Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಮಾಜಿ ತಂಡದ ಪರ ಸಂಜು ಸ್ಯಾಮ್ಸನ್‌ ಕಣಕ್ಕೆ?

ಸಂಜು ಸ್ಯಾಮ್ಸನ್‌ ಟೀಮ್ ಇಂಡಿಯಾದ ಸ್ಟಾರ್ ಆಟಗಾರ. ಏಷ್ಯಾ ಕಪ್‌ ಟಿ20 ಕ್ರಿಕೆಟ್‌ನಲ್ಲಿ ಧಮಾಕೆದಾರ್ ಪ್ರದರ್ಶನ ನೀಡಲು ಎದುರು ನೋಡುತ್ತಿರುವ ಆಟಗಾರ. ಕೇರಳ ಟಿ20 ಲೀಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿರುವ ಸಂಜು, ಏಷ್ಯಾ ಕಪ್‌ನಲ್ಲಿ ಸ್ಥಾನ ಪಡೆದುಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ. ಇವರು ಈಗ ಭಾರೀ ಸುದ್ದಿಯಲ್ಲಿರುವ ಆಟಗಾರ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುವ ಸಂಜು, 2026ರ ಐಪಿಎಲ್‌ನಲ್ಲಿ ಬೇರೆ ತಂಡಗಳ ಪರ ಆಡುವುದನ್ನು ಕಾಣಬಹುದಾಗಿದ್ದು, ಇವರು ಸಿಎಸ್‌ಕೆ, ಕೆಕೆಆರ್ ಅಲ್ಲ ತಮ್ಮ ಹಳೆಯ ತಂಡದೊಂದಿಗೆ ಕಣಕ್ಕೆ ಇಳಿಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಬಾರಿಯ ಐಪಿಎಲ್‌ ಸೀಸನ್‌ ಮುಕ್ತಾಯವಾದ ಬಳಿಕವೇ ಸಂಜು ಸ್ಯಾಮ್ಸನ್‌ ಭಾರೀ ಚರ್ಚೆಯಲ್ಲಿದ್ದ ಆಟಗಾರ. ಇವರು ಮುಂದಿನ ಆವೃತ್ತಿಯ ಲೀಗ್‌ಗೆ ತಂಡವನ್ನು ಬದಲಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಇವರನ್ನು ಅನೇಕ ಫ್ರಾಂಚೈಸಿಗಳು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧವಾಗಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಲ್ಲಿಯವರೆಗೆ ಮುಂದಿದ್ದವು. ಈ ರೇಸ್‌ಗೆ ಈಗ ಮತ್ತೊಂದು ತಂಡ ಸೇರ್ಪಡೆ ಆಗಿದೆ. ಆ ತಂಡ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

Sanju Samson s future in IPL Will he return to Delhi Capitals or join CSK KKR

ಅಂದಹಾಗೆ ಸಂಜು ಸ್ಯಾಮ್ಸನ್‌ ಅವರನ್ನು ಖರೀದಿಸಲು ಈಗ ಮತ್ತೊಂದು ತಂಡ ಮನಸ್ಸು ಮಾಡಿದೆ ಎಂದು ತಿಳಿದು ಬಂದಿದೆ. ರಾಜಸ್ಥಾನ ರಾಯಲ್ಸ್‌ ಐಪಿಎಲ್‌ನಲ್ಲಿ 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾಗ, ಸಂಜು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಸಂಜು ಮತ್ತೆ ಹಳೆಯ ತಂಡವನ್ನು ಸೇರಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರ ಹಿಂದೆ ಬಿದ್ದಿದೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಒಬ್ಬ ನುರಿತ ನಾಯಕ ಹಾಗೂ ಬ್ಯಾಟರ್ ಅವಶ್ಯಕತೆ ಇದೆ.

ರಿಷಭ್ ಪಂತ್‌ ಅವರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಸ್ಥಾನಕ್ಕೆ ಅಕ್ಷರ್ ಪಟೇಲ್ ಅವರನ್ನು ಮ್ಯಾನೇಜ್ಮೆಂಟ್‌ ನೇಮಿಸಿತ್ತು. ಆದರೆ ಇವರು ಐಪಿಎಲ್‌ 2025ರಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಅಲ್ಲದೆ ಮ್ಯಾನೇಜ್ಮೆಂಟ್‌ ಚಿಂತೆಯನ್ನು ಸಹ ಹೆಚ್ಚಿಸಿದ್ದರು. ಸ್ಟಾರ್ ಆಲ್‌ರೌಂಡರ್‌ ಮೇಲೆ ಭರವಸೆ ಇಟ್ಟು ದೊಡ್ಡ ಜವಾಬ್ದಾರಿ ನೀಡಿದಾಗ, ಅಕ್ಷರ್ ಪಟೇಲ್‌ ನಿರಾಸೆ ಅನುಭವಿಸಿದರು. ಇದರಿಂದ ಟೀಮ್ ಮ್ಯಾನೇಜ್ಮೆಂಟ್‌ ಬೇರೆ ನಾಯಕನ ಹುಡುಕಾಟದಲ್ಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಮಾಜಿ ಆಟಗಾರ ಸಂಜು ಸ್ಯಾಮ್ಸನ್‌ ಅವರನ್ನು ಮೆರಳಿ ಗೂಡಿಗೆ ಕರೆದು ಕೊಂಡು ಬರಲು ಪ್ಲ್ಯಾನ್ ಮಾಡುತ್ತಿದೆ.

ದೇಶೀಯ ಟೂರ್ನಿಗಳಲ್ಲಿ ಸಂಜು ಸ್ಯಾಮ್ಸನ್‌ ಅವರು ನೀಡುತ್ತಿರುವ ಅಮೋಘ ಪ್ರದರ್ಶನ, ಇವರತ್ತ ಫ್ರಾಂಚೈಸಿಗಳು ಗಮನ ಹರಿಸುವಂತೆ ಮಾಡಿದೆ. ಇವರು ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ನಾಯಕತ್ವದ ಗುಣಗಳನ್ನು ಸಹ ಹೊಂದಿದ್ದಾರೆ.

Story first published: Monday, September 1, 2025, 15:08 [IST]
Other articles published on Sep 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+