Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sanju Samson: ರಾಜಸ್ಥಾನ ರಾಯಲ್ಸ್‌ನ "ಬಾಹುಬಲಿ' ಫಿಟ್

ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿಲ್ಲ. ಇದರ ನಡುವೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಿಹಿ ಸುದ್ದಿ ಬಂದಿದೆ. ರಾಜಸ್ಥಾನ ರಾಯಲ್ಸ್ ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಈಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಅವರು ಟೂರ್ನಿಯ ಉಳಿದ ಪಂದ್ಯಗಳಿಗೆ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಂಗಾಮಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿರುವ ರಿಯಾನ್ ಪರಾಗ್ ಈಗ ಆಟಗಾರನಾಗಿ ಮಾತ್ರ ಆಡಲಿದ್ದಾರೆ.

ಐಪಿಎಲ್‌ 2025 ರಲ್ಲಿ ವಿಕೆಟ್ ಕೀಪಿಂಗ್ ಮಾಡಲು ಸಂಜು ಸ್ಯಾಮ್ಸನ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಿಂದ ಅನುಮೋದನೆ ಪಡೆದಿದ್ದಾರೆ. ಇದರೊಂದಿಗೆ ಅವರು ರಾಜಸ್ಥಾನ ರಾಯಲ್ಸ್ ತಂಡ ನಾಯಕನಾಗಿ ಮರಳಲು ಸಿದ್ಧರಾಗಿದ್ದಾರೆ.

Sanju Samson will lead the Rajasthan Royals team IPL 2025

ಫೆಬ್ರವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಟಿ20 ಸರಣಿಯ ಸಮಯದಲ್ಲಿ ವೇಗದ ಬೌಲರ್ ಜೋಫ್ರಾ ಆರ್ಚರ್ ಎಸೆತದಲ್ಲಿ ಚೆಂಡು ತಗುಲಿ ಸಂಜು ಸ್ಯಾಮ್ಸನ್ ಬಲಗೈಯ ಮಧ್ಯದ ಬೆರಳಿಗೆ ಗಾಯವಾಗಿತ್ತು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶತಕ ಸಿಡಿಸಿದ ನಂತರ ಸ್ಯಾಮ್ಸನ್ ತನ್ನ ತೋಳುಗಳನ್ನು ಪ್ರದರ್ಶಿಸುವ ಮೂಲಕ ಸಂಭ್ರಮಾಚರಣೆ ಮಾಡುತ್ತಾರೆ. ಈ ಕಾರಣಕ್ಕಾಗಿ ಅವರನ್ನು "ಬಾಹುಬಲಿ' ಎಂದೂ ಕರೆಯುತ್ತಾರೆ.

ಆರ್‍‌ಆರ್ ಹೇಳಿದ್ದೇನು?

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಮಾಡಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಯಿಂದ ಅನುಮೋದನೆ ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ತಂಡದ ಮುಂದಿನ ಪಂದ್ಯದಲ್ಲಿ ಅವರು ನಾಯಕನಾಗಿ ಮರಳಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜಸ್ಥಾನ ರಾಯಲ್ಸ್ ತಂಡದ ಮೊದಲ ಮೂರು ಐಪಿಎಲ್ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಬ್ಯಾಟರ್ ಆಗಿ ಆಡಿದರು. ಅವರ ಸ್ಥಾನದಲ್ಲಿ ರಿಯಾನ್ ಪರಾಗ್ ನಾಯಕತ್ವ ವಹಿಸಿಕೊಂಡಿದ್ದರು. ರಿಯಾನ್ ಪರಾಗ್ ನೇತೃತ್ವದಲ್ಲೊ ರಾಜಸ್ಥಾನ ತಂಡ ಮೊದಲ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಅನುಭವಿಸಿತ್ತು. ಈಗ ಏಪ್ರಿಲ್ 5 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ.

ಸಂಜು ಸ್ಯಾಮ್ಸನ್ ದಾಖಲೆ

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಆಧಾರ ಸ್ತಂಭವಾಗಿದ್ದಾರೆ. ಸಂಜು ಸ್ಯಾಮ್ಸನ್ ಒಬ್ಬ ಅನುಭವಿ ಬ್ಯಾಟರ್ ಮಾತ್ರವಲ್ಲದೆ, ನಾಯಕನಾಗಿಯೂ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು 61 ಪಂದ್ಯಗಳಲ್ಲಿ ಮುನ್ನಡೆಸಿ ದಾಖಲೆಯನ್ನು ಹೊಂದಿದ್ದಾರೆ. ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ ತಂಡ 31 ರಲ್ಲಿ ಜಯ, 29 ರಲ್ಲಿ ಸೋಲು ಕಂಡಿದೆ. ಐಪಿಎಲ್‌ನಲ್ಲಿ ಇವರ ಗೆಲುವಿನ ಶೇಕಡಾ ವಾರು 51 ಆಗಿದೆ. ಇನ್ನು ಐಪಿಎಲ್‌ನಲ್ಲಿ ಸಂಜು ಆಡಿದ 167 ಪಂದ್ಯಗಳಲ್ಲಿ 138ರ ಸ್ಟ್ರೈಕ್‌ ರೇಟ್‌ನಲ್ಲಿ 4419 ರನ್‌ ಗಳಿಸಿದ್ದಾರೆ. ಈ ವೇಳೆ ಅವರಯ ಬ್ಯಾಟ್‌ನಿಂದ 25 ಅರ್ಧಶತಕ ಹಾಗೂ 3 ಶತಕಗಳು ಬಂದಿವೆ.

Story first published: Thursday, April 3, 2025, 14:32 [IST]
Other articles published on Apr 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+