ರಾಜಸ್ಥಾನ್ ರಾಯಲ್ಸ್‌ಗೆ ಸಂಜು ಸ್ಯಾಮ್ಸನ್ ಗುಡ್‌ಬೈ? ತಂಡ ತೊರೆಯಲು ಅಸಲಿ ಕಾರಣವೇನು?
ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದು ತಿಂಗಳುಗಳು ಕಳೆದಿವೆ. ಎಲ್ಲ ಫ್ರಾಂಚೈಸಿಗಳು ಈಗ ಮುಂದಿನ ಆವೃತ್ತಿಯತ್ತ ಚಿತ್ತ ನೆಟ್ಟಿವೆ. ಈ ವೇಳೆ ಎಲ್ಲರ ಚಿತ್ತ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೇಲೆ ನೆಟ್ಟಿದೆ. ಇವರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ದೊಡ್ಡ ಪ್ರಶ್ನೆಗಳು ಎದ್ದಿವೆ. ಸಂಜು ರಾಜಸ್ಥಾನ ತಂಡದೊಂದಿಗೆ ಬೇರ್ಪಡಿಸಲು ಇಚ್ಛಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಎದ್ದಿವೆ. ಆರ್‌ಆರ್ ತಂಡ ಸಂಜು ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ಬಯಸುತ್ತಿದೆ. ಆದರೆ ಸಂಜು ಸ್ಯಾಮ್ಸನ್ ಇನ್ನು ತಂಡದೊಂದಿಗೆ ಮುಂದಿನ ಐಪಿಎಲ್ ಆವೃತ್ತಿಗಳಲ್ಲಿ ಆಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ರಾಜಸ್ಥಾನ ತಂಡ ತನ್ನೊಂದಿಗೆ ಇರಲು ಇಷ್ಟಪಡದ ಆಟಗಾರರನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಬಯಸುತ್ತದೆಯಾ ಎಂಬ ಪ್ರಶ್ನೆಗಳು ಎದ್ದಿವೆ.

ಒಂದು ವೇಳೆ ಸಂಜು ಸ್ಯಾಮ್ಸನ್ ರಾಜಸ್ಥಾನದಿಂದ ಹೊರ ಹೋಗಲು ಬಯಸಿದ್ದರೆ, ಅವರು ಹರಾಜಿನ ಅಂಗಳಕ್ಕೆ ಬರುತ್ತಾರೋ ಅಥವಾ ಟ್ರೇಡ್ ಆಗುತ್ತಾರೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರಾಜಸ್ಥಾನ ತಂಡದೊಂದಿಗೆ ನಿರ್ವಹಣೆಯ ಭಿನ್ನಾಭಿಪ್ರಾಯಗಳು ಇವೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಹೀಗಾಗಿ ಸಂಜು ತಮ್ಮನ್ನು ಕೈ ಬಿಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಜು ತಂಡವನ್ನು ಬಿಡಲು ಬರುವುದಿಲ್ಲ
ರಾಜಸ್ಥಾನ ತಂಡದೊಂದಿಗೆ ನಾಯಕ ಸಂಜು ಸ್ಯಾಮ್ಸನ್ ಅವರ ಸಂಬಂಧ ಮೊದಲಿನಂತೆ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಸಂಜು ಸ್ವಇಚ್ಛೆಯ ಮೇರೆಗೆ ತಂಡವನ್ನು ತೊರೆಯಲು ಸಾಧ್ಯವಿಲ್ಲ. ಐಪಿಎಲ್ ನಿಯಮಗಳ ಪ್ರಕಾರ ಒಂದು ತಂಡಕ್ಕೆ ಹೋದಲ್ಲಿ, ಅವರು 3 ವರ್ಷಗಳ ಅದೇ ತಂಡದ ಜೊತೆ ಇರಬೇಕಾಗುತ್ತದೆ. ತಂಡ ಹಾಗೂ ಆಟಗಾರ ಬಯಿಸಿದ್ದಾಗ ಮಾತ್ರ ಆಟಗಾರನ ಬಿಡುಗಡೆ ಸಾಧ್ಯ. ಇಲ್ಲದಿದ್ದರೆ ಟ್ರೇಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಈ ನಿಯಮದ ಪ್ರಕಾರ ಸಂಜು 2027ರ ವರೆಗೆ ರಾಜಸ್ಥಾನ ತಂಡದಲ್ಲೇ ಇರುತ್ತಾರೆ.
ಭಿನ್ನಾಭಿಪ್ರಾಯ ಏಕೆ?
ನಾಯಕರಾಗಿರುವ ಸಂಜು ಸ್ಯಾಮ್ಸನ್ ತಮ್ಮ ಬ್ಯಾಟಿಂಗ್ ಕ್ರಮಾಂಕ ನಿರ್ಧರಿಸುವ ತೀರ್ಮಾನವನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ. ಸಂಜು ಆರಂಭಿಕರಾಗಿ ಆಡುವ ಆಸೆಯನ್ನು ಹೊಂದಿದ್ದಾರೆ. ಆದರೆ ಕಳೆದ ಋತುವಿನಲ್ಲಿ ಆರಂಭಿಕರಾಗಿ ಯುವ ಆಟಗಾರ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಿ ಅಬ್ಬರಿಸಿದ್ದರು. ಹೀಗಾಗಿ ಸಂಜು ಅವರಿಗೆ ಆರಂಭಿಕರಾಗಿ ಆಡಿಸುವ ಇರಾದೆಯನ್ನು ಹೊಂದಿಲ್ಲ. ರಾಜಸ್ಥಾನ ತಂಡವನ್ನು ಸೇರಿ ಇದೀಗ 9 ವರ್ಷಗಳು ಕಳೆದಿವೆ. ಚಿಕ್ಕ ವಯಸ್ಸಿನಲ್ಲಿ ಸಂಜು ಸ್ಯಾಮ್ಸನ್ ಈ ತಂಡವನ್ನು ಸೇರಿದ್ದಾರೆ. ಅಲ್ಲದೆ ಆರಂಭದಲ್ಲಿ ಆಟಗಾರನಾಗಿ ಹಾಗೂ ಈಗ ನಾಯಕರಾಗಿ ಬೆಳೆದಿದ್ದಾರೆ. ಹೀಗಾಗಿ ಇವರನ್ನು ಕೈ ಬಿಡುವುದು ಸುಲಭವಲ್ಲ. ಈ ಬಗ್ಗೆ ಮ್ಯಾನೇಜ್ಮೆಂಟ್ ಇನ್ನು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications