ಭಾರತ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಸಂಜು ಆಡುವುದಿಲ್ಲ ಎಂಬುದು ಶಿಬಿರಕ್ಕೂ ಮುನ್ನವೇ ತಿಳಿದಿತ್ತು ಎಂದು ವಿಶ್ವನಾಥ್ ಹೇಳಿಕೊಂಡಿದ್ದಾರೆ. ಶಿಬಿರದಲ್ಲಿ ಭಾಗವಹಿಸದ ಇತರ ಆಟಗಾರರೂ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಇದಕ್ಕೆ ಕೆಸಿಎ ಬಳಿ ವಿವರಣೆ ಇದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಚಾಂಪಿಯನ್ ಟ್ರೋಫಿ ಭಾರತ ತಂಡಕ್ಕೆ ತಮ್ಮ ಮಗ ಸಂಜು ಸ್ಯಾಮ್ಸನ್ ಆಯ್ಕೆಯಾಗದ ಬಗ್ಗೆ ಸಂದರ್ಶನವೊಂದರಲ್ಲಿ ವಿಶ್ವನಾಥ್ ಮಾತನಾಡಿದ್ದಾರೆ. ಇದೇ ವೇಳೆ ವಿಶ್ವನಾಥ್ ಅವರು ಕೆಸಿಎ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಸಂಜುಗೂ ಮೊದಲು ಅವರ ಹಿರಿಯ ಮಗ ಸ್ಯಾಲಿ ಸ್ಯಾಮ್ಸನ್ ಕೇರಳದ ಪರವಾಗಿ ಆಡಿದ್ದರು ಎಂದು ವಿಶ್ವನಾಥ್ ತಿಳಿಸಿದ್ದಾರೆ. ಅಣ್ಣ ತಮ್ಮಂದಿರ ನಡುವೆ ತಾರತಮ್ಯವಿದೆ. ಅಂಡರ್-19 ಭಾರತ ತಂಡದ ಪರ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ ಭರವಸೆಯ ಆಟಗಾರ ಎನಿಸಿಕೊಂಡಿದ್ದರು. ನಂತರ ರಣಜಿ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ರಣಜಿ ಟ್ರೋಫಿ ತಂಡಕ್ಕೆ ಆಯ್ಕೆಯಾಗಲಿಲ್ಲ. ಕೇರಳ ಅಂಡರ್-25 ತಂಡಕ್ಕೆ ಸಾಲಿ ಸೇರ್ಪಡೆಗೊಂಡಾಗಲೂ 4 ಪಂದ್ಯಗಳಲ್ಲಿ ಆಡಲು ಅವಕಾಶ ನೀಡಲಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.
ಸಂಜುಗಿಂತ ಮೊದಲು ಭಾರತ ತಂಡಕ್ಕೆ ಸಂಭಾವ್ಯ ಆಟಗಾರ ಎನ್ನಲಾಗಿತ್ತು. ಆದರೆ, ನನ್ನ ಹಿರಿಯ ಮಗನನ್ನು ಏಕೆ ಹೊರಗಿಡಲಾಯಿತು ಎಂಬ ಪ್ರಶ್ನೆಯನ್ನೂ ವಿಶ್ವನಾಥ್ ಎತ್ತಿದ್ದಾರೆ . ಸಂಜು ಅವರನ್ನು ತಂಡದಿಂದ ಕೈಬಿಡಲು ಪ್ರಯತ್ನಿಸಲಾಯಿತು ಎಂದು ಅವರು ಹೇಳಿದ್ದಾರೆ. ಅಲ್ಲದೆ, ರಣಜಿ ಪಂದ್ಯದ ವೇಳೆ ತಮ್ಮ ಮಗನ ಎರಡೂ ಮೊಣಕಾಲುಗಳಿಗೆ ಗಾಯವಾದ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಜೆ ಕೇಳಲು ಕರೆ ಮಾಡಿದ್ದ ವಿಶ್ವನಾಥ್, ಕೆಸಿಎ ಅಧ್ಯಕ್ಷರಾಗಿದ್ದ ಟಿಸಿ ಮ್ಯಾಥ್ಯೂ ಜತೆ ಕೆಲಕಾಲ ವಾಗ್ವಾದ ನಡೆಸಿದರು ಎಂಬ ವಿಚಾರ ಸಂದರ್ಶನದ ವೇಳೆ ತಿಳಿದು ಬಂದಿದೆ.
ನಮ್ಮ ಮಕ್ಕಳಿಂದ ಏನಾದರೂ ತಪ್ಪಾಗಿದ್ದರೆ, ಕೆಸಿಎ ನೇರವಾಗಿ ಸಂಪರ್ಕಿಸಬಹುದಿತ್ತು. ಕೆಸಿಎ ವಿರುದ್ಧ ನಾವು ಯಾವತ್ತೂ ನಿಂತಿಲ್ಲ. ಸಮಸ್ಯೆ ಕೆಲವರಲ್ಲಿದೆ. ನೀವು ಅವರನ್ನು ಸ್ವಾಗತಿಸದಿದ್ದರೂ, ಅದು ಸಮಸ್ಯೆಯಾಗುತ್ತದೆ. ನನಗೆ ಎಲ್ಲರ ಬಗ್ಗೆ ಗೌರವ ಮತ್ತು ಪ್ರೀತಿ ಇದೆ ಎಂದು ಸ್ಯಾಮ್ಸನ್ ವಿಶ್ವನಾಥ್ ನುಡಿದ್ದಾರೆ.
ಈ ಹಿಂದೆ ಸಂಸದ ಶಶಿ ತರೂರ್ ಕೂಡ ಕೆಸಿಎ ಅಧಿಕಾರಿಗಳ ದುರಹಂಕಾರದಿಂದ ಸಂಜು ವೃತ್ತಿಜೀವನಕ್ಕೆ ಧಕ್ಕೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು. ತರೂರ್ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.