ಏಷ್ಯಾಕಪ್‌ಗೂ ಮುನ್ನ ಅಬ್ಬರಿಸಿದ ಸಂಜು ಸ್ಯಾಮ್ಸನ್: ಎದುರಾಳಿಗಳಿಗೆ ನಡುಕ
ಇನ್ನು ಕೆಲವೇ ದಿನಗಳಲ್ಲಿ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದೆ. ಈ ಟೂರ್ನಿಗಾಗಿ ಈಗಾಗಲೇ ಸಿದ್ಧತೆಗಳು ಸಹ ಭರದಿಂದ ಸಾಗಿವೆ. ಭಾರತ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಟೂರ್ನಿಗೆ ಭಾರತ ತಂಡವನ್ನು ಸಹ ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು ಎದುರಾಳಿಗಳನ್ನು ಕಾಡಲು ಸಿದ್ಧವಾಗಿದೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಸ್ಟಾರ್ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಬ್ಬರದ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಏಷ್ಯಾ ಕಪ್‌ಗೆ ತಾವು ಸಿದ್ಧ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಏಷ್ಯಾಕಪ್‌ಗೆ ತಂಡ ಪ್ರಕಟವಾದಾಗ ಮೂರು ಆರಂಭಿಕ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಅವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಈ ನಡುವೆ ಸಂಜು ದೇಶೀಯ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಏರೀಸ್ ಕೊಲ್ಲಂ ಸೈಲರ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಅಬ್ಬರಿಸಿ ಶತಕ ಬಾರಿಸಿದ್ದಾರೆ. ಈ ಮೂಲಕ ತಮ್ಮನ್ನು ತಂಡದ ಸಂಯೋಜನೆಯಲ್ಲಿ ಪರಿಗಣಿಸುವಂತೆ ಮ್ಯಾನೇಜ್ಮೆಂಟ್‌ಗೆ ಸೂಚನೆ ನೀಡಿದ್ದಾರೆ.

ಭಾನುವಾರ ಏರೀಸ್ ಕೊಲ್ಲಂ ಸೈಲರ್ಸ್ ಹಾಗೂ ಕೊಚ್ಚಿ ಬ್ಲ್ಯೂ ಟೈಗರ್ಸ್ ತಂಡಗಳ ನಡುವೆ ಕಾದಾಟ ನಡಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಏರೀಸ್ ಕೊಲ್ಲಂ ಸೈಲರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 236 ರನ್ ಸೇರಿಸಿತು. ತಂಡದ ಪರ ವಿಷ್ಣು ವಿನೋದ್ 3 ಬೌಂಡರಿ, 10 ಸಿಕ್ಸರ್ ಸಹಾಯದಿಂದ 94 ರನ್ ಸಿಡಿಸಿದರು. ನಾಯಕ ಸಚಿನ್ ಬೇಬಿ 6 ಬೌಂಡರಿ, 6 ಸಿಕ್ಸರ್ ಸಹಾಯದಿಂದ 91 ರನ್ ಬಾರಿಸಿ ಮಿಂಚಿದರು.
ಸಂಜು ಸ್ಯಾಮ್ಸನ್ ಅಬ್ಬರದ ಶತಕ
ಗುರಿಯನ್ನು ಬೆನ್ನಟ್ಟಿದ ಕೊಚ್ಚಿ ತಂಡದ ಆರಂಭಿಕರಾದ ಸಂಜು ಸ್ಯಾಮ್ಸನ್ ಹಾಗೂ ವಿನೂಪ್ (11) ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 4.1 ಓವರ್‌ಗಳಲ್ಲಿ 64 ರನ್ ಸೇರಿಸಿತು. ಮೊಹಮ್ಮದ್ ಶಾನು (39) ಸಂಜು ಅವರಿಗೆ ಉತ್ತಮ ಸಾಥ್ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ಆಶೀಕ್ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.

ಆರಂಭಿಕ ಸಂಜು ಸ್ಯಾಮ್ಸನ್ ಆರ್ಭಟ ನಡೆಸಿದರು. ಇವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ತಮ್ಮ ಸ್ಫೋಟಕ ಆಟವನ್ನು ಮುಂದುವರೆಸಿದರು. ಅವರು 41 ಎಸೆತಗಳಲ್ಲಿ ಶತಕ ಗಳಿಸುವ ಸಾಧನೆ ಮಾಡಿದರು. ಸಂಜು ತಮ್ಮ ಶತಕ ಪೂರೈಸುವಾಗ 13 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇವರು ಔಟ್ ಆಗುವಾಗ 14 ಬೌಂಡರಿ, 7 ಸಿಕ್ಸರ್ ನೆರವಿನಿಂದ 121 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications