For Quick Alerts
ALLOW NOTIFICATIONS  
For Daily Alerts
 

Sanju Samson: ಸಂಜು ಮೇಲೆ ಬಿತ್ತು ವಿರಾಟ್ ಕೊಹ್ಲಿ ಕರಿ ನೆರಳು: ಹೀಗೆ ಹೇಳಲು ಇದೇ ಕಾರಣ..

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಟಿ20 ಸರಣಿಗಳು ಮುಗಿದಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 4-1ರಿಂದ ಗೆದ್ದು ಕೊಂಡಿದೆ. ಭಾರತ ತಂಡದ ಭರವಸೆಯ ಆಟಗಾರರು ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ವರುಣ್‌ ಚಕ್ರವರ್ತಿ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ, ಅಮೋಘ ಬ್ಯಾಟಿಂಗ್ ನಡೆಸಿ ಮ್ಯಾನೇಜ್ಮೆಂಟ್‌ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಆದರೆ ಇನ್ನೋಬ್ಬ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಅವರ ಬ್ಯಾಟಿಂಗ್‌ ಮೇಲೆ ಪದೇ ಪದೇ ಪ್ರಶ್ನೆಗಳು ಏಳುತ್ತಿವೆ.

ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಆರಂಭ ಆಗುವ ಮುನ್ನ ಸಂಜು ಸ್ಯಾಮ್ಸನ್ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಇದಕ್ಕೆ ಕಾರಣ ಅವರು ದಕ್ಷಿಣ ಆಫ್ರಿಕಾದಲ್ಲಿ ಆಡಿದ ಧಾಟಿ. ಆದರೆ ಇಂಗ್ಲೆಂಡ್‌ ಬೌಲರ್‌ಗಳ ರಣ ತಂತ್ರದ ಮುಂದೆ ಸಂಜು ಸ್ಯಾಮ್ಸನ್‌ ಮಂಡಿ ಯೂರಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಸಂಜು ಒಂದೇ ಒಂದು ಅರ್ಧಶತಕ ಬಾರಿಸದೇ ಟೀಕೆಗೆ ಗುರಿಯಾಗಿದ್ದಾರೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಟೀಕೆಗೆ ಗುರಿಯಾಗುತ್ತಿರುವುದಕ್ಕೆ ಇನ್ನೊಂದು ಕಾರಣ ಶಾರ್ಟ್‌ ಸೆಲೆಕ್ಷನ್‌.

Sanju Samson s Struggles in T20 Series Against England Raise Concerns Over Shot Selection

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟಿ20 ಸರಣಿ ನಡೆಯಿತು. ಈ ವೇಳೆ ಸಂಜು ಸ್ಯಾಮ್ಸನ್‌ ಒಂದೇ ರೀತಿ ಐದು ಬಾರಿ ಔಟ್ ಆಗಿದ್ದಾರೆ. ಇದನ್ನು ಕಂಡು ಇವರು ವಿರಾಟ್‌ ಕೊಹ್ಲಿ ಬೆನ್ನು ಹತ್ತಿದ್ದಾರಾ ಎಂಬ ಸಂಶಯ ಉದ್ಭವಿಸುತ್ತದೆ. ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಾಡಿದ ತಪ್ಪನ್ನೇ ಮಾಡಿ ಔಟ್ ಆಗುತ್ತಿದ್ದರು. ಆಫ್‌ ಸ್ಟಂಪ್‌ ಆಚೆಯ ಚೆಂಡನ್ನು ಎದುರಿಸುವಲ್ಲಿ ವಿಫಲರಾಗಿ ವಿಕೆಟ್‌ ಒಪ್ಪಿಸುತ್ತಿದ್ದರು. ಅದರಂತೆ ಸಂಜು ಸಹ ಇಂಗ್ಲೆಂಡ್ ವಿರುದ್ಧ ಒಂದೇ ತಪ್ಪನ್ನು ಪದೇ ಪದೇ ಮಾಡಿದ್ದಾರೆ.

ಒಂದೇ ರೀತಿ ಔಟ್‌

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್‌ ಐದು ಪಂದ್ಯಗಳಲ್ಲಿ ಒಂದೇ ರೀತಿಯ ಶಾರ್ಟ್ ಪ್ರಯೋಗಿಸಿ ಔಟ್ ಆಗಿದ್ದಾರೆ. ಇವರು ಪುಲ್‌ ಶಾಟ್‌ ಹೊಡೆಯಲು ಹೋಗಿ ಐದು ಪಂದ್ಯಗಳಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಈ ಸರಣಿಯಲ್ಲಿ ಸಂಜು ಸಂಪೂರ್ಣ ವಿಫಲರಾಗಿದ್ದಾರೆ. ಒಟ್ಟಾರೆ ಐದು ಪಂದ್ಯಗಳಲ್ಲಿ ಸಂಜು 51 ರನ್‌ ಸಿಡಸಿ ಟೀಕೆಗೆ ಗುರಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ 16 ಏಕದಿನ ಮತ್ತು 42 ಟಿ20 ಪಂದ್ಯ ಆಡಿದ ಅನುಭವ ಹೊಂದಿದ್ದಾರೆ.

Sanju Samson s Struggles in T20 Series Against England Raise Concerns Over Shot Selection

ವಿರಾಟ್‌ ಸಹ ಇದೇ ರೀತಿ ಔಟ್

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ಸಹ ಒಂದೇ ರೀತಿ ಔಟ್ ಆಗಿದ್ದಾರೆ. ಇವರು 9 ಇನಿಂಗ್ಸ್‌ಗಳನ್ನು ಆಸ್ಟ್ರೇಲಿಯಾ ನೆಲದಲ್ಲಿ ಆಡಿದ್ದಾರೆ. ಈ ವೇಳೆ ಒಂದು ಬಾರಿ ಅಜೇಯರಾಗಿ ಉಳಿದಿದ್ದರು. ಉಳಿದಂತೆ 8 ಇನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಆಫ್‌ ಸ್ಟಂಪ್‌ ಆಚೆಯ ಚೆಂಡನ್ನು ಎದುರಿಸುವಲ್ಲಿ ವಿಫಲರಾಗಿ ವಿಕೆಟ್‌ ಒಪ್ಪಿಸಿದ್ದಾರೆ. ಇವರ ಈ ಆಟಕ್ಕೆ ಟೀಕೆಗಳು ಸಹ ವ್ಯಕ್ತವಾಗಿವೆ.

Story first published: Monday, February 3, 2025, 15:00 [IST]
Other articles published on Feb 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+