For Quick Alerts
ALLOW NOTIFICATIONS  
For Daily Alerts
 

Sanju Samson: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡ್ತಾರಾ ಸಂಜು?

ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ತೆರೆ ಮೆರೆಯ ಕಸರತ್ತು ನಡೆದಿದೆ. ಈ ಟೂರ್ನಿಗೆ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಆಟಗಾರರು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸ್ಟಾರ್ ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಸಹ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಿದ್ದಾರೆ.

ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಓಪನರ್ ಸಂಜು ಸ್ಯಾಮ್ಸನ್‌ ಅವರ ಸ್ಥಾನದ ಮೇಲೆ ಅಪಾಯದ ತುಗುಗತ್ತಿ ನೇತಾಡುತ್ತಿದೆ. ವರ್ಷದ ಬಳಿಕ ತಂಡಕ್ಕೆ ಕಂ ಬ್ಯಾಕ್ ಮಾಡಿರುವ ಶುಭಮನ್ ಗಿಲ್‌ ಆರಂಭಿಕರಾಗಿ ಕಾಣಿಸಿಕೊಳ್ಳುವುದು ಪಕ್ಕಾ ಆದಂತೆ ಆಗಿದೆ. ಹೀಗಾಗಿ ಸಂಜು ಸ್ಯಾಮ್ಸನ್‌ ಯಾವ ಕ್ರಮಾಂಕದಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈಗ ಸಂಜು ಹೊಸ ಕ್ರಮಾಂಕದ ಹುಡುಕಾಟದಲ್ಲಿದ್ದಾರೆ. ಸಂಜು ಸ್ಯಾಮ್ಸನ್‌ ಆರಂಭಿಕರಾಗಿ ಬಿಟ್ಟು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಸೂಕ್ತ ಎಂಬ ಪ್ರಶ್ನೆಗಳಿಗೆ ಸಂಜು ಮೈದಾನದಲ್ಲಿ ಉತ್ತರ ನೀಡಿದ್ದಾರೆ.

Sanjua Samson experiments with new batting position ahead of Asia Cup

ಸದ್ಯ ಭಾರತದಲ್ಲಿ ದೇಶೀಯ ಟಿ20 ಲೀಗ್‌ಗಳ ಅಬ್ಬರ ಜೋರಾಗಿದೆ. ಈ ವೇಳೆ ಹಲವು ರಾಜ್ಯಗಳು ತಮ್ಮದೇ ಟಿ20 ಲೀಗ್‌ಗಳನ್ನು ಆಯೋಜಿಸುತ್ತಿವೆ. ಈ ಲೀಗ್‌ನಲ್ಲಿ ಸಂಜು ಸ್ಯಾಮ್ಸನ್‌ ಅಲೆಪ್ಪಿ ರಿಪ್ಪಲ್ಸ್ ವಿರುದ್ಧ ಆರಂಭಿಕನಾಗಿ ಕಣಕ್ಕೆ ಇಳಿಯಲಿಲ್ಲ. ಆದರೆ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಆದರೆ ಈ ವೇಳೆ ಅವರು ದೊಡ್ಡ ಮ್ಯಾಜಿಕ್ ಏನು ಮಾಡಲಿಲ್ಲ. ಆರಂಭಿಕ ಸ್ಥಾನ ಬಿಟ್ಟು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಂಜು ಮನಸ್ಸು ಮಾಡಿದ್ದಾರೆ.

ಕೊಚ್ಚಿಗೆ ಜಯ

ಅಲೆಪ್ಪಿ ರಿಪ್ಪಲ್ಸ್ ವಿರುದ್ಧ, ಸಂಜು ಸ್ಯಾಮ್ಸನ್ 22 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿದರು. ಇವರು ಈ ಪಂದ್ಯದಲ್ಲಿ ಒಂದೇ ಒಂದು ಬೌಂಡರಿ ಬಾರಿಸಲಿಲ್ಲ. ಇವರಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಜಲಜ್ ಸಕ್ಸೇನಾ ಸಫಲರಾದರು. ಸಂಜು, ಜಲಜ ಎಸೆತದಲ್ಲಿ ಬಿಗ್ ಸ್ಟ್ರೋಕ್‌ ಬಾರಿಸುವಲ್ಲಿ ವಿಫಲರಾಗಿ ಔಟ್ ಆದರು. ಈ ಪಂದ್ಯದಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಮೊದಲು ಬ್ಯಾಟ್ ಮಾಡಿ 183 ರನ್ ಸೇರಿಸಿತು. ತಂಡದ ಪರ ವಿನೂಪ್ ಮನೋಹರನ್ 66 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಲ್ಯಾಪ್ಪಿ ರಿಪ್ಪಲ್ಸ್‌ನ ಪರ ಯಾವೊಬ್ಬ ಬ್ಯಾಟರ್‌ ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಪರಿಣಾಮ ತಂಡ ಸೋಲು ಕಂಡಿತು.

Sanjua Samson experiments with new batting position ahead of Asia Cup

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್‌ ಸೇರಿದಂತೆ ಮೂವರು ಬ್ಯಾಟರ್‌ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಭಿಷೇಕ್‌ ಶರ್ಮಾ, ಶುಭಮನ್‌ ಗಿಲ್‌ ತಂಡದಲ್ಲಿ ಸ್ಥಾನ ಪಡೆದಿರುವ ಇತರೆ ಬ್ಯಾಟರ್‌ಗಳು ಆಗಿದ್ದಾರೆ. ಸಂಜು ಆರಂಭಿಕರಾಗಿ ಕಣಕ್ಕೆ ಇಳಿಯದೇ ಇದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ. ಈ ಎಲ್ಲ ಪ್ರಶ್ನೆಗಳಿಗೆ ಸೆ.10 ರಂದು ಉತ್ತರ ಸಿಗಲಿದೆ.

Story first published: Sunday, August 24, 2025, 11:19 [IST]
Other articles published on Aug 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+