮ ತಂಡವನ್ನು ಬಿಟ್ಟು ಬೇರೆ ತಂಡಕ್ಕೆ ಹಾರಲಿದ್ದಾರೆ ಎಂಬ ಸುದ್ದಿ ಸಹ ವ್ಯಾಪಕವಾಗಿ ಹರಿದಾಡುತ್ತಿದೆ. ಇದರ ಲಾಭ ಪಡೆಯಲು ಸಿಎಸ್‌ಕೆ ಸಹ ಪ್ಲ್ಯಾನ್ ಮಾಡಿಕೊಂಡಿದೆ. ಚೆನ್ನೈ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಲಿದೆ ಎಂಬ ಸುದ್ದಿಗಳು ಈಗ ವೇಗವಾಗಿ ಹರಿದಾಡುತ್ತಿವೆ.

ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿಯ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತಂಡವು ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈಗೆ ಬಿಟ್ಟುಕೊಡಲು ತಯಾರಾಗಿದೆ ಎಂದು ತಿಳಿದು ಬಂದಿದೆ. ಆದರೆ ಇದರ ಬದಲಿಗೆ ರಾಜಸ್ಥಾನ ಚೆನ್ನೈ ತಂಡದ ಇಬ್ಬರು ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ವಿನಿಮಯ ಮಾಡಿಕೊಳ್ಳಲು ಸಜ್ಜಾಗಿದೆ. ಆದರೆ ಎರಡೂ ಫ್ರಾಂಚೈಸಿಗಳು ಇದನ್ನು ಇನ್ನು ದೃಢ ಪಡಿಸಿಲ್ಲ.
ರವೀಂದ್ರ ಜಡೇಜಾ ಅವರು ಚೆನ್ನೈ ತಂಡದ ಪರ 2012ರಿಂದ ಆಡುತ್ತಿದ್ದಾರೆ. ತಂಡಕ್ಕೆ ಅಗತ್ಯ ಬಿದ್ದಾಗ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಇವರು ನೆರವಾಗುವ ಪ್ಲೇಯರ್. ಅಲ್ಲದೆ ಇವರ ಫೀಲ್ಡಿಂಗ್‌ನಲ್ಲೂ ಫೇಮಸ್. ಇವರು ಚೆನ್ನೈ ಮೂರು ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಇವರನ್ನು ಕಳೆದ ಬಾರಿ ಹರಾಜಿಗೂ ಮುನ್ನ ಚೆನ್ನೈ 18 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಇನ್ನು ಇವರ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಫಲವಾಗಿಯೇ ಚೆನ್ನೈ 2023ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಫೈನಲ್‌ನಲ್ಲಿ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲೂ ಇವರು 2 ಅರ್ಧಶತಕ ಬಾರಿಸಿ ಮಿಂಚಿದ್ದರು.

ರಾಜಸ್ಥಾನ ರಾಯಲ್ಸ್ ತಂಡದಿಂದ ಹೊರ ಬರುವ ಬಯಕೆಯನ್ನು ಸಂಜು ಸ್ಯಾಮ್ಸನ್ ಸೂಚಿಸಿದ್ದಾರೆ. ಇವರು 2018ರಿಂದ ತಂಡದ ಪರ ಆಡುತ್ತಿದ್ದಾರೆ. 2021ರಲ್ಲಿ ಇವರನ್ನು ನಾಯಕರನ್ನಾಗಿ ತಂಡ ನೇಮಕ ಮಾಡಿತು. ಇವರ ನಾಯಕತ್ವದಲ್ಲಿ ರಾಜಸ್ಥಾನ 2022ರಲ್ಲಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಒಟ್ಟಾರೆ ಐಪಿಎಲ್‌ನಲ್ಲಿ ಆಡಿದ 177 ಪಂದ್ಯಗಳಲ್ಲಿ ಸಂಜು 3 ಶತಕ, 26 ಅರ್ಧಶತಕಗಳ ನೆರವಿನಿಂದ 4704 ರನ್ ಸಿಡಿಸಿದ್ದಾರೆ. ಅಲ್ಲದೆ ಇವರು ತಂಡದ ಪರ ಆರಂಭಿಕರಾಗಿ ಹಾಗೂ ನುರಿತ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.